ಅಧ್ಯಯನಕ್ಕಾಗಿ ವಿದೇಶಕ್ಕೆ ಹೊರಟ ಶಾಸಕರು!

ಬೆಂಗಳೂರು, ಡಿ. 26 : ರಾಜ್ಯದ 100 ತಾಲೂಕುಗಳಲ್ಲಿ ಬರ ಪರಿಸ್ಥಿತಿ, ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದ್ದರೂ ಶಾಸಕರು ವಿದೇಶ ಪ್ರವಾಸಕ್ಕೆ ಹೊರಟಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ವಿಧಾನಮಂಡಲದ ವಿವಿಧ ಸಮಿತಿಗಳು ವಿದೇಶ ಪ್ರವಾಸ ಕೈಗೊಳ್ಳಲು ಸಜ್ಜಾಗುತ್ತಿದ್ದು, ಸ್ಪೀಕರ್ ಅನುಮತಿಗಾಗಿ ಕಾಯುತ್ತಿವೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶಾಸಕರು ವಿದೇಶ ಪ್ರವಾಸ ಕೈಗೊಂಡಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು. ಸದ್ಯ ಕಾಂಗ್ರೆಸ್‌ ಸರ್ಕಾರದಲ್ಲೂ ಶಾಸಕರು ವಿದೇಶ ಪ್ರವಾಸ ಹೋಗಲು ಸಜ್ಜಾಗುತ್ತಿದ್ದಾರೆ. ಅಧ್ಯಯನ ನೆಪದಲ್ಲಿ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆದರೆ, ಕೆಲವು ಸಮಿತಿ ಭೇಟಿ ನೀಡುತ್ತಿರುವ ದೇಶ ಹಾಗೂ ಸ್ಥಳಗಳು ಕೇವಲ ಪ್ರವಾಸಿ ಸ್ಥಳಗಳಾಗಿವೆ.

vidanasoudha

ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸೇರಿ 15 ರಿಂದ 20 ಸದಸ್ಯರಿರುವ ಸಮಿತಿ ವಿದೇಶ ಪ್ರವಾಸ ಕೈಗೊಳ್ಳುತ್ತದೆ. ಒದೊಂದು ಸಮಿತಿಗೆ ಒಂದೂವರೆಯಿಂದ ಎರಡು ಕೋಟಿ ರೂ. ವೆಚ್ಚ ಅಂದರೆ, ಪ್ರತಿ ಸದಸ್ಯರಿಗೆ 5 ರಿಂದ 7 ಲಕ್ಷ ರೂ. ವೆಚ್ಚ ಮಾಡಲಾಗುತ್ತದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದುವರೆಗೂ ನಾಲ್ಕು ಸಮಿತಿಗಳಿಗೆ ವಿದೇಶ ಪ್ರವಾಸ ಅನುಮತಿ ನೀಡಲಾಗಿದೆ.

ಉಭಯ ಸದನಗಳಿಂದ ಸೇರಿ ಒಟ್ಟು ಹದಿನೈದು ಸಮಿತಿಗಳಿವೆ. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅಧ್ಯಕ್ಷತೆಯ 20 ಸದಸ್ಯರ ಸಾರ್ವಜನಿಕ ಉದ್ದಿಮೆ ಸಮಿತಿ ಒಂದು ತಿಂಗಳ ಹಿಂದೆ ಜಪಾನ್‌, ಚೀನಾ, ಸಿಂಗಾಪುರ, ಮಲೇಷಿಯಾ, ಥಾಯ್ಲೆಂಡ್‌ ಪ್ರವಾಸ ಮುಗಿಸಿ ಮರಳಿದೆ. ಸದ್ಯ ಉಳಿದ ಸಮಿತಿಗಳು ಅನುಮತಿಗಾಗಿ ಕಾಯುತ್ತಿವೆ.

ಒಂದು ಸಮಿತಿ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಫಿಜಿ ಪ್ರವಾಸದಲ್ಲದೆ. ಎರಡು ಸಮಿತಿಗಳು ಬ್ರೆಜಿಲ್‌, ಅರ್ಜೆಂಟೈನಾ, ಪೆರು ಪ್ರವಾಸಕ್ಕೆ ಅನುಮತಿ ಪಡೆದುಕೊಂಡಿವೆ. ಇನ್ನೂ ಕೆಲವು ಸಮಿತಿಗಳು ಸ್ಪೀಕರ್‌ ಅನುಮತಿಗಾಗಿ ಕಾಯುತ್ತಿವೆ. ಬಿ.ಆರ್‌.ಯಾವಗಲ್‌ ಅಧ್ಯಕ್ಷತೆಯ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಡಿ.24 ರಿಂದ 8 ದಿನಗಳ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಫಿಜಿ ಪ್ರವಾಸ ಕೈಗೊಂಡಿದೆ.

ಕೆಲವು ಸಮಿತಿಗಳು ವಿದೇಶ ಪ್ರವಾಸಕ್ಕೆ ಅನುಮತಿ ಕೋರಿವೆ. ಆದರೆ, ಜನವರಿಯಲ್ಲಿ ವಿಧಾನಮಂಡಲ ಜಂಟಿ ಅಧಿವೇಶನ ನಡೆಯುವ ಸಾಧ್ಯತೆ ಇದ್ದು, ಆದ್ದರಿಂದ ಕೆಲವು ಸಮಿತಿಗಳಿಗೆ ಇನ್ನೂ ಅನುಮತಿ ನೀಡಿಲ್ಲ. ವಿದೇಶಗಳಲ್ಲಿನ ಅಭಿವೃದ್ಧಿ ಕುರಿತು ಅಧ್ಯಯನ ನಡೆಸಲು ಪ್ರತಿ ಶಾಸಕರಿಗೂ ಐದು ವರ್ಷಗಳಲ್ಲಿ ಎರಡು ಬಾರಿ ವಿದೇಶ ಪ್ರವಾಸ ಕೈಗೊಳ್ಳಲು ಅವಕಾಶವಿದೆ.

ಸದ್ಯ ರಾಜ್ಯದಲ್ಲಿ 100 ತಾಲೂಕುಗಳಲ್ಲಿ ಬರಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಶಾಸಕರ ವಿದೇಶ ಪ್ರವಾಸ ಅಗತ್ಯವಿತ್ತೆ ಎಂಬುದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿದೇಶ ಪ್ರವಾಸಕ್ಕಾಗಿ ಕಾಯುತ್ತಿರುವ ಸಮಿತಿಗಳಿಗೆ ಅನುಮತಿ ದೊರೆಯಲಿದೆಯೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+