Karnataka Police: ದೀರ್ಘಕಾಲದ ಪ್ರಕರಣಗಳಡಿ 200 ಮಂದಿ ಬಂಧನ: ವಿಲೇವಾರಿ, ಬಾಕಿ ಕೇಸ್ ಅಂಕಿ-ಸಂಖ್ಯೆ ಇಲ್ಲಿದೆ
ಬೆಂಗಳೂರು, ಜನವರಿ 22: ಬಾಕಿ ಪ್ರಕರಣ ತೆರವುಗೊಳಿಸುವ ನಿಟ್ಟಿನಲ್ಲಿ ಮೂರು ದಶಕದ ಹಿಂದಿನ ರಾಮಜನ್ಮಭೂಮಿ ಹೋರಾಟದ ಹಿಂದು ಕರೆಸೇವಕ ಸೇರಿದಂತೆ ಕೆಲವರನ್ನು ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ರಾಜ್ಯದಲ್ಲಿ ಒಟ್ಟು 200 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ರಾಜ್ಯದಲ್ಲಿ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ದೀರ್ಘಕಾಲ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿರುವ ಪೊಲೀಸರು ಕಳೆದ ಆರು ತಿಂಗಳಲ್ಲಿ ಇಷ್ಟು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ವಿಫಲವಾದ ಕಾರಣ, ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ಈ ಎರಡು ಜಿಲ್ಲೆಯಲ್ಲಿ ಅಧಿಕ ಬಂಧನ
ಕಳೆದ ಅರ್ಧವರ್ಷದಲ್ಲಿ ಪೊಲೀಸ್ ಇಲಾಖೆಯು ಬೆಂಗಳೂರಿನಲ್ಲಿ 52, ಧಾರವಾಡದಲ್ಲಿ 36 ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಬಂಧನ ಸೇರಿ ಒಟ್ಟು 200 ಮಂದಿ ಬಂಧಿಸಲಾಗಿದೆ ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ ಎಂದು TIE ವರದಿ ಮಾಡಿದೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಹೋರಾಟ, ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದು ಕರಸೇವಕ ಶ್ರೀಕಾಂತ್ ಪೂಜಾರಿಯನ್ನು (60) ಬಂಧಿಸಿದ್ದರು. ಬಾಕಿ ಉಳಿದ ಪ್ರಕರಣದ ಪೈಕಿ ಈ ಬಂಧನವು ಒಂದು, ದುರದ್ದೇಶ ಇಲ್ಲ ಎಂದು ಗೃಹ ಇಲಾಖೆ ತಿಳಿಸಿದೆ. ಪೂಜಾರಿ ಬಂಧನ ವಿರೋಧಿಸಿ ಬಿಜೆಪಿ ಪ್ರತಿಭಟನೆ ಆರಂಭಿಸಿತ್ತು.

ರಾಜಕೀಯ ತಿರುವು ಪಡೆದ ಹುಬ್ಬಳ್ಳಿ ಬಂಧನ
ಬಿಜೆಪಿ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ (60) ಸೇರಿದಂತೆ 2023 ರಲ್ಲಿ ಅವಳಿ ನಗರ ವ್ಯಾಪ್ತಿಯಲ್ಲಿ ಒಟ್ಟು ವಿವಿಧ ಪ್ರಕರಣಗಳಡಿ 36 ಮಂದಿಯನ್ನು ಬಂಧಿಸಲಾಗಿತ್ತು. ಇತ್ತ ಬಿಜೆಪಿ ನಾಯಕರು ಹಿಂದೂ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
1992 ರಿಂದ ದಂಗೆ ಪ್ರಕರಣದಲ್ಲಿ ಬಂಧಿತ ನಾಪತ್ತೆಯಾದ ಆರೋಪಿಗಳಲ್ಲಿ ಒಬ್ಬರು ಡಿಸೆಂಬರ್‌ನಲ್ಲಿ ಶೀಘ್ರದಲ್ಲೇ ಜಾಮೀನು ಪಡೆದ ಬಗ್ಗೆ ಮಾಹಿತಿ ಇದೆ. ಆದರೆ ಎರಡನೇ ಆರೋಪಿಗೆ ಜಾಮೀನು ವಿಳಂಬವಾದ ಬಳಿಕ ಬಂಧನವಾಯಿತು. ಬಳಿಕ ಇದು ರಾಜಕೀಯ ಬಣ್ಣ ಪಡೆದುಕೊಂಡು ಪ್ರತಿಭಟನೆಯು ನಡೆಯಿತು.
ಬಂಧನ, ಪ್ರಕರಣ, ವಿಲೇವಾರಿಯ ಅಂಕಿ ಸಂಖ್ಯೆ
ಕರ್ನಾಟಕದ ತುಮಕೂರು ಪ್ರದೇಶದ ಪೊಲೀಸರು ಫೆಬ್ರವರಿ 10, 2005 ರಂದು ವೆಂಕಟಮನಹಳ್ಳಿ ಗ್ರಾಮದ ಪೊಲೀಸ್ ಔಟ್‌ಪೋಸ್ಟ್ ಮೇಲೆ ನಕ್ಸಲರು ನಡೆಸಿದ 19 ವರ್ಷಗಳ ಹಿಂದಿನ ಪ್ರಕರಣದಲ್ಲಿ ಐದು ಜನರನ್ನು ಬಂಧಿಸಿದ್ದರು. ಇನ್ನು ವಿಚಾರಣೆಗೆ ತಲೆಮರೆಸಿಕೊಂಡವರ ಸಂಖ್ಯೆ 42 ಇದೆ. ಸ್ಥಳೀಯ ನ್ಯಾಯಾಲಯಗಳು ಆರಂಭಿಕ ವಿಚಾರಣೆಯಲ್ಲಿ ಪ್ರಕರಣದಲ್ಲಿ 29 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
ಸದ್ಯ ರಾಜ್ಯದಲ್ಲಿ ಒಟ್ಟು 10.14 ಲಕ್ಷ ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳಲ್ಲಿ 30 ವರ್ಷಕ್ಕಿಂತ ಹಳೆಯದಾದ 10 ದೀರ್ಘಕಾಲ ಕೇಸ್‌ಗಳು ಬಾಕಿ ಉಳಿದಿವೆ. 887 ಪ್ರಕರಣಗಳು 20 ರಿಂದ 30 ವರ್ಷಗಳ ನಡುವಿನ (0.9%) ಪ್ರಕರಣಗಳಾಗಿವೆ.
ಒಟ್ಟು 26,703 ಪ್ರಕರಣಗಳು 10 ರಿಂದ 20 ವರ್ಷಗಳವರೆಗಿನ ಪ್ರಕರಣಳಾಗಿದ್ದು (2.63%), 1.64 ಲಕ್ಷ ಪ್ರಕರಣಗಳು ಐದರಿಂದ 10 ವರ್ಷಗಳಷ್ಟು ಹಳೆಯ (16.22%) ಪ್ರಕರಣಗಳು ಇವೆ. ಸುಮಾರು 72 ಪ್ರತಿಶತ ಪ್ರಕರಣಗಳು ಐದು ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದಿವೆ. ನ್ಯಾಯಾಲಯದಿಂದ 2015ರಲ್ಲಿ ಸುಮಾರು 8 ಲಕ್ಷ ಪ್ರಕರಣ ವಿಲೇವಾರಿ ಆಗಿವೆ.












Click it and Unblock the Notifications