Karnataka election: ಸಮೀಕ್ಷೆಗಳು ಕಾಂಗ್ರೆಸ್‌ಗೆ ಜೈ ಎಂದರೂ, ಬಿಜೆಪಿ ಫಲಿತಾಂಶ ಬದಲಿಸಬಹುದು ಹೇಗೆ ಗೊತ್ತೆ?

ಬೆಂಗಳೂರು, ಮೇ. 03: ಕರ್ನಾಟಕ ಚುನಾವಣಾ ಪ್ರಚಾರದ ಅಂತ್ಯಕ್ಕೆ ಇನ್ನು ಐದು ದಿನಗಳು ಬಾಕಿಯಿದ್ದು, ಮೇ 10ಕ್ಕೆ ಚುನಾವಣೆ ನಡೆಯಲಿದೆ. ರಾಜ್ಯದ ಚುನಾವಣಾ ಇತಿಹಾಸದಲ್ಲಿ ಕಳೆದ 38 ವರ್ಷಗಳಲ್ಲಿ ಯಾವುದೇ ಆಡಳಿತ ಪಕ್ಷಗಳು ತನ್ನ ಅಧಿಕಾರವನ್ನು ಉಳಿಸಿಕೊಂಡಿಲ್ಲ. ಇಂತಹ ಸ್ಥಿತಿಯಲ್ಲಿ ಆಡಳಿತರೂಢ ಬಿಜೆಪಿಗೆ ಅಧಿಕಾರ ಹಿಡಿಯುವುದು ದೊಡ್ಡ ಸವಾಲಿನ ಕೆಲಸವಾಗಿದೆ.

ಈಗಾಗಲೇ ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಬಹುಮತದತ್ತ ದಾಪುಗಾಲಿಡುತ್ತಿದೆ ಎಂದು ಸೂಚಿಸಿದ್ದರೂ, ಇದು ಚುನಾವಣಾ ಕಣದ ನೈಜ ಪರಿಸ್ಥಿತಿಯ ನಿಖರವಾದ ಚಿತ್ರಣವಲ್ಲ ಎನ್ನಬಹುದು. ಬಿಜೆಪಿಯ ಕೊನೆಯ ದಿನಗಳಲ್ಲಿ ನಡೆಸುವ ಮತದಾರರ ಸಂಪರ್ಕ ಮತ್ತು ಬೂತ್ ನಿರ್ವಹಣೆಯು ಕಾಂಗ್ರೆಸ್‌ಗಿಂತ ಉತ್ತಮವಾಗಿದೆ ಎಂದು ಹಿಂದಿನ ಚುನಾವಣೆಗಳಲ್ಲಿ ಹಲವಾರು ನಿದರ್ಶನಗಳು ತೋರಿಸಿವೆ.

karnataka Poll 2023: Here Are The Five Factors How BJP Can Alter the Poll Results

ಕರ್ನಾಟಕದಲ್ಲಿ ಯಾವುದೇ ಮುಖ್ಯಮಂತ್ರಿಗಳು ಸತತವಾಗಿ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ, ಬಿಜೆಪಿ ವಿರುದ್ಧದ ಸಮೀಕ್ಷೆಗಳ ಸಾಧ್ಯತೆಗಳು ಕಂಡುಬಂದರೂ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಹಿಂದೆ ಸಮೀಕ್ಷೆಗಳು ತ್ರಿಪುರಾ ಮತ್ತು ಗೋವಾ ಎರಡರಲ್ಲೂ ಬಿಜೆಪಿಗೆ ಗೆಲುವು ಕಷ್ಟವಾಗಲಿದೆ ಎಂದಿದ್ದವು, ಆದರೆ ಬಿಜೆಪಿ ಸ್ಪಷ್ಟ ಬಹುಮತವನ್ನು ಗಳಿಸಿತ್ತು.

*ಈ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶಗಳನ್ನು ಬದಲಾಯಿಸಬಹುದಾದ ಐದು ಅಂಶಗಳು ಇಲ್ಲಿವೆ*

1. ಮೋದಿ ಮೇನಿಯಾ

ಬಿಜೆಪಿಯ ದೊಡ್ಡ ಸ್ಟಾರ್ ಪ್ರಚಾರಕ ರಂದರೆ ಅದು ಪ್ರಧಾನಿ ನರೇಂದ್ರ ಮೋದಿ. ಇವರು ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ತಮ್ಮ ಪ್ರಚಾರವನ್ನು ಹೆಚ್ಚಿಸಿದ್ದಾರೆ. ಮತದಾರರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದು, ಡಬಲ್ ಇಂಜಿನ್ ಸರ್ಕಾರ್‌ಗೆ ಮತ ಚಲಾಯಿಸುವಂತೆ ವಿನಂತಿಸಿದ್ದಾರೆ. ಮಂಗಳವಾರ ಹೊಸಪೇಟೆಯಲ್ಲಿ ಮತದಾರರು ತಮ್ಮನ್ನು ಬೆಂಬಲಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಲು ವಿಶೇಷವಾಗಿ ಮನವಿ ಮಾಡಿದ್ದಾರೆ. ತಮ್ಮ ಭಾಷಣವನ್ನು ಕನ್ನಡದಲ್ಲಿ ಭಾಷಾಂತರಿಸುತ್ತಿದ್ದ ಪಕ್ಷದ ಕಾರ್ಯಕರ್ತರ ಬೆನ್ನು ತಟ್ಟುವ ಇಂಗಿತ ವ್ಯಕ್ತಪಡಿಸಿದರು.

karnataka Poll 2023: Here Are The Five Factors How BJP Can Alter the Poll Results

"ರಾಜ್ಯದಲ್ಲಿ ಪ್ರಧಾನಿಯವರ ನಿರಂತರ ಉಪಸ್ಥಿತಿಯು ಪ್ರತಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ಅವರು ನಮ್ಮೊಂದಿಗೆ ಮಾತನಾಡುತ್ತಿರುವಂತೆ ತೋರುವ ಕಾರಣ ಖಂಡಿತವಾಗಿಯೂ ಜನರ ಮನಸ್ಥಿತಿಯಲ್ಲಿ ಏರುಪೇರು ಇದೆ" ಎಂದು ಚಿತ್ರದುರ್ಗದ ಪಕ್ಷದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಧಾನಿ ಪ್ರಚಾರಕ್ಕೆ ಒತ್ತು ನೀಡಿದ್ದು, ಟಿಕೆಟ್ ಸಿಗದ ಪಕ್ಷದ ಮುಖಂಡರ ದೂರಿನ ಬಗ್ಗೆಯೂ ಗಮನ ಸೆಳೆದಿದ್ದಾರೆ.

ಇದೀಗ ಶುಕ್ರವಾರದಿಂದ ಭಾನುವಾರದವರೆಗೆ ರಾಜ್ಯದಲ್ಲಿ ಬೀಡುಬಿಟ್ಟು, ಬಳ್ಳಾರಿ, ಶಿವಮೊಗ್ಗ, ಬಾದಾಮಿ, ನಂಜನಗೂಡು ಪ್ರಮುಖ ಜಿಲ್ಲೆಗಳಲ್ಲಿ ಸಂಚರಿಸಿ ಬೆಂಗಳೂರಿನಲ್ಲಿ ಅದ್ಧೂರಿ ಸಮಾವೇಶ ನಡೆಸುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಮೋದಿ ಮೇನಿಯಾ ಮತದಾರರ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಮೋದಿ ಸುಮಾರು 53,000 ಬೂತ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

2. ಮತ ಹಂಚಿಕೆ ಮತ್ತು ಸೀಟುಗಳು

ಕರ್ನಾಟಕದ ಚುನಾವಣಾ ಫಲಿತಾಂಶಗಳಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶಗಳಲ್ಲಿ ಜನಸಂಖ್ಯಾಶಾಸ್ತ್ರವ ಕೂಡ ಮುಖ್ಯವಾದದ್ದು. ಬಿಜೆಪಿಯು ರಾಜ್ಯಾದ್ಯಂತ ಹರಡಿರುವ ಕಾಂಗ್ರೆಸ್‌ಗಿಂತ ಹೆಚ್ಚಿನ ಮತ ಪಾಲನ್ನು ಹೊಂದಿರಲಿಲ್ಲ. ಆದರೆ ಬಿಜೆಪಿಯು ಅನೇಕ ನಿರ್ದಿಷ್ಟ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ. ಇದು ಅದಕ್ಕೆ ಲಾಭದಾಯಕ ಅಂಶವಾಗಿದೆ. 1989 ರಿಂದ ರಾಜ್ಯದಲ್ಲಿ ಪಕ್ಷದ ಮತ ಗಳಿಕೆ ಮತ್ತು ಲೆಕ್ಕಾಚಾರವು ಸ್ಥಿರವಾಗಿ ಹೆಚ್ಚುತ್ತಿದೆ.

karnataka Poll 2023: Here Are The Five Factors How BJP Can Alter the Poll Results

ಬಿಜೆಪಿಯು ಹೆಚ್ಚು ಉತ್ತಮವಾದ ಸೀಟು ಹಂಚಿಕೆ ಮತ್ತು ಮತ ಪಾಲು ಅನುಪಾತವನ್ನು ಹೊಂದಿದೆ. 2013 ರಲ್ಲಿ ಮತಗಳು ಗಮನಾರ್ಹವಾಗಿ ಕಡಿಮೆಯಾಗಿರುವುದು ಹೊರತುಪಡಿಸಿ ಮತ ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಮುಂದಿದೆ.

3. ಜಾತಿ ಲೆಕ್ಕಾಚಾರ

ರಾಜ್ಯದಲ್ಲಿ ಬಿಜೆಪಿ ತನ್ನ ಟಿಕೆಟ್ ಹಂಚಿಕೆಯಲ್ಲಿ ಜಾತಿಯನ್ನು ಕೇಂದ್ರವಾಗಿಟ್ಟುಕೊಂಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವದಿಂದ ರಾಜ್ಯದಲ್ಲಿ ಎಸ್‌ಸಿ (ಎಡ) ಮತ್ತು ಎಸ್‌ಸಿ (ಬಲ) ಎರಡೂ ಗುಂಪುಗಳಲ್ಲಿ ಬಲವರ್ಧನೆಯ ಆತಂಕವಿದೆ. ಎಸ್‌ಟಿ ಸಮುದಾಯಗಳಲ್ಲಿ ಕೆಲವು ಅಸಮಾಧಾನವಿದೆ. ಆದರೆ ರಾಜ್ಯ ಸರ್ಕಾರವು ಘೋಷಿಸಿದ ಒಳ ಮೀಸಲಾತಿಯಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಇದೆ.

ಹೆಚ್ಚುವರಿಯಾಗಿ, ಪಕ್ಷವು ತನ್ನ ಲಿಂಗಾಯತ ಮತದಾರರ ನೆಲೆಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಸಲುವಾಗಿ ಹೆಚ್ಚಿನ ಪ್ರಯತ್ನವನ್ನು ಮಾಡಿದೆ. ಕೇಂದ್ರ ನಾಯಕತ್ವವು ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಿಸಿತು. ಲಿಂಗಾಯತ ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಿಸಿತು, ಜೊತೆಗೆ ರಾಜ್ಯದ ಮತ್ತೊಂದು ಪ್ರಬಲ ಜಾತಿಯಾದ ಒಕ್ಕಲಿಗರಿಗೂ ಮೀಸಲಾತಿ ಹೆಚ್ಚಿಸಿದೆ.

ರಾಜ್ಯದಲ್ಲಿ ಬಿಜೆಪಿ ಯ ಪ್ತಮುಖ ಜನನಾಯಕ ಯಡಿಯೂರಪ್ಪನವರು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷಕ್ಕೆ ಮತ ನೀಡುವಂತೆ ಕೇಳುತ್ತಿದ್ದಾರೆ. ಕಳೆದ ಮೂರು ವಾರಗಳಲ್ಲಿ ಅವರು 18 ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಯಡಿಯೂರಪ್ಪ ಮತ್ತು ಪ್ರಧಾನ ಮಂತ್ರಿಯ ವರ್ಚಸ್ಸು, ಹಳೇ ಮೈಸೂರು ಪ್ರದೇಶದಲ್ಲಿ ವಿಸ್ತರಿಸಿದ ಬಿಜೆಪಿ ಮತ್ತು ಬಿಜೆಪಿಯ ಮತದಾರರ ಸಂಪರ್ಕದ ಅಂಶಗಳು ಬಿಜೆಪಿ ಗೆಲುವಿಗೆ ಪೂರಕವಾಗಿವೆ.

4. ಸಮೀಕ್ಷೆಗಳ ನಿರ್ವಹಣೆ

ಕರ್ನಾಟಕದಲ್ಲಿ ಕೇಂದ್ರ ಬಿಜೆಪಿ ನಾಯಕರಿಗೆ ನಿರ್ದಿಷ್ಟ ಕಾರ್ಯಗಳನ್ನು ನೀಡಲಾಗಿದೆ. ಬಿಜೆಪಿಗೆ ಕಷ್ಟಕರವಾದ ಸ್ಥಾನಗಳಲ್ಲಿ ಬೀಡುಬಿಟ್ಟಿರುವ ಅನೇಕ ಸಂಸದರು ಭಾರೀ ಪ್ರಚಾರ ಕೈಗೊಂಡಿದ್ದಾರೆ. ರಾಜ್ಯದ ಒಟ್ಟು 224 ವಿಧಾನಸಭಾ ಸ್ಥಾನಗಳಲ್ಲಿ 28 ಸ್ಥಾನಗಳನ್ನು ಹೊಂದಿರುವ ಬೆಂಗಳೂರು ಮತ್ತು 18 ಸ್ಥಾನಗಳನ್ನು ಹೊಂದಿರುವ ಬೆಳಗಾವಿಯ ಮೇಲೆ ಪಕ್ಷವು ಹೆಚ್ಚು ಗಮನಹರಿಸಿದೆ.

ಹಳೇ ಮೈಸೂರಿನಿಂದ ಪ್ರಚಾರ ಆರಂಭಿಸಿದ ಪ್ರಧಾನಿಯ ಹೊರತಾಗಿ, ಕಳೆದ 70 ದಿನಗಳಲ್ಲಿ ಈಗಾಗಲೇ 20 ಬಾರಿ ರಾಜ್ಯಕ್ಕೆ ಬಂದಿರುವ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಮತ್ತು ಉತ್ತರ ಮಧ್ಯ ಕರ್ನಾಟಕದ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಬಳ್ಳಾರಿ, ದಾವಣಗೆರೆ, ಕೊಪ್ಪಳ, ಬಿಜಾಪುರ, ಬಾಗಲಕೋಟೆ, ಹಾವೇರಿ, ಗದಗ ಮತ್ತು ಧಾರವಾಡ ಉತ್ತರ ಮತ್ತು ಉತ್ತರ ಮಧ್ಯ ಜಿಲ್ಲೆಗಳನ್ನು ಗೆಲ್ಲಲು ತಂತ್ರ ಹೆಣೆದಿದೆ.

5. ಭಜರಂಗದಳ ನಿಷೇಧ ವಿವಾದ

ಕರ್ನಾಟಕವು ಹಿಜಾಬ್ ನಿಷೇಧ, ಆಜಾನ್ ಕುರಿತ ರಾಜಕೀಯ ಹೋರಾಟ ಮತ್ತು ಮುಸ್ಲಿಂ ಮಾರಾಟಗಾರರಿಗೆ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುವ ವಿಷಯಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿದ್ದರೆ, ಬಿಜೆಪಿಯು ಸ್ಥಳೀಯ ಜಾತಿ ಲೆಕ್ಕಾಚಾರವನ್ನು ಕಾರ್ಯತಂತ್ರವಾಗಿ ಬಳಸಿದೆ, ರಾಜ್ಯದಲ್ಲಿ ಹಿಂದುತ್ವ ತನ್ನ ಮಿತಿಗಳನ್ನು ಹೊಂದಿದೆ ಎಂದು ಚೆನ್ನಾಗಿ ತಿಳಿದಿದ್ದಾರೆ.

ಆದರೆ ಬಜರಂಗದಳವನ್ನು ನಿಷೇಧಿಸಬೇಕು ಎಂಬ ಕಾಂಗ್ರೆಸ್ ಪ್ರಣಾಳಿಕೆ ಮತ್ತು ಅದನ್ನು ಈಗ ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಹೋಲಿಸುವುದು ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರಲ್ಲಿ ಆಕ್ರೋಶ ತುಂಬಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಬುಧವಾರ, ಕರಾವಳಿ ಕರ್ನಾಟಕದಲ್ಲಿ ಪ್ರಧಾನಿ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ 'ಬಜರಂಗಬಲಿ ಕಿ ಜೈ' ಎಂದು ಘೋಷಣೆ ಕೂಗಿದ್ದು ಸಭಿಕರಲ್ಲಿ ಭಾರಿ ಹುರುಪು ತುಂಬಿದೆ. ಈ ವಿಷಯ ಬಿಜೆಪಿಯ ಕೊನೆಯ ಹಂತದ ಪ್ರಚಾರಕ್ಕೆ ಪ್ರಮುಖ ಅಂಶವಾಗಲಿದೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+