ಕರ್ನಾಟಕ : ಸೋಮವಾರದ ತುಣುಕು ಸುದ್ದಿಗಳು

ಬೆಂಗಳೂರು, ಡಿ. 8 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.

ಸಮಯ 4 ಗಂಟೆ : ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆಯಾಗಬೇಕು, ಪ್ರತಿಪಕ್ಷಗಳ ಅನಾವಶ್ಯಕ ಪ್ರತಿಭಟನೆಯಿಂದ ಅಧಿವೇಶನದ ಸಮಯ ಹಾಳಾಗಬಾರದು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು.

ಸಮಯ 3 ಗಂಟೆ : ಶಾಲೆಯಿಂದ ಮಗುವನ್ನು ಕರೆತರಲು ಹೋಗುತ್ತಿದ್ದ ಗೃಹಿಣಿಯನ್ನು ಹಿಂಬಾಲಿಸಿದ ಜಿಮ್ ತರಬೇತುದಾರನೊಬ್ಬ ಆಕೆಗೆ ಚಾಕುವಿನಿಂದ ಇರಿದು, ತಾನು ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಭೀಕರ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಸಮಯ 2 ಗಂಟೆ : ಅಪರಿಚಿತ ದುಷ್ಕರ್ಮಿಗಳು ಹಾಡುಹಗಲೇ ವ್ಯಾಪಾರಿಯೊಬ್ಬರಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ. ಮಂಗಳೂರಿನ ಕಾವೂರು ಬಳಿ ಈ ಘಟನೆ ಸಂಭವಿಸಿದ್ದು, ಚೂರಿ ಇರಿತದಿಂದ ಗಾಯಗೊಂಡ ಮಹಮ್ಮದ್‌ ಶರೀಫ್ (45) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಮಯ 1 ಗಂಟೆ : ವಿದ್ಯಾರ್ಥಿನಿಲಯದ ಎರಡನೇ ಮಹಡಿಯ ಶೀಟ್ ಮೇಲೆ ಕಾಲಿಟ್ಟು ಆಯತಪ್ಪಿ ಕೆಳಗೆ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ಘಟನೆ ಸಂಪಂಗಿರಾಮನಗರದಲ್ಲಿ ನಡೆದಿದೆ. ಕೆ.ಆರ್‌.ವೃತ್ತದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಲಾವಣ್ಯ (19) ಮೃತಪಟ್ಟವರು.

ಸಮಯ 12 ಗಂಟೆ : ಮಂಗಳೂರಿನ ಉಲಾಯಿಬೆಟ್ಟು ಬಳಿ ದತ್ತಮಾಲಾಧಾರಿಗಳ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣವನ್ನು ಖಂಡಿಸಿ ಭಜರಂಗದಳ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು ಸೋಮವಾರ ಗುರುಪುರ ಬಂದ್‌ಗೆ ಕರೆ ನೀಡಿವೆ. [ಗುರಪುರ ಬಂದ್, ವಿವರ ಇಲ್ಲಿದೆ]

ಸಮಯ 11 ಗಂಟೆ : ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಯುವತಿಯರು ಡೆತ್‌ನೋಟ್ ಬರೆದಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಕಲ್ಯಾಣ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುನೀತಾ (19) ಮತ್ತು ಸರಸ್ವತಿ (20) ಆತ್ಮಹತ್ಯೆ ಮಾಡಿಕೊಂಡ ಯುವತಿಯರು.

ಸಮಯ 10 ಗಂಟೆ : ಮೈಸೂರು ಮಹಾನಗರ ಪಾಲಿಕೆಯ 15ನೇ ವಾರ್ಡ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೀಮಾ ಪ್ರಸಾದ್ ಜಯಗಳಿಸಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುಳಾ ಮಾನಸ ಅವರಿಂದ ಈ ಕ್ಷೇತ್ರ ತೆರವಾಗಿತ್ತು. ಡಿ.6ರಂದು ವಾರ್ಡ್‌ನಲ್ಲಿ ಉಪ ಚುನಾವಣೆ ನಡೆದಿತ್ತು.

ಸಮಯ 9 ಗಂಟೆ : ಬೆಳೆಗಳಿಗೆ ಲ್ಯಾನೆಟ್ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದ 10ಕ್ಕೂ ಹೆಚ್ಚು ರೈತರು ಅಸ್ವಸ್ಥಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಹುಣಸೂರು ತಾಲೂಕು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ರೈತನೊಬ್ಬ ಈ ಕ್ರಿಮಿನಾಶಕ ಸಿಂಪಡಿಸುವಾಗ ಮೃತಪಟ್ಟಿದ್ದ.

ಸಮಯ 8 ಗಂಟೆ : ಮೊಬೈಲ್ ಮೂಲಕ ಸರ್ಕಾರದ ನಾನಾ ಸೇವೆಗಳು ಜನಸಾಮಾನ್ಯರಿಗೆ ಲಭ್ಯವಾಗಲಿದ್ದು, 'ಕರ್ನಾಟಕ ಮೊಬೈಲ್ ಒನ್' ಯೋಜನೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.

Karnataka

ಸಮಯ 7.30 : ಕರ್ನಾಟಕದ ಇಬ್ಬರು ನಕ್ಸಲ್ ನಾಯಕರು ಸಮಾಜದ ಮುಖ್ಯವಾಹಿನಿಗೆ ಬರಲು ಒಪ್ಪಿಗೆ ನೀಡಿದ್ದು, ಇಬ್ಬರು ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಸಮ್ಮಖದಲ್ಲಿ ಶರಣಾಗಲಿದ್ದಾರೆ. ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್‌ ಶರಣಾಗಲಿರುವ ನಕ್ಸಲರು. [ಇಬ್ಬರು ನಕ್ಸಲರ ವಿವರ ಇಲ್ಲಿದೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+