Karnataka Dams Water Level: ಸೆಪ್ಟೆಂಬರ್‌ 19ರಂದು ಕೆಆರ್‌ಎಸ್‌ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ

Karnataka Reservoirs Water Level: ಭಾರೀ ಮಳೆ ಹಿನ್ನೆಲೆ ಈಗಾಗಲೇ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಕೆಲವೇ ಕೆಲವು ಮಾತ್ರ ತುಂಬುವ ಹಂತದಲ್ಲಿವೆ. ಹಾಗಾದ್ರೆ, ಇಂದು (ಸೆಪ್ಟೆಂಬರ್ 19) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜ ಸಾಗರ (KRS) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಮುಂಗಾರು ಮಳೆ ಆರ್ಭಟದಿಂದ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿದಿವೆ. ಅಲ್ಲಿ ಭಾರೀ ಮಳೆಯಿಂದ ದೊಡ್ಡ-ದೊಡ್ಡ ಅವಾಂತರಗಳು ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತವಾದ ಘಟನೆಗಳು ನಡೆದಿವೆ. ಮತ್ತೊಂದೆಡೆ, ಜಲಾಶಯಗಳಿಗೂ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಹೆಚ್ಚುವರಿ ನೀರನ್ನು ನದಿಗಳಿಗೆ ಹರಿಸಲಾಗಿದೆ. ಹಾಗಾದ್ರೆ ಇದೀಗ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Karnataka Major Reservoirs Water Level on September 19 Know details

ಕೆಆರ್‌ಎಸ್ ಜಲಾಶಯ

* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 123.52 ಅಡಿ
* ಒಳಹರಿವು - 8,646 ಕ್ಯೂಸೆಕ್‌
* ಹೊರಹರಿವು - 8,124 ಕ್ಯೂಸೆಕ್‌

ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1816.70 ಅಡಿ
* ಒಳಹರಿವು - 4,075 ಕ್ಯೂಸೆಕ್‌
* ಹೊರಹರಿವು 3,577.93 ಕ್ಯೂಸೆಕ್‌

ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.535 ಟಿಎಂಸಿ
* ಇಂದಿನ ನೀರಿನ ಮಟ್ಟ - 185.6 ಅಡಿ
* ಒಳಹರಿವು - 4121 ಕ್ಯೂಸೆಕ್‌
* ಹೊರಹರಿವು - 4121 ಕ್ಯೂಸೆಕ್‌

ಭಾರೀ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ತುಂಬಿ ಹರಿದ ಪರಿಣಾಮ ದೊಡ್ಡ-ದೊಡ್ಡ ಅವಾಂತರಗಳೇ ಸಂಭವಿಸಿವೆ. ಮತ್ತೊಂದೆಡೆ ಪ್ರಮುಖ ಜಲಾಶಯಗಳು ಸಹ ಭರ್ತಿಯಾದ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಇದೀಗ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಹಲವೆಡೆ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ ಕೆಲವುದಿ ನಗಳ ಹಿಂದೆ ಡ್ಯಾಂಗಳು ತುಂಬಿದ ಹಿನ್ನೆಲೆ ಒಂದೇ ಬಾರಿ ನೀರನ್ನು ನದಿಗೆ ಹರಿಸಲಾಗಿತ್ತು. ಈ ವೇಳೆ ನದಿ ತೀರದ ಜನರಿಗೆ ಎಚ್ಚರಿಕೆಯಿಂದ ಇರುವಂತೆಯೂ ಸೂಚನೆ ನೀಡಲಾಗಿತ್ತು. ಇದೀಗ ಮಳೆ ತಗ್ಗಿದ ಹಿನ್ನೆಲೆ ನದಿತೀರಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಕೆಲವೆಡೆ ಇದೀಗ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಇದರಿಂದ ಮುಂದೆ ಇನ್ನೂ ಏನೆಲ್ಲಾ ಅನಾಹುತಗಳು ಕಾದಿವೆಯೋ ಎನ್ನುವ ಆತಂಕದಲ್ಲಿ ಜನರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+