ಕರ್ನಾಟಕ ಪಿಜಿಸಿಇಟಿ 2020 ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ
ಬೆಂಗಳೂರು, ಆಗಸ್ಟ್ 14: ಕರ್ನಾಟಕ ಪಿಜಿಸಿಇಟಿ 2020 ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆಯಾಗಿದೆ.
ಕೊರೊನಾ ಸೋಂಕಿನಿಂದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯನ್ನು ಮುಂದೂಡಿತ್ತು. ಎಂಬಿಎ, ಎಂಸಿಎ, ಎಂಇ, ಎಂಟೆಕ್ ಕೋರ್ಸ್‌ಗಳಿಗೆ ಆಗಸ್ಟ್ 8 ಹಾಗೂ 9 ರಂದು ಎಂಟ್ರೆನ್ಸ್ ಪರೀಕ್ಷೆ ನಡೆಯಬೇಕಿತ್ತು. ಆ ಪರೀಕ್ಷೆಗಳು ಸೆಪ್ಟೆಂಬರ್ 6 ಹಾಗೂ 7 ರಂದು ನಡೆಯಲಿದೆ.
ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದಾಗಿದೆ. ಆಗಸ್ಟ್ 21ರೊಳಗೆ ಶುಲ್ಕವನ್ನು ಪಾವತಿಸಬೇಕು. ಆನ್‌ಲೈನ್ ಮೂಲಕ ಆಗಸ್ಟ್ 20ರವರೆಗೆ ಮಧ್ಯಾಹ್ನ 2 ರಿಂದ ಸಂಜೆ 5.30ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಪ್ಲೈ ಮಾಡಿ ಯಾರೂ ಶುಲ್ಕ ಕಟ್ಟಿಲ್ಲವೋ ಅಂತವರು ಕೂಡ ಶುಲ್ಕ ಪಾವತಿಸಬಹುದಾಗಿದೆ.
PGCET-2020 ಪ್ರಮುಖ ದಿನಾಂಕಗಳು
ಆನ್‌ಲೈನ್ ರಿಜಿಸ್ಟ್ರೇಷನ್‌ಗೆ ಆರಂಭ ದಿನಾಂಕ 14-08-2020
ಆನ್‌ಲೈನ್ ರಿಜಿಸ್ಟ್ರೇಷನ್‌ಗೆ ಕೊನೆ ದಿನಾಂಕ 20-08-2020 (ಸಂಜೆ 05-30 ರವರೆಗೆ)
ರಿಜಿಸ್ಟ್ರೇಷನ್ ಶುಲ್ಕ ಪಾವತಿಸಲು ಕೊನೆ ದಿನಾಂಕ 21-08-2020
ಪಿಜಿಸಿಇಟಿ ಪರೀಕ್ಷೆ ದಿನಾಂಕ 06-10-2020, 07-10-2020












Click it and Unblock the Notifications