224 ಶಾಸಕರಲ್ಲಿ ಯಾವ ಸಮುದಾಯಕ್ಕೆ ಹೆಚ್ಚಿನ ಸ್ಥಾನ: ಯಾವ ಸಮುದಾಯದಿಂದ ಎಷ್ಟು ಶಾಸಕರು : ಇಲ್ಲಿದೆ ಸಂಪೂರ್ಣ ಮಾಹಿತಿ
ಭಾರತದ ರಾಜಕೀಯದಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುವ ವಿಚಾರ. ಅಭ್ಯರ್ಥಿಗೆ ಟಿಕೆಟ್ ಹಂಚಿಕೆ ಮಾಡುವುದರಿಂದ ಹಿಡಿದು ಅವರಿಗೆ ಸಚಿವ, ಮುಖ್ಯಮಂತ್ರಿ ಮಾಡುವವರೆಗೆ ಜಾತಿ ಲೆಕ್ಕಾಚಾರ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಬಾರಿ ಕೂಡ ಮೂರು ಪಕ್ಷಗಳು ಅಳೆದು ತೂಗಿ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಿತ್ತು.
ಈ ಬಾರಿ ಚುನಾವಣೆಲ್ಲಿ ಆಡಳಿತಾರೂಢ ಬಿಜೆಪಿ 66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನ 135 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ 19 ಸ್ಥಾನಗಳಲ್ಲಿ ಗೆಲುವು ಕಂಡಿದ್ದು, ಒಬ್ಬರು ಪಕ್ಷೇತರರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಒಬ್ಬರು ಮತ್ತು ಸರ್ವೋದಯ ಕರ್ನಾಟಕ ಪಕ್ಷದಿಂದ ಒಬ್ಬರು ಆಯ್ಕೆಯಾಗಿದ್ದಾರೆ.

ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಗೆ ಒಂದೊಂದು ಸಮುದಾಯ ಪ್ರಮುಖ ವೋಟ್‌ಬ್ಯಾಂಕ್ ಆಗಿದೆ. ಬಿಜೆಪಿಗೆ ಲಿಂಗಾಯತ ಮತಗಳು ಪ್ರಮುಖ ಶಕ್ತಿಯಾಗಿದ್ದು, ಕಾಂಗ್ರೆಸ್‌ಗೆ ದಲಿತ ಮತ್ತು ಮುಸ್ಲಿಂ ಮತಗಳೇ ದೊಡ್ಡ ಶಕ್ತಿಯಾಗಿದೆ. ಜೆಡಿಎಸ್ ಪ್ರಮುಖವಾಗಿ ಒಕ್ಕಲಿಗರ ಮತಗಳನ್ನು ನೆಚ್ಚಿಕೊಂಡಿದೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಸ್ಲಿಂ ಸಮುದಾಯದ ಶೇ. 88 ರಷ್ಟು ಮತಗಳು ಬಿದ್ದಿವೆ,ಉಳಿದಂತೆ ಎಸ್‌ಟಿ ಶೇ. 44, ಎಸ್‌ಸಿ ಶೇ. 60, ಕುರುಬ ಶೇ. 63, ಒಬಿಸಿ. ಶೇ. 31, ಲಿಂಗಾಯತ ಶೇ. 20 ರಷ್ಟು ಮತದಾರರು ಕಾಂಗ್ರೆಸ್‌ಗೆ ಮತ ಹಾಕಿದ್ದರು.
ಬಿಜೆಪಿಗೆ ಲಿಂಗಾಯತ ಮತಗಳು ದೊಡ್ಡ ಶಕ್ತಿಯಾಗಿದೆ. ಶೇ. 64ರಷ್ಟು ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ. ಒಬಿಸಿ ಶೇ. 45, ಒಕ್ಕಲಿಗ ಶೇ. 25, ಮುಸ್ಲಿಂ ಶೇ. 2, ಕುರುಬ ಶೇ. 22, ಎಸ್‌ಸಿ ಶೇ.22, ಎಸ್‌ಟಿ ಶೇ. 33 ರಷ್ಟು ಮತದಾರರು ಬಿಜೆಪಿಗೆ ಒಲವು ತೋರಿದ್ದರು.
ಜೆಡಿಎಸ್ ಇಂದಿಗೂ ಒಕ್ಕಲಿಗರ ಮತಗಳನ್ನೇ ನೆಚ್ಚಿಕೊಂಡಿದೆ. ಶೇ. 46 ರಷ್ಟು ಒಕ್ಕಲಿಗರು ಜೆಡಿಎಸ್‌ಗೆ ಮತ ಹಾಕಿದ್ದಾರೆ. ಒಬಿಸಿ ಶೇ. 15, ಎಸ್‌ಸಿ ಶೇ. 14, ಎಸ್‌ಟಿ ಶೇ. 14, ಲಿಂಗಾಯತ ಶೇ. 10, ಮುಸ್ಲಿಂ ಶೇ. 8, ಕುರುಬ ಶೇ. 10 ರಷ್ಟು ಮತಗಳನ್ನು ಪಡೆದುಕೊಂಡಿದೆ.
ಯಾವ ಜಾತಿಯಿಂದ ಎಷ್ಟು ಶಾಸಕರು?
ರಾಜ್ಯದಲ್ಲಿ ಈ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕರಲ್ಲಿ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿದೆ. 224ರಲ್ಲಿ 56 ಶಾಸಕರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನಲ್ಲಿ 34 ಶಾಸಕರಿದ್ದರೆ, ಬಿಜೆಪಿಯಲ್ಲಿ ಲಿಂಗಾಯತ ಶಾಸಕರ ಸಂಖ್ಯೆ 19 ಇದೆ, ಜೆಡಿಎಸ್ ಪಕ್ಷದಿಂದ ಇಬ್ಬರು ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ, ಒಬ್ಬರು ಪಕ್ಷೇತರ ಶಾಸಕರಾಗಿದ್ದಾರೆ.
ಒಕ್ಕಲಿಗ ಸಮುದಾಯ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಒಟ್ಟು 46 ಶಾಸಕರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದರಲ್ಲಿ ಕಾಂಗ್ರೆಸ್ 23, ಬಿಜೆಪಿ 11, ಜೆಡಿಎಸ್ 10 ಮತ್ತು ಇಬ್ಬರು ಇತರೆ ಪಕ್ಷಗಳಿಗೆ ಸೇರಿದವರಾಗಿದ್ದಾರೆ.
ಸಮುದಾಯದಿಂದ ಆಯ್ಕೆಯಾದ ಶಾಸಕರ ಸಂಖ್ಯೆ
| ಜಾತಿ | ಶಾಸಕರ ಸಂಖ್ಯೆ |
| ಲಿಂಗಾಯತ | 56 |
| ಒಕ್ಕಲಿಗ | 46 |
| ವಾಲ್ಮೀಕಿ | 18 |
| ಎಸ್‌ಸಿ (ಬಲ) | 14 |
| ಕುರುಬ | 12 |
| ಬ್ರಾಹ್ಮಣ | 10 |
| ಬಿಲ್ಲವ ಈಡಿಗ | 9 |
| ಮುಸ್ಲಿಂ | 9 |
| ಎಸ್‌ಸಿ (ಎಡ) | 8 |
| ರೆಡ್ಡಿ | 7 |
| ಎಸ್‌ಸಿ (ಬೋವಿ) | 7 |
| ಎಸ್‌ಸಿ (ಲಂಬಾಣಿ) | 6 |
| ಬಂಟ್ಸ್ | 5 |
| ಬೆಸ್ತ (ಮೊಗವೀರ) | 3 |
| ಮರಾಠ | 3 |
| ಜೈನ | 2 |
| ರಜಪೂತ | 1 |
| ಎಸ್‌ಸಿ (ಮೊಗೆರ) | 1 |
| ಕ್ರಿಶ್ಚಿಯನ್ | 1 |
| ಯಾದವ (ಗೊಲ್ಲ) | 1 |
| ಬಲಿಜ (ನಾಯ್ಡು) | 1 |
| ಬೈರಾಗಿ | 1 |












Click it and Unblock the Notifications