Karnataka Dam Water Level: ಸೆಪ್ಟೆಂಬರ್ 2ರಂದು ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ? ಮಾಹಿತಿ ಇಲ್ಲಿದೆ
Karnataka Dams Water Level: ರಾಜ್ಯಕ್ಕೆ ಜೂನ್ ಆರಂಭದಿಂದಲಗಲೇ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದು, ಅಬ್ಬರದ ಮಳೆಯಿಂದ ಬತ್ತುವ ಹಂತ ತಲುಪಿದ್ದ ಬಹುತೇಕ ಪ್ರಮುಖ ಜಲಾಶಯಗಳು ತುಂಬಿವೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಇಂದು (ಸೆಪ್ಟೆಂಬರ್ 02) ಯಾವ್ಯಾವ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ಈ ಬಾರಿ ಭಾರೀ ಮಳೆ ಹಿನ್ನೆಲೆ ಜಲಮೂಲಗಳಿಗೆ ಜೀವಕಳೆ ಬಂದಂತಾಗಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಮತ್ತೊಂದೆಡೆ ಬಹುತೇಕ ಪ್ರಮುಖ ಜಲಾಶಯಗಳು ತುಂಬಿದ್ದು, ಇನ್ನೂ ಕೆಲವು ಭರ್ತಿಯಾಗುವ ಹಂತದಲ್ಲಿವೆ. ಹಾಗಾದರೆ ಇಂದು (ಸೆಪ್ಟೆಂಬರ್ 2) ಕೆಆರ್‌ಎಸ್ (ಕೃಷ್ಣರಾಜ ಸಾಗರ) ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಈಗಾಗಲೇ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಹಾಸನ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದು ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಇನ್ನು ದಾವಣಗೆರೆ, ಚಿತ್ರದುರ್ಗ, ಕಲಬುರಗಿ, ಬೀದರ್, ಗುಲ್ಬರ್ಗ, ತುಮಕೂರು ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ.
1. ತುಂಗಭದ್ರಾ ಜಲಾಶಯ
* ಗರಿಷ್ಠ ಮಟ್ಟ : 105.788 ಟಿಎಂಸಿ
* ಇಂದಿನ ಮಟ್ಟ : 98.01 ಟಿಎಂಸಿ
* ಇಂದಿನ ಒಳ ಹರಿವು : 30,031 ಕ್ಯೂಸೆಕ್
* ಇಂದಿನ ಹೊರ ಹರಿವು : 15,234 ಕ್ಯೂಸೆಕ್
2. ಕೆಆರ್‌ಎಸ್ ಜಲಾಶಯ
* ಗರಿಷ್ಠ ಮಟ್ಟ : 124.80 ಅಡಿ
* ಇಂದಿನ ಮಟ್ಟ : 124.39 ಅಡಿ
* ಇಂದಿನ ಒಳ ಹರಿವು : 11,729 ಕ್ಯೂಸೆಕ್
* ಇಂದಿನ ಹೊರ ಹರಿವು : 10,715 ಕ್ಯೂಸೆಕ್
3. ಕಬಿನಿ ಜಲಾಶಯ
* ಗರಿಷ್ಠ ಮಟ್ಟ: 2284 ಅಡಿ
* ಇಂದಿನ ಮಟ್ಟ: 2283.63 ಅಡಿ
* ಇಂದಿನ ಒಳ ಹರಿವು: 8,025 ಕ್ಯೂಸೆಕ್
* ಇಂದಿನ ಹೊರ ಹರಿವು: 70,000 ಕ್ಯೂಸೆಕ್
4. ಲಿಂಗನಮಕ್ಕಿ ಜಲಾಶಯ
* ಗರಿಷ್ಟ ನೀರಿನ ಮಟ್ಟ: 1819 ಅಡಿ
* ಇಂದಿನ ನೀರಿನ ಮಟ್ಟ: 1817.50 ಅಡಿ
* ಒಳ ಹರಿವು: 16,283 ಕ್ಯೂಸೆಕ್
* ಹೊರ ಹರಿವು: 16,230 ಕ್ಯೂಸೆಕ್
5. ಭದ್ರಾ ಜಲಾಶಯ
* ಗರಿಷ್ಟ ಮಟ್ಟ: 186 ಅಡಿ
* ಇಂದಿನ ನೀರಿನ ಮಟ್ಟ: 183.00 ಅಡಿ
* ಒಳ ಹರಿವು: 7128 ಕ್ಯೂಸೆಕ್
* ಹೊರ ಹರಿವು: 5948 ಕ್ಯೂಸೆಕ್
6. ತುಂಗಾ ಜಲಾಶಯ
* ಗರಿಷ್ಟ ಮಟ್ಟ: 588.24 ಮೀಟರ್
* ಇಂದಿನ ಮಟ್ಟ 588.24 ಮೀಟರ್
* ಒಳ ಹರಿವು: 9,337 ಕ್ಯೂಸೆಕ್
* ಹೊರ ಹರಿವು: 9,337 ಕ್ಯೂಸೆಕ್
7. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ: 123.081 ಟಿಎಂಸಿ
*ಇಂದಿನ ನೀರಿನ ಮಟ್ಟ: 117.038 ಟಿಎಂಸಿ
* ಇಂದಿನ ಒಳಹರಿವು: 1,32,611 ಕ್ಯೂಸೆಕ್
* ಇಂದಿನ ಹೊರಹರಿವು: 1,32,611 ಕ್ಯೂಸೆಕ್












Click it and Unblock the Notifications