Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 24ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ಇದೀಗ ಸದ್ಯ ಮಳೆ ಆರ್ಭಟ ಕಡಿಮೆಯಾಗಿದೆ. ಈಗಾಗಲೇ ಮುಂಗಾರು ವೇಳೆ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ನವೆಂಬರ್ 24) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜಸಾಗರ (ಕೆಆರ್‌ಎಸ್) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿದಿವೆ. ಅಲ್ಲದೆ, ಪ್ರಮುಖ ಜಲಾಶಯಗಳು ಭರ್ತಿ ಆಗಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಇದೀಗ ಕಳೆದ ಕೆಲ ದಿನಗಳಿಂದ ಮಳೆರಾಯನ ಆರ್ಭಟ ತಗ್ಗಿದ್ದು, ಚಳಿ ಎಂಟ್ರಿ ಕೊಟ್ಟಿದೆ. ಈ ನಡುವೆಯ ಕೆಲವು ಭಾಗಗಳ ಅಲ್ಲಲ್ಲಿ ಮಾತ್ರ ಸಾಧಾರಣ ಮಳೆಯಾಗುತ್ತಿದೆ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 123.44 ಅಡಿ
* ಒಳಹರಿವು - 3,245 ಕ್ಯೂಸೆಕ್
* ಹೊರಹರಿವು - 4,779 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 65 ಅಡಿ
* ಇಂದಿನ ನೀರಿನ ಮಟ್ಟ - 69.87 ಅಡಿ
* ಒಳಹರಿವು - 425 ಕ್ಯೂಸೆಕ್
* ಹೊರಹರಿವು - 1,850 ಕ್ಯೂಸೆಕ್
3. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1811.25 ಅಡಿ
* ಒಳಹರಿವು - 1,929 ಕ್ಯೂಸೆಕ್
* ಹೊರಹರಿವು - 3,783.35 ಕ್ಯೂಸೆಕ್
4. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 181.11 ಅಡಿ
* ಒಳಹರಿವು - 187 ಕ್ಯೂಸೆಕ್
* ಹೊರಹರಿವು - 2,236 ಕ್ಯೂಸೆಕ್
5. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 129 ಅಡಿ
* ಇಂದಿನ ನೀರಿನ ಮಟ್ಟ - 117.25 ಅಡಿ
* ಒಳಹರಿವು - 56 ಕ್ಯೂಸೆಕ್
* ಹೊರಹರಿವು - 1,600 ಕ್ಯೂಸೆಕ್
6. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 117 ಅಡಿ
* ಇಂದಿನ ನೀರಿನ ಮಟ್ಟ - 111.8 ಅಡಿ
* ಒಳಹರಿವು - 2,402 ಕ್ಯೂಸೆಕ್
* ಹೊರಹರಿವು - 5,380 ಕ್ಯೂಸೆಕ್
ರಾಜ್ಯಕ್ಕೆ ಈ ಬಾರಿ ಮುಂಗಾರು ಮಳೆ ಜೂನ್ ಆರಂಭದಲ್ಲೇ ಎಂಟ್ರಿ ಕೊಟ್ಟಿದ್ದು, ಬಹುತೇಕ ಜಿಲ್ಲೆಗಲ್ಲಿ ಭಾರೀ ಮಳೆಯಿಂದಾಗಿ ಆರ್ಭಟದಿಂದ ದೊಡ್ಡ ದೊಡ್ಡ ಅವಾಂತರಗಳೇ ಸಂಭವಿಸಿವೆ. ಮತ್ತೊಂದೆಡೆ, ಪ್ರಮುಖ ಜಲಾಶಯಗಳು ಸೇರಿದಂತೆ ಇನ್ನಿತರೆ ಜಲಮೂಲಗಳು ಭರ್ತಿಯಾದ ಕಾರಣ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅಲ್ಲದೆ, ಮುಂದಿನ ವರ್ಷ ನೀರಿನ ಅಭಾವ ಎದುರಾಗಂತಹ ಪರಿಸ್ಥಿತಿ ಎದುರಾಗದಂತೆ ಆಗಿದೆ.
ಇದೀಗ ಸದ್ಯ ಮಳೆರಾಯನ ಆರ್ಭಟ ಸಂಪೂರ್ಣ ತಗ್ಗಿದ್ದು, ಕೆಲವೆಡೆ ಮಾತ್ರ ಪ್ರತ್ಯೇಕವಾಗಿ ಅಲ್ಲಲ್ಲಿ ಸಾಧಾರಣ ಮಳೆ ಆಗುತ್ತಿದೆ. ಮತ್ತೊಂದೆಡೆ, ಮಳೆ ತಗ್ಗಿದ ಕಾರಣ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಕಡಿಮೆ ಆಗಿದೆ. ಇದೀಗ ಸದ್ಯ ರಾಜ್ಯದಲ್ಲಿ ಶೀತಗಾಳಿ ಬೀಸುತ್ತಿದ್ದು, ಈ ನಡುವೆಯೇ ಕೆಲವೆಡೆ ಮಳೆಯೂ ಮುಂದುವರೆದಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications