"ಸಿಎಂ ಕುರ್ಚಿಯ ಒಪ್ಪಂದ ಡಿಸೆಂಬರ್‌ ವೇಳೆಗೆ ಮುಗಿಯುತ್ತೆ"

ರಾಜ್ಯ ರಾಜಕಾರಣಿದಲ್ಲಿ ಇದೇ ವರ್ಷ ಭಾರೀ ಬದಲಾವಣೆಯಾಗುತ್ತೆ ಅನ್ನೋ ಭವಿಷ್ಯವಾಣಿಗಳು ಹಲವು ತಿಂಗಳಿಂದ ಕೇಳಿಬರುತ್ತಲೇ ಇದೆ. ಕೆಲವರು ಸೆಪ್ಟೆಂಬರ್‌ನಲ್ಲೇ ಕ್ರಾಂತಿಯಾಗುತ್ತೆ ಎಂದೆಲ್ಲ ಹೇಳುತ್ತಿದ್ದರು. ಅದರಲ್ಲೂ ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಇದೇ ವರ್ಷ ಸಿಎಂ ಬದಲಾಗ್ತಾರೆ ಎಂದೂ ಭವಿಷ್ಯ ನುಡಿದಿದ್ದಾರೆ. ಇದೀಗ ನವೆಂಬರ್‌-ಡಿಸೆಂಬರ್‌ ವೇಳೆಗೆ ಸಿಎಂ ಕುರ್ಚಿಯ ಒಪ್ಪಂದ ಮುಗಿಯುತ್ತಿದ್ದು, ಎರಡೂವರೆ ವರ್ಷಗಳ ಬಳಿಕ ಸಿಎಂ ಕುರ್ಚಿ ಬಿಟ್ಟುಕೊಡುವ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ನಡುವೆ ಸಿಎಂ ಕುರ್ಚಿಯ ವಿಚಾರವಾಗಿ ಒಪ್ಪಂದವಾಗಿದೆ ಎಂಬ ವಿಚಾರ ಚರ್ಚೆಯಾಗುತ್ತಲೇ ಇದೆ. ಆದರೆ ಹೈಕಮಾಂಡ್‌ ಇಂತಹ ಹೇಳಿಕೆಗಳು ಯಾರೂ ನೀಡಬಾರದು ಎಂದು ಖಡಕ್‌ ಸೂಚನೆ ಕೊಟ್ಟ ನಂತರ ವಿಚಾರ ಸೈಲೆಂಟ್‌ ಆಗಿತ್ತು. ಈ ವರ್ಷ ಮುಗಿಯಲು ಇನ್ನೇನು ಮೂರು ತಿಂಗಳಷ್ಟೇ ಬಾಕಿ ಇದ್ದು, ಇದೇ ವೇಳೆಗೆ ಸಿಎಂ ಕುರ್ಚಿಯ ಒಪ್ಪಂದ ಮುಗಿಯಲಿದೆ ಎಂಬ ಹೊಸ ಬಾಂಬ್‌ ಅನ್ನು ಬಿಜೆಪಿ ಸಿಡಿಸಿದೆ.

karnataka-politics-cm-chair-agreement-bjp-targets-siddaramaiah-caste-census

ರಾಜ್ಯದಲ್ಲಿ ಜಾತಿಗಣತಿಯ ಮೇಲಾಟ ಆರಂಭವಾಗಿದೆ. ಗಣತಿದಾರರಿಗೆ ಸರಿಯಾದ ಮಾರ್ಗದರ್ಶನ, ತರಬೇತಿ ನೀಡದೆ ತರಾತುರಿಯಲ್ಲಿ ಸಮೀಕ್ಷೆ ನಡೆಸುವಂತೆ ಕಾಂಗ್ರೆಸ್‌ ಸರ್ಕಾರ ಆದೇಶ ನೀಡಿದೆ. ಇದರಿಂದ ಖಂಡಿತವಾಗಿಯೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಪರಿಪೂರ್ಣವಾಗದು. ಇದು ಈ ಹಿಂದೆ ಸ್ಟಿಕ್ಕರ್‌ ಅಂಟಿಸುವ ಅಭಿಯಾನದ ಮುಂದುವರೆದ ಭಾಗವಾಗಲಿದೆ ಎಂದು ಕಾಂಗ್ರೆಸ್‌ ಬಗ್ಗೆ ಎಕ್ಸ್‌ ಖಾತೆಯಲ್ಲಿ ವ್ಯಂಗ್ಯವಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಷ್ಟೊಂದು ತರಾತುರಿ ನಡೆಸುವುದರ ಹಿಂದೆ ಕುರ್ಚಿ ರಾಜಕೀಯವಿದೆ. ನವೆಂಬರ್‌ - ಡಿಸೆಂಬರ್‌ ವೇಳೆಗೆ ಸಿಎಂ ಕುರ್ಚಿಯ ಒಪ್ಪಂದ ಮುಗಿಯುತ್ತಿದೆ. ಎರಡೂವರೆ ವರ್ಷಗಳ ಬಳಿಕ ಸಿಎಂ ಕುರ್ಚಿ ಬಿಟ್ಟುಕೊಡುವ ಬಗ್ಗೆ ವಾಗ್ದಾನಗಳು ನಡೆದಿದ್ದು, ವಾಯಿದೆ ಹತ್ತಿರ ಬರುತ್ತಿದ್ದಂತೆ ವಿಚಲಿತರಾಗಿರುವ ಮುಖ್ಯಮಂತ್ರಿಗಳು ಜಾತಿಗಣತಿಯ ಹಿಂದೆ ಬಿದ್ದಿದ್ದಾರೆ. ಈ ಸಮೀಕ್ಷೆಯಿಂದ ಕುರ್ಚಿ ಉಳಿಸಬಹುದೇ ಹೊರತು, ಯಾವುದೇ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದೆ.

ಹಿಂದೂ ಧರ್ಮ ಛಿದ್ರಗೊಳಿಸುವ ಹುನ್ನಾರ

ಜಾತಿಗಣತಿ ನೆಪದಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತಿರುವ ಸಿಎಂ ಸಿದ್ದರಾಮಯ್ಯನವರು ಹಿಂದೂ ಧರ್ಮದ ಜಾತಿಗಳ ಹೆಸರೊಂದಿಗೆ 'ಕ್ರಿಶ್ಚಿಯನ್' ಸೇರಿಸುವ ಮೂಲಕ ಹಿಂದೂಗಳ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದೂ ಬಿಜೆಪಿ ಆರೋಪಿಸಿದೆ. ಹಿಂದೂ ಜಾತಿಗಳ ಜನರನ್ನು ಕುರುಬ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ವಾಲ್ಮೀಕಿ ಕ್ರಿಶ್ಚಿಯನ್‌, ಜಂಗಮ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌, ಬ್ರಾಹ್ಮಣ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ನಾಯಕ ಕ್ರಿಶ್ಚಿಯನ್‌ ಹೀಗೆ "ಹಿಂದೂ ಧರ್ಮಿಯರನ್ನು" ಛಿದ್ರ ಛಿದ್ರಗೊಳಿಸಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುವ ಹುನ್ನಾರ ರೂಪಿಸಿದಂತಿದೆ ಹಿಂದೂ ವಿರೋಧಿ ಸಿದ್ದರಾಮಯ್ಯನವರು ಎಂದು ಬಿಜೆಪಿ ಆರೋಪ ಮಾಡಿದೆ.

ಸ್ವಾರ್ಥದ ಲಾಭಕ್ಕಾಗಿ, ಯಾರದ್ದೋ ದಾಖಲೆ ಮುರಿಯುವುದಕ್ಕಾಗಿ ಜಾತಿ-ಜಾತಿಗಳ ನಡುವೆ ಮತ್ತು ಧರ್ಮ-ಧರ್ಮಗಳ ನಡುವೆ ಬೆಂಕಿ ಹಾಕುವ ದುರ್ಬುದ್ಧಿ ಬಿಡಿ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಮಾಹಿತಿ ಸಂಗ್ರಹಿಸುವ ನೆಪದಲ್ಲಿ ಹಿಂದೂ ಸಮಾಜ ಒಡೆಯುವುದು ಬಿಡಿ. ಹಾಗೇ ತಾವು ಕ್ರಿಶ್ಚಿಯನ್‌ ಧರ್ಮದ ಮತ ಪ್ರಚಾರಕರಲ್ಲ, ಬದಲಿಗೆ ರಾಜ್ಯದ ಸಿಎಂ ಎಂಬುದು ತಲೆಯಲ್ಲಿ ಇಟ್ಟುಕೊಂಡಿರಿ ಎಂದು ಕಿವಿಮಾತು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+