Karnataka Dams Water Level:ಕೆಆರ್‌ಎಸ್ ಸೇರಿ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ; ಜೂನ್ 28ರ ಅಂಕಿಅಂಶಗಳು ಇಲ್ಲಿವೆ
Karnataka Dam Water Level: ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆ. ಈ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆ, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಅಲ್ಲದೆ, ಕೆಲ ಜಲಾಶಯಗಳು ಸಹ ಭರ್ತಿಯಾದರೆ, ಇನ್ನೂ ಕೆಲವು ತುಂಬವ ಹಂತದಲ್ಲಿವೆ. ಹಾಗಾದರೆ ಇಂದು (ಜೂನ್ 28) ಮಂಡ್ಯ, ಮೈಸೂರು, ಬೆಂಗಳೂರು ಜೀನವಾಡಿ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಸೇರಿ ರಾಜ್ಯದಲ್ಲಿನ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.
ಕಳೆದ ಕೆಲ ದಿನಗಳಿಂದ ತಗ್ಗಿದ್ದ ಮುಂಗಾರು ಮಳೆ ಆರ್ಭಟ ಇದೀಗ ಮತ್ತೆ ಚುರು ಪಡೆದಿದ್ದು, ಪರಿಣಾಮ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಮತ್ತೊಂದೆಡೆ ಭಾರೀ ಮಳೆಯಿಂದ ಕೆಲ ಜಲಾಶಯಗಳು ಭರ್ತಿಯಾಗಿವೆ. ಇನ್ನೂ ಕಲವು ತುಂಬುವ ಹಂತದಲ್ಲಿವೆ. ಹಾಗಾದರೆ ಇಂದು ಕೆಆರ್‌ಎಸ್ (ಕೃಷ್ಣರಾಜ ಸಾಗರ), ತುಂಗಾಭದ್ರಾ, ಭದ್ರಾ, ಕಬಿನಿ, ಹೇಮಾವತಿ, ಮಲಪ್ರಭಾ, ಘಟಪ್ರಭಾ, ಹಾರಂಗಿ, ಆಲಮಟ್ಟಿ, ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 121 ಅಡಿ
* ಒಳಹರಿವು - 52,829 ಕ್ಯೂಸೆಕ್
* ಹೊರಹರಿವು - 40,000 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,279.40 ಅಡಿ
* ಒಳಹರಿವು - 31,847 ಕ್ಯೂಸೆಕ್
* ಹೊರಹರಿವು - 30,000 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ - 516.97 ಮೀಟರ್
* ಒಳಹರಿವು - 1,20,861 ಕ್ಯೂಸೆಕ್
* ಹೊರಹರಿವು - 90,000 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಒಟ್ಟು ಸಾಮರ್ಥ್ಯ - 105.79 ಟಿಎಂಸಿ
* ಇಂದಿನ ನೀರಿನ ಮಟ್ಟ- 1,618.32 ಅಡಿ
* ಒಳಹರಿವು - 44,569 ಕ್ಯೂಸೆಕ್
* ಹೊರಹರಿವು - 201 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಒಟ್ಟು ಸಾಮರ್ಥ್ಯ - 49.45 ಟಿಎಂಸಿ
* ಇಂದಿನ ನೀರಿನ ಮಟ್ಟ - 2,059.35 ಅಡಿ
* ಒಳಹರಿವು - 10,032 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1,783.20 ಅಡಿ
* ಒಳಹರಿವು - 37,635 ಕ್ಯೂಸೆಕ್
* ಹೊರಹರಿವು - 3,960 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 159.6 ಅಡಿ
* ಒಳಹರಿವು - 26,646 ಕ್ಯೂಸೆಕ್
* ಹೊರಹರಿವು - 1,287 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಒಟ್ಟು ಸಾಮರ್ಥ್ಯ - 51 ಟಿಎಂಸಿ
* ಇಂದಿನ ನೀರಿನ ಮಟ್ಟ - 2,139 ಅಡಿ
* ಒಳಹರಿವು - 23,910 ಕ್ಯೂಸೆಕ್
* ಹೊರಹರಿವು - 100 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಒಟ್ಟು ಸಾಮರ್ಥ್ಯ - 37.10 ಟಿಎಂಸಿ
* ಇಂದಿನ ನೀರಿನ ಮಟ್ಟ - 2,915.91 ಅಡಿ
* ಒಳಹರಿವು - 37,258 ಕ್ಯೂಸೆಕ್
* ಹೊರಹರಿವು - 36,105 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಒಟ್ಟು ಸಾಮರ್ಥ್ಯ - 8.5 ಟಿಎಂಸಿ
* ಇಂದಿನ ನೀರಿನ ಮಟ್ಟ - 2,850.84 ಅಡಿ
* ಒಳಹರಿವು - 7,445 ಕ್ಯೂಸೆಕ್
* ಹೊರಹರಿವು - 7,833 ಕ್ಯೂಸೆಕ್
ಒಟ್ಟಿನಲ್ಲಿ ಹೇಳುವುದಾದರೆ, ಬಹುತೇಕ ಜಲಾಶಯಗಳ ಒಳಹರಿವು ಹೆಚ್ಚಾಗುತ್ತಿದೆ. ಕೆಲ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿದ್ದು, ಬಾಗಿನ ಅರ್ಪಣೆಗೆ ಸಜ್ಜಾಗಿ ನಿಂತಿವೆ. ಅದರಲ್ಲೂ ಈ ಬಾರಿ ಮಂಡ್ಯ, ಮೈಸೂರು, ಬೆಂಗಳೂರು ಜೀವನಾಡಿ ಡ್ಯಾಂ ಆಗಿರುವ ಕೆಆರ್‌ಎಸ್ ಭರ್ತಿಯಾಗಿದ್ದು, ಈ ಭಾಗಗಳ ಜನರ ಮುಖದಲ್ಲಿ ಸಂತಸ ಮನೆ ಮೂಡಿಸಿದೆ. ಮತ್ತೊಂದೆಡೆ ಕಾವೇರಿ ನದಿ ತೀರದ ಜನರಿಗೆ ಪ್ರವಾಹದ ಆತಂಕ ಎದುರಾಗಿದೆ.












Click it and Unblock the Notifications