ದಿಕ್ಕುತಪ್ಪಿದ ತನಿಖೆ : ಸುಪ್ರೀಂಗೆ ಕಲ್ಬುರ್ಗಿ ಹೆಂಡತಿ ಮೊರೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ವಿಶೇಷ ತನಿಖಾ ತಂಡದಿಂದ ಸಂಶೋಧಕ- ವಿಚಾರವಾದಿ ಎಂ.ಎಂ.ಕಲ್ಬುರ್ಗಿ ಹತ್ಯೆಯ ತನಿಖೆ ಆಗಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ಸಿಬಿಐಗೆ ನೋಟಿಸ್ ನೀಡಲಾಗಿದೆ.

ವಿಶೇಷ ತನಿಖಾ ತಂಡದಿಂದ ಹತ್ಯೆಯ ತನಿಖೆಯಾಗಬೇಕು ಎಂದು ಕಲ್ಬುರ್ಗಿ ಅವರ ಪತ್ನಿ ಉಮಾದೇವಿ ಅರ್ಜಿ ಹಾಕಿದ್ದರು. ಹತ್ಯೆಯನ್ನು ಮಾಡಿದ ರೀತಿಯ ಬಗ್ಗೆ ಪ್ರಸ್ತಾವ ಮಾಡಿದ್ದ ಅವರು, ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್ ಮತ್ತು ನರೇಂದ್ರ ಪನ್ಸಾರೆ ಅವರನ್ನು ಹತ್ಯೆ ಮಾಡಿದ ಮಾದರಿಯಲ್ಲೇ ಕಲ್ಬುರ್ಗಿ ಅವರನ್ನೂ ಕೊಲ್ಲಲಾಗಿದೆ. ಆದ್ದರಿಂದ ಮೂರು ಪ್ರಕರಣದ ತನಿಖೆಯನ್ನು ಒಟ್ಟಾಗಿ ಕೈಗೊಳ್ಳಬೇಕು ಎಂದಿದ್ದರು.

ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣ: ಸುಪ್ರೀಂ ಮೆಟ್ಟಿಲೇರಿದ ಕುಟುಂಬಸ್ಥರು

ಕರ್ನಾಟಕ ಪೊಲೀಸರಿಂದ ಹತ್ಯೆಯ ತನಿಖೆ ಬಗ್ಗೆ ಭರವಸೆ ಇಲ್ಲ. ಮೂವರನ್ನೂ ಒಂದೇ ಸಂಘಟನೆಗೆ ಸೇರಿದವರೇ ಕೊಲೆ ಮಾಡಿದ್ದಾರೆ. ಈ ಮೂವರನ್ನೂ ಹತ್ಯೆ ಮಾಡಿದವರು ಕೂಡ ಕೊಲೆಗಾರರು ಅವರೇ. ಆದ್ದರಿಂದ ಮೂರು ಪ್ರಕರಣದ ತನಿಖೆ ಒಟ್ಟಿಗೆ ಮಾಡಿದರೆ ಆರೋಪಿಗಳನ್ನು ಶೀಘ್ರ ಹಿಡಿಯಲು ಅನುಕೂಲವಾಗುತ್ತದೆ ಎಂದು ಉಮಾದೇವಿ ಅರ್ಜಿಯಲ್ಲಿ ತಿಳಿಸಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

'Karnataka police probe in sorry state, please intervene', Kalaburgi’s widow tells SC

ಕೇಂದ್ರ ಸರಕಾರ, ರಾಷ್ಟ್ರೀಯ ತನಿಖಾ ದಳ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court has issued notices to the Central Bureau of Investigation among others on a petition that sought for a probe by the Special Investigating Team into the M M Kalaburgi murder case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ