ಕರ್ನಾಟಕದ ಪ್ರಮುಖ ರಾಷ್ಟ್ರೀಯ ಹೆದ್ದಾರಿ 2 ಟೋಲ್ ಪ್ಲಾಜಾದಲ್ಲಿ ಸೆ.1ರಿಂದ ದರ ಏರಿಕೆ!
ರಾಜ್ಯದ ಮತ್ತೊಂದು ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರು ಬಳಕೆದಾರ ಶುಲ್ಕವನ್ನು ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ. ಈ ನಿರ್ಧಾರಕ್ಕೆ ವಾಹನ ಸವಾರರಿಂದ ಆಕ್ಷೇಪ ವ್ಯಕ್ತವಾಗಿದೆ. ಸೆಪ್ಟೆಂಬರ್ 1 ರಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಹೆಚ್ಚಳವಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯದ ಮತ್ತೊಂದು ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ಬೆಂಗಳೂರು ಮತ್ತು ಮಂಗಳೂರು ರಸ್ತೆ ಭಾಗದಲ್ಲಿರುವ ಎರಡು ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರು ಹೆಚ್ಚಿನ ಬಳಕೆದಾರ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಇನ್ನು ಹೊಸ ಪರಿಷ್ಕೃತ ದರಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಕರೇನಹಳ್ಳಿ ಹಾಗೂ ತುಮಕೂರು ಜಿಲ್ಲೆಯ ಕರೆಬೈಲು ಟೋಲ್ ಪ್ಲಾಜಾಗಳಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಇನ್ನು ಪ್ರತಿ ಟೋಲ್ ಪ್ಲಾಜಾದಲ್ಲಿ 40.13 ಕಿ.ಮೀ ದೂರಕ್ಕೆ ಅನ್ವಯವಾಗುವಂತೆ ಶುಲ್ಕಗಳು ಇರಲಿವೆ ಎಂದು ಹೇಳಲಾಗಿದೆ.

ಈ ಮಾರ್ಗದ ಟೋಲ್ ಪ್ಲಾಜಾಗಳಲ್ಲಿ ಕಾರ್, ಪ್ಯಾಸೆಂಜರ್ ವ್ಯಾನ್ ಮತ್ತು ಜೀಪ್‌ಗಳು ಸಿಂಗಲ್ ಟ್ರಿಪ್‌ಗೆ 60 ರೂಪಾಯಿ ಇರಲಿದೆ. ಅಲ್ಲದೇ ದಿನದಲ್ಲಿ ಹಲವು ಟ್ರಿಪ್‌ಗೆ 85 ರೂಪಾಯಿ ಮತ್ತು ತಿಂಗಳ ಪಾಸಿಗೆ 1745 ರೂಪಾಯಿ ನಿಗದಿ ಮಾಡಲಾಗಿದೆ. ಕಮರ್ಷಿಯಲ್ ವೆಹಿಕಲ್ (ಎಲ್‌ಸಿವಿ) ಸಿಂಗಲ್ ಟ್ರಿಪ್‌ಗೆ 100 ರೂಪಾಯಿ, ದಿನದಲ್ಲಿ ಹಲವು ಬಾರಿ ಟ್ರಿಪ್‌ಗೆ 155 ರೂಪಾಯಿ ಮತ್ತು ತಿಂಗಳ ಪಾಸ್‌ಗೆ 3055 ರೂಪಾಯಿ ಇರಲಿದೆ. ಬಸ್ ಮತ್ತು ಟ್ರಕ್‌ಗಳಿಗೆ ಸಿಂಗಲ್ ಟ್ರಿಪ್‌ಗೆ 205 ರೂಪಾಯಿ, ದಿನದಲ್ಲಿ ಹಲವು ಟ್ರಿಪ್ ಇದ್ದರೆ 305 ರೂಪಾಯಿ ಮತ್ತು ತಿಂಗಳ ಪಾಸ್‌ಗೆ 6015 ರೂಪಾಯಿ ಕೊಡಬೇಕಾಗುತ್ತದೆ.
ಬಿ.ವೈ ವಿಜಯೇಂದ್ರ ಆಕ್ಷೇಪ
ಇನ್ನು ಶಿಕಾರಿಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿ ಸಂಖ್ಯೆ 57 ರಲ್ಲಿ ಒಂದು ಟೋಲ್ ಇದ್ದು, ಮತ್ತೊಂದು ಟೋಲ್ ಕುಟ್ರಳ್ಳಿಯ ಬಳಿ ನಿರ್ಮಾಣವಾಗಿದ್ದು, ಇದರಿಂದ ನಮ್ಮ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಂದು ಟೋಲ್‌ನಿಂದ ಮತ್ತೊಂದು ಟೋಲ್‌ಗೆ 65 ಕಿಲೋಮೀಟರ್ ದೂರವಿರಬೇಕೆಂಬ ನಿಯಮವಿದ್ದರೂ, ಕೇವಲ 35 ಕಿಲೋಮೀಟರ್‌ಗೆ ಕುಟ್ರಳ್ಳಿ ಸಮೀಪ ಟೋಲ್ ನಿರ್ಮಾಣ ಮಾಡಿದ್ದು ಇಲ್ಲಿ ಪ್ರತಿನಿತ್ಯ ₹ 75 ರೂಪಾಯಿ ಕೊಟ್ಟು ಸ್ಥಳೀಯ ಗ್ರಾಮಸ್ಥರು ಓಡಾಡುವ ಪರಿಸ್ಥಿತಿ ಬಂದಿದೆ. ಆದ್ದರಿಂದ ತುರ್ತಾಗಿ ರಾಜ್ಯ ಸರ್ಕಾರ ಈ ಟೋಲ್ ತೆರವುಗೊಳಿಸಲಿ ಅಥವಾ ಸ್ಥಳೀಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications