ಕರ್ನಾಟಕ : ಬುಧವಾರದ ತುಣುಕು ಸುದ್ದಿಗಳು

ಬೆಂಗಳೂರು, ಡಿ. 3 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.

ಸಮಯ 4 ಗಂಟೆ : ಚಿತ್ರರಂಗದ ಹಿರಿಯ ಸಾಹಿತಿ ಸಿ.ವಿ. ಶಿವಶಂಕರ್, ಪೋಷಕನಟ ಶನಿ ಮಹದೇವಪ್ಪ, ಕನ್ನಡ ಚಳವಳಿ ಹೋರಾಟಗಾರರಾದ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ಮತ್ತು ಮು.ಗೋವಿಂದರಾಜು ಅವರ ಪತ್ನಿ ಧನಭಾಗ್ಯಮ್ಮ ಅವರಿಗೆ ಬಿಬಿಎಂಪಿ ತಲಾ 5 ಲಕ್ಷ ರೂಪಾಯಿಗಳ ಸಹಾಯಧನದ ಚೆಕ್‌ಗಳನ್ನು ವಿತರಣೆ ಮಾಡಿದೆ.

ಸಮಯ 3 ಗಂಟೆ : ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಇಳಿಸುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಡೀಸೆಲ್ ಬೆಲೆ ಕಡಿಮೆಯಾಗಿದೆ. ಬಸ್ ಪ್ರಯಾಣ ದರ ಇಳಿಸುವಂತೆ ಬಿಜೆಪಿ ಪ್ರತಿಭಟನೆ ನಡೆಸುತ್ತಿವೆ. ಡೀಸೆಲ್ ಬೆಲೆ ಕಡಿಮೆಯಾಗಿದರೂ ಸದ್ಯಕ್ಕೆ ಪ್ರಯಾಣ ದರ ಕಡಿಮೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Karnataka

ಸಮಯ 2 ಗಂಟೆ : ಇನ್ನು ಮುಂದೆ ಸಾರ್ವಜನಿಕರಾಗಲಿ, ಮನೆಯವರಾಗಲಿ ಮೂಲದಲ್ಲೇ ಒಣ ಹಾಗೂ ಹಸಿ ತ್ಯಾಜ್ಯವನ್ನು ಬೇರ್ಪಡಿಸಿ ಪೌರ ಕಾರ್ಮಿಕರಿಗೆ ನೀಡದಿದ್ದರೆ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಶಾಂತಕುಮಾರಿ ಎಚ್ಚರಿಕೆ ನೀಡಿದ್ದಾರೆ.

ಸಮಯ 1 ಗಂಟೆ : ಇಂಧನ ಇಲಾಖೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಅಕ್ರಮ ನಡೆಸಿದ್ದು, ಈ ಅಕ್ರಮದ ದಾಖಲಾತಿಗಳನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಸಮಯ 12 ಗಂಟೆ : ಬೆಳಗಾವಿಯಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಸ್ಥಾಪನೆಗಾಗಿ ಕಳೆದ ಹಲವು ದಿನಗಳಿಂದ ವಕೀಲರು ನಡೆಸಿರುವ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದಿದ್ದು ಕೆಲ ಕಿಡಿಗೇಡಿಗಳು 6 ಬಸ್‌ಗಳಿಗೆ ಕಲ್ಲು ತೂರಿದ್ದಾರೆ.

ಸಮಯ 11 ಗಂಟೆ : ಬೆಂಗಳೂರಿನ ಮಲ್ಲೇಶ್ವರಂ ಮಾರ್ಕೆಟ್ ಖಾಲಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದಾರೆ. ಪೊಲೀಸ್ ಬಿಗಿಭದ್ರತೆಯಲ್ಲಿ ಪ್ರತಿ ಮಳಿಗೆಗೂ ನೋಟಿಸ್ ನೀಡಿರುವ ಬಿಬಿಎಂಪಿ ಅಧಿಕಾರಿಗಳು, 7 ದಿನದ ಒಳಗೆ ಮಳಿಗೆ ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ.

ಸಮಯ 10 ಗಂಟೆ : ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಪೀಠವನ್ನು ಬೆಳಗಾವಿಯಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ ವಕೀಲರು ಇಂದು ಬೆಳಗಾವಿ ಬಂದ್‌ಗೆ ಕರೆ ನೀಡಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಸಮಯ 9 ಗಂಟೆ : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸದಂತೆ ಬಿಡದಿ ಧ್ಯಾನಪೀಠದ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆ ವರದಿಯನ್ನು ಸಿಐಡಿ ಪೊಲೀಸರು ರಾಮನಗರ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಇಂದು ಈ ಕುರಿತು ವಿಚಾರಣೆ ನಡೆಯಲಿದೆ.

ಸಮಯ 8 ಗಂಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿ ಪ್ರವಾಸ ಕೈಗೊಂಡಿದ್ದು 10.30ಕ್ಕೆ ರಾಜ್ಯದ ಸಂಸದರೊಂದಿಗೆ ಉಪಹಾರ ಕೂಟ ನಡೆಸಲಿದ್ದಾರೆ. ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಅಲ್ಲಿ ಚರ್ಚಿಸಬೇಕಾದ ಕರ್ನಾಟಕದ ವಿಷಯಗಳ ಬಗ್ಗೆ ಸಂಸದರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಸಮಯ 7.30 : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವೈದ್ಯಕೀಯ ಪರೀಕ್ಷೆಯ ಬಗ್ಗೆ ಹೈಕೋರ್ಟ್ ನಡೆಸಿರುವ ಅರ್ಜಿಯ ವಿಚಾರಣೆಯ ತೀರ್ಪು ಇಂದು ಹೊರಬೀಳಲಿದೆ. ನ್ಯಾ.ಎ.ಎನ್.ವೇಣುಗೋಪಾಲ ಗೌಡ ಅವರ ಪೀಠ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟಿಸಲಿದೆ. [ಶ್ರೀಗಳಿಗೆ ವೈದ್ಯಕೀಯ ಪರೀಕ್ಷೆ ಆಗಲೇಬೇಕು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+