ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕುಮಾರಸ್ವಾಮಿ
Recommended Video
ಬೆಂಗಳೂರು, ಜುಲೈ 23: ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಆರು ಗಂಟೆಯಿಂದ ಅನ್ವಯವಾಗುವಂತೆ 48 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ವೇಳೆ ಬಾರ್, ಪಬ್‌ಗಳನ್ನು ತೆರೆಯುವಂತಿಲ್ಲ. ನಿಷೇಧಾಜ್ಞೆ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸದನದಲ್ಲಿ ಅನೇಕ ಚರ್ಚೆಗಳು ನಡೆದವು. ಸುಪ್ರೀಂಕೋರ್ಟ್‌ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆಗೆ ಬರಬೇಕಿದ್ದರಿಂದ ಎಲ್ಲರ ಗಮನ ಅತ್ತ ಇತ್ತು. ಆದರೆ, ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಅದರ ನಡುವೆ ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೆ ಜವಾಬ್ದಾರಿಯನ್ನೂ ಹೊರಿಸಿದೆ.
ಚರ್ಚೆ,ಸಿಟ್ಟು,ಇವತ್ತೇ ಕಡೆ, ಎಲ್ಲವೂ ಮುಗಿಯುತ್ತದೆ: ರಮೇಶ್ ಕುಮಾರ್
ಮಂಗಳವಾರ ಸಂಜೆ ಆರು ಗಂಟೆ ಒಳಗೆ ವಿಶ್ವಾಸಮತ ಯಾಚನೆ ನಡೆಸುವುದಾಗಿ ಸ್ಪೀಕರ್ ಸೋಮವಾರ ತಿಳಿಸಿದ್ದಾರೆ. ಹಾಗಾಗಿ ಇಂದೇ ವಿಶ್ವಾಸಮತ ಯಾಚನೆ ನಡೆಯಲಿದೆ ಎಂದು ರಮೇಶ್ ಕುಮಾರ್ ಅವರ ಪರ ವಕೀಲ ಕೋರ್ಟ್‌ಗೆ ತಿಳಿಸಿದ್ದರು.

ಅತೃಪ್ತ ಶಾಸಕರು ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿತೇಶ್ ಅಪಾರ್ಟ್‌ಮೆಂಟ್‌ನಲ್ಲಿ ಇದ್ದಾರೆ ಎಂಬ ಸುದ್ದಿ ತಿಳಿದು ಕಾಂಗ್ರೆಸ್ ಕಾರ್ಯಕರ್ತರು ಅಪಾರ್ಟ್‌ಮೆಂಟ್‌ಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಬಿಜೆಪಿ ಕಾರ್ಯಕರ್ತರು ಸಹ ಅಲ್ಲಿ ಸೇರಿಕೊಂಡಿದ್ದರು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಭಾರಿ ಗಲಾಟೆ ನಡೆಯಿತು.
ಪ್ರಜಾಪ್ರಭುತ್ವಕ್ಕೆ ತಾತ್ಕಾಲಿಕ ಸೋಲು.
— Karnataka Congress (@INCKarnataka) July 23, 2019
ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಆರ್ ಎಸ್ಎಸ್/ಬಿಜೆಪಿಯವರ ಸಂಚಿನಿಂದ ಕರ್ನಾಟಕದ ಸೋಲು.












Click it and Unblock the Notifications