Karnataka Rails: ನಾಳೆಯಿಂದ 2026 ಮಾರ್ಚ್‌ವರೆಗೆ ಹಲವು ರೈಲುಗಳು ಭಾಗಶಃ ರದ್ದು! ಯಾವುವು? ಕಾರಣವೇನು..
Train Cancellations List: ಕರ್ನಾಟಕದ ಮಟ್ಟಿಗೆ ರೈಲು ಸಂಚಾರದಲ್ಲಿ ಒಂದಷ್ಟು ಬದಲಾವಣೆ ಆಗಿದೆ. ಇತ್ತೀಚೆಗೆ ಬೆಳಂದೂರು ಮಾರ್ಗದಲ್ಲಿ ಒಂದಷ್ಟು ಕಾಮಗಾರಿ ಹಿನ್ನೆಲೆ ರೈಲುಗಳು ರದ್ದಾಗಿದ್ದವು. ಇದೀಗ ನವೆಂಬರ್ 27ರಿಂದ ಮಾರ್ಚ್ 2026ರವರೆಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ವಿವಿಧ ಮಾರ್ಗದ ಹತ್ತಾರು ರೈಲುಗಳ ಸಂಚಾರ ರದ್ದು ಮತ್ತು ಭಾಗಶಃ ರದ್ದಾಗಿದೆ. ರೈಲಿನ ನಿಯಂತ್ರಣ ಸಹ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ವಿಳಂಬವಾಗಲಿದೆ. ಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಹೆಬ್ಬಾಳ-ಕಂಗೇರಿ ರೈಲ್ವೆ ನಿಲ್ದಾಣಗಳ ಮಧ್ಯ ಗರ್ಡರ್ ಅಳವಡಿಕೆ ಮಾಡಲಗುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (BDA) ಮಾಗಡಿ ರಸ್ತೆಯ ಪ್ರಮುಖ ಮಾರ್ಗದ ಮೂರನೇ ಲೇನ್ ಕೆಲಸಗಳ ಕಾರಣದಿಂದಾಗಿ ರೈಲು ಸಂಚಾರದಲ್ಲಿ ಬೃಹತ್ ಬದಲಾವಣೆ ಆಗುತ್ತಿದೆ. ಇದಕ್ಕಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಅಗತ್ಯವಿದೆ. ದಕ್ಷಿಣ ಪಶ್ಚಿಮ ರೈಲ್ವೆ ಹಲವು ರೈಲುಗಳನ್ನು ರದ್ದುಪಡಿಸುವುದು, ಭಾಗಶಃ ರದ್ದು ಮಾಡುವುವುದು ಹಾಗೂ ಮಾರ್ಗದಲ್ಲಿ ನಿಯಂತ್ರಿಸುವುದು ಅಗತ್ಯವಿದೆ ಎಂದು SWR ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರ ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ. ಹಾಗಾದರೆ ಯಾವೆಲ್ಲ ಮಾರ್ಗದಲ್ಲಿ ಯಾವ ರೈಲುಗಳು ರದ್ದಾಗಿವೆ ಎಂಬ ಪಟ್ಟಿ ಇಲ್ಲಿದೆ.

ನಿಯಂತ್ರಣ ಆಗುವ ರೈಲುಗಳ ಪಟ್ಟಿ
ರಂಜನಗಾಂವ್-ಸರೋಲಾ ನಡುವೆ ನಡೆಯುತ್ತಿರುವ ಪವರ್ ಬ್ಲಾಕ್, ಟ್ರಾಫಿಕ್ ಬ್ಲಾಕ್ ಹಾಗೂ ಕಟ್-ಆಂಡ್-ಕನೆಕ್ಷನ್ ಕಾರ್ಯಗಳ ಕಾರಣದಿಂದ ಕೆಳಗಿನ ರೈಲುಗಳು ನಿಯಂತ್ರಿಸಲಾಗುತ್ತಿದೆ. ಇದರಿಂದ ಸಂಚಾರ ಕೊಂಚ ವಿಳಂಬವಾಗಿದೆ ಎಂದು ಸೆಂಟ್ರಲ್ ರೈಲು ತಿಳಿಸಿದೆ.
* ಹಜರತ್ ನಿಜಾಮುದ್ದೀನ್-ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲು (12780) ಇದೇ ನವೆಂಬರ್ 26 ರಂದು ಬುಧವಾರ ಆರಂಭವಾಗಬೇಕಿತ್ತು. ಈ ರೈಲು ಆರಂಭದ 1 ಗಂಟೆ 30 ನಿಮಿಷ ನಿಯಂತ್ರಣಕ್ಕೆ ಒಳಪಟ್ಟು ನಂತರ ತಡವಾಗಿ ಕಾರ್ಯಚರಣೆ ಮಾಡಲಿದೆ.
* ಕೆಎಸ್‌ಆರ್ ಬೆಂಗಳೂರು-ನವದೆಹಲಿ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12627) ನವೆಂಬರ್ 26 ರಿಂದ ಪ್ರಾರಂಭವಾಗುವ ಈ ರೈಲು 4 ಗಂಟೆಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ. SWR ನಿಂದ 80 ನಿಮಿಷ, ಸೌಥ್ ಸೆಂಟ್ರಲ್ ರೈಲ್ವೆ (SCR) ನಿಂದ 80 ನಿಮಿಷ ಹಾಗೂ ಸೆಂಟ್ರಲ್ ರೈಲ್ವೆಯಿಂದ (CR) 2 ಗಂಟೆಗಳ ಕಾಲ ನಿಯಂತ್ರಣಕ್ಕೆ ಒಳಗಾಗಲಿದೆ.
* ಯಶವಂತಪುರ-ಚಂಡೀಗಢ ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು (22685) ನವೆಂಬರ್ 26 ರಂದು ಆರಂಭವಾಗುವ ಈ ರೈಲು 3 ಗಂಟೆ 30 ನಿಮಿಷ ನಿಯಂತ್ರಣಕ್ಕೆ ಒಳಗಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಗಮನಕ್ಕೆ: ರದ್ದಾದ ರೈಲುಗಳ ಪಟ್ಟಿ
ಹೆಬ್ಬಾಳ-ಕಂಗೇರಿ ವಿಭಾಗದ ತಾತ್ಕಾಲಿಕ ಕಾಮಗಾರಿಯ ಕಾರಣದಿಂದ ಕೆಳಗಿನ ರೈಲುಗಳನ್ನು ಆರು ದಿನಗಳಿಗೆ ರದ್ದುಗೊಳಿಸಲಾಗಿದೆ. ಇದರಲ್ಲಿ ದೈನಂದಿನ ಪ್ಯಾಸೆಂಜರ್ ರೈಲುಗಳು ಇವೆ. ಹೀಗಾಗಿ ಸಾರ್ವಜನಿಕರಿಗೆ ಇತರ ಸಾರಿಗೆ ಅನುಸರಿಸಬೇಕಿದೆ.
* ಅರಸಿಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು (56265) ಸಹ ಮುಂದಿನ ಮಾರ್ಚ್ ವರೆಗೆ ರದ್ದಾಗಿದೆ. ವಿವರವಾಗಿ ನೋಡುವುದಾದರೆ, ನವೆಂಬರ್ 27, ಡಿಸೆಂಬರ್ 04, 2026 ಜನವರಿ 22, ಜನವರಿ 29, ಫೆಬ್ರವರಿ 05 ಮತ್ತು ಮಾರ್ಚ್ 26 ರಂದು ಸಂಚಾರ ಮಾಡುವುದಿಲ್ಲ.
* ಮೈಸೂರು-SMVT ಬೆಂಗಳೂರು ಡೈಲಿ ಪ್ಯಾಸೆಂಜರ್ ರೈಲಿನ (06269) ಸಂಚಾರ ಸಹ ನವೆಂಬರ್ 27, ಡಿಸೆಂಬರ್ 04, 2026 ಜನವರಿ 22, ಜನವರಿ 29, ಫೆಬ್ರವರಿ 05 ಮತ್ತು ಮಾರ್ಚ್ 26ರಂದು ರದ್ದುಗೊಳಿಸಲಾಗಿದೆ.
* SMVT ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ರೈಲು (06270) ಸಹ ನವೆಂಬರ್ 27, ಡಿಸೆಂಬರ್ 04, 2026 ಜನವರಿ 22, ಜನವರಿ 29, ಫೆಬ್ರವರಿ 05 ಮತ್ತು ಮಾರ್ಚ್ 26ರಂದು ರದ್ದುಗೊಳಿಸಲಾಗಿದೆ.
* ಮೈಸೂರು-ಅರಸಿಕೆರೆ ಡೈಲಿ ಪ್ಯಾಸೆಂಜರ್ ರೈಲು (56266) ನವೆಂಬರ್ 27, ಡಿಸೆಂಬರ್ 04, 2026 ಜನವರಿ 22, ಜನವರಿ 29, ಫೆಬ್ರವರಿ 05 ಮತ್ತು ಮಾರ್ಚ್ 26ರಂದು ಸಂಚರಿಸದೇ ಕಾರ್ಯಾಚರಣೆ ಸ್ಥಗಿತಗೊಳಿಸುತ್ತದೆ.
* ಬೆಂಗಳೂರು-ಚನ್ನಪಟ್ಟಣ MEMU ರೈಲು (66535) ಮೇಲಿನ ದಿನಾಂಕಗಳಾದ ನವೆಂಬರ್ 27, ಡಿಸೆಂಬರ್ 04, 2026 ಜನವರಿ 22, ಜನವರಿ 29, ಫೆಬ್ರವರಿ 05 ಮತ್ತು ಮಾರ್ಚ್ 26ರಂದು ಸಂಚರಿಸುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.
ಭಾಗಶಃ ರದ್ದು ಮಾಡಲಾದ ರೈಲುಗಳು
* ಅಶೋಕಪುರಂ-ಬೆಂಗಳೂರು MEMU ರೈಲು (06526) ಚನ್ನಪಟ್ಟಣ-ಬೆಂಗಳೂರು ನಡುವೆ ನವೆಂಬರ್ 27, ಡಿಸೆಂಬರ್ 04, 2026ರ ಜನವರಿ 22 ಮತ್ತು 29, ಫೆಬ್ರವರಿ 05 ಹಾಗೂ ಮಾರ್ಚ್ 26ರಂದು ಭಾಗಶಃ ರದ್ದಾಗಿದೆ. ಚನ್ನಪಟ್ಟಣ ಮತ್ತು ಕೆಎಸ್‌ಆರ್ ಮಧ್ಯ ರೈಲು ಭಾಗಶಃ ರದ್ದಾಗುತ್ತದೆ.
* ಅಶೋಕಪುರಂ-ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು (16022) ಅಶೋಕಪುರಂ-ಬೆಂಗಳೂರು ನಡುವೆ ನವೆಂಬರ್ 27, ಡಿಸೆಂಬರ್ 04, 2026ರ ಜನವರಿ 22 ಮತ್ತು 29, ಫೆಬ್ರವರಿ 05 ಹಾಗೂ ಮಾರ್ಚ್ 26ರಂದು ರದ್ದಾಗಿದೆ. ಈ ರೈಲಿನ ಸಂಚಾರ KSR ಬೆಂಗಳೂರು ನಿಲ್ದಾಣದಿಂದಲೇ ಆರಂಭವಾಗುತ್ತದೆ.
* ಅಶೋಕಪುರಂ-ಬೆಂಗಳೂರು MEMU ರೈಲು (66580) ನವೆಂಬರ್ 27, ಡಿಸೆಂಬರ್ 04, 2026ರ ಜನವರಿ 22 ಮತ್ತು 29, ಫೆಬ್ರವರಿ 05 ಹಾಗೂ ಮಾರ್ಚ್ 26ರಂದು ರಾಮನಗರ-ಬೆಂಗಳೂರು ನಡುವೆ ಸಂಚಾರ ಭಾಗಶಃ ರದ್ದಾಗಿದೆ.
* ಬೆಂಗಳೂರು-ಅಶೋಕಪುರಂ MEMU ರೈಲು (66579) ನವೆಂಬರ್ 28, ಡಿಸೆಂಬರ್ 05, 2026ರ ಜನವರಿ 23 ಮತ್ತು 30, ಫೆಬ್ರವರಿ 06 ಹಾಗೂ ಮಾರ್ಚ್ 27ರಂದು ರಾಮನಗರ-KSR ಬೆಂಗಳೂರು ಮಧ್ಯ ರದ್ದಾಗಿದೆ. ಈ ರೈಲು ರಮಾನಗರದಿಂದ ಸಂಚಾರ ಆರಂಭಿಸುತ್ತದೆ.
* ಮೈಸೂರು-ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್ ರೈಲು (16227) ಮೈಸೂರು-ಬೆಂಗಳೂರು ನಡುವೆ ಡಿಸೆಂಬರ್ 04 ಮತ್ತು ಡಿಸೆಂಬರ್ 5ರಂದು ರದ್ದುಗೊಂಡಿದೆ. ರೈಲಿನ ಸಂಚಾರವು ಬೆಂಗಳೂರಿಂದಲೇ ಪ್ರಾರಂಭವಾಗಲಿದೆ.
* ಹೆಚ್ಚುವರಿಯಾಗಿ ಚೆನ್ನೈ ಸೆಂಟ್ರಲ್-ಅಶೋಕಪುರಂ ಎಕ್ಸ್‌ಪ್ರೆಸ್ ರೈಲು (16021) 2026 ಫೆಬ್ರವರಿ 5ರಂದು 30 ನಿಮಿಷಗಳ ಮಾರ್ಗ ಮಧ್ಯೆ ನಿಯಂತ್ರಣಕ್ಕೆ ಒಳಪಡಲಿದೆ.












Click it and Unblock the Notifications