ರಾಜ್ಯದ ಮೂವರು ಪೊಲೀಸರಿಗೆ ಕೇಂದ್ರ ಸರಕಾರದ ಪದಕ

Posted By:
Subscribe to Oneindia Kannada

ಬೆಂಗಳೂರು, ಜೂನ್ 20: ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ತರಬೇತುದಾರರಿಗೆ ಹಾಗೂ ಸಹಾಯಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ನೀಡುವ ಕೇಂದ್ರ ಗೃಹ ಸಚಿವರ ಅತ್ಯುತ್ತಮ ಸೇವಾ ಪದಕ ಗೌರವಕ್ಕೆ ರಾಜ್ಯದ ಮೂವರು ಪಾತ್ರರಾಗಿದ್ದಾರೆ.

2015-16ನೇ ಸಾಲಿನ ಗೌರವ ಇದಾಗಿದ್ದು, ಕೆಬಿ ಶಿವಪ್ರಸಾದ್ ರಾವ್ (ಒಳಾಂಗಣ)- ಪಿಟಿಎಸ್ ಚನ್ನಪಟ್ಟಣ, ಕೆಎಸ್ ಪಾಟೀಲ್, ಎಆರ್ ಎಸ್ ಐ, ಪಿಟಿಎಸ್ ಖಾನಾಪುರ (ಹೊರಾಂಗಣ) ಹಾಗೂ ಆರ್ ಸಿ ಮಹೇಶ್, ಎಪಿಸಿ, ಚನ್ನಪಟ್ಟಣ (ಹೊರಾಂಗಣ) ಈ ಮೂವರು ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ ಇದ್ದರೂ ಆಂಬ್ಯುಲೆನ್ಸ್‌ಗೆ ದಾರಿಮಾಡಿಕೊಟ್ಟ ಪಿಎಸ್ಐ

Karnataka police entitled medal for Excellence in Police Training

ಈ ಮೂವರು ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿ ಬರುವ ನವದೆಹಲಿಯ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ, 2014-15ರಿಂದ ಈ ಗೌರವ ನೀಡಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
KB Shivaprasad, KS Patil and RC Mahesh -These three police officers from Karnataka entitled medal for Excellence in Police Training.
Please Wait while comments are loading...