ಕರ್ನಾಟಕದ ಬುಧವಾರದ ತುಣುಕು ಸುದ್ದಿ

ಬೆಂಗಳೂರು, ನ. 26 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.

ಸಮಯ 4 ಗಂಟೆ : ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಬಾಕಿ ಹಣದ ಪೈಕಿ ನ್ಯಾಯಯುತವಾದ (ಎಫ್ಆರ್‌ಪಿ) ದರವನ್ನು ನ. 30 ರೊಳಗಾಗಿ ನೀಡಬೇಕು. ಕಬ್ಬು ಅರೆಯುವ ಕೆಲಸವನ್ನು ಸಕ್ಕರೆ ಕಾರ್ಖಾನೆಗಳು ಆರಂಭಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.

ಸಮಯ 3 ಗಂಟೆ : ಬಿಡದಿ ಧ್ಯಾನ ಪೀಠದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ವರದಿಯ ವಿಚಾರಣೆಯನ್ನು ರಾಮನಗರ ಕೋರ್ಟ್ ಡಿಸೆಂಬರ್ 3ಕ್ಕೆ ಮುಂದೂಡಿದೆ.

Karnataka

ಸಮಯ 2 ಗಂಟೆ : ಚೆಕ್‌ಬೌನ್ಸ್ ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗುವಂತೆ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರಿಗೆ ಬೆಂಗಳೂರಿನ 13ನೇ ಎಸಿಎಂಎಂ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ. ಡಿ.14ರಂದು ಹಾಜರಾಗಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

ಸಮಯ 1 ಗಂಟೆ : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕಾಡುಮನೆ ಎಸ್ಟೇಟ್ ಬಳಿ ಆನೆ ತುಳಿದು ಹಸು ವ್ಯಾಪಾರಿ ಸಾವನ್ನಪ್ಪಿದ್ದಾನೆ. ಮೃತನನ್ನು ಆವಲನಹಳ್ಳಿ ನಿವಾಸಿ ವಿ.ರಾಜು ಎಂದು ಗುರುತಿಸಲಾಗಿದ್ದು, ಇವರ ಜೊತೆಯಿದ್ದ ಮಂಜಯ್ಯನಿಗೂ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಮಯ 12 ಗಂಟೆ : ಬಿಡದಿ ಧ್ಯಾನ ಪೀಠದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ವರದಿಯ ವಿಚಾರಣೆಯನ್ನು ರಾಮನಗರ ಕೋರ್ಟ್ ಮಧ್ಯಾಹ್ನಕ್ಕೆ ಮುಂದೂಡಿದೆ.

ಸಮಯ 11 ಗಂಟೆ : ರಾಮನಗರ ಕೋರ್ಟ್‌ಗೆ ಸ್ವಾಮಿ ನಿತ್ಯಾನಂದ ಮತ್ತು ಐವರು ಶಿಷ್ಯರ ಆಗಮನ

ಸಮಯ 10 ಗಂಟೆ : ಸಿಐಡಿ ಡಿವೈಎಸ್ಪಿ ಲೋಕೇಶ್ ನೇತೃತ್ವದ ತಂಡ ರಾಮನಗರ ಕೋರ್ಟ್‌ಗೆ ಆಗಮಿಸಿದ್ದು, ಕೆಲವು ಹೊತ್ತಿನಲ್ಲಿ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲಿದ್ದಾರೆ.

ಸಮಯ 9 ಗಂಟೆ : ಬಿಡದಿ ಧ್ಯಾನ ಪೀಠದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ವರದಿ ಇಂದು ರಾಮನಗರ ಕೋರ್ಟ್‌ಗೆ ಸಲ್ಲಿಕೆಯಾಗಲಿದೆ. ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ನಡೆಸಿರುವ ಪುರುಷತ್ವ ಪರೀಕ್ಷೆ ವರದಿ ಸಿಐಡಿ ಅಧಿಕಾರಿಗಳ ಕೈ ಸೇರಿದ್ದು, ಇಂದು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗುತ್ತದೆ. [ಸಿಐಡಿ ಕೈ ಸೇರಿದ ನಿತ್ಯಾನಂದ ಪುರುಷತ್ವ ಪರೀಕ್ಷೆ ವರದಿ]

ಸಮಯ 8 ಗಂಟೆ : ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ರೌಡಿ ಶೀಟರ್‌ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು 100 ರೌಶಿ ಶೀಟರ್‌ಗಳನ್ನು ವಶಕ್ಕೆ ಪಡೆದಿರುವ ಇನ್ಸ್‌ಪೆಕ್ಟರ್ ಪರಮೇಶ್ವರ್ ಅವರ ನೇತೃತ್ವದ ತಂಡ ಅವರ ಕಾರ್ಯಚಟುಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.

ಸಮಯ 7.30 ಗಂಟೆ : ಬೆಂಗಳೂರಿನ ಜಿಗಣಿ ಬಳಿ ಅಕ್ರಮ ಮರಳು ಅಡ್ಡೆ ಮೇಲೆ ಜಿಲ್ಲಾಧಿಕಾರಿ ಶಂಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಒಂದು ಟ್ರಾಕ್ಟರ್, 12 ಮೋಟಾರ್ ಮತ್ತು ಎರಡು ದ್ವಿಚಕ್ರವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+