2015ರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ
ಬೆಂಗಳೂರು, ನವೆಂಬರ್ 13 : 2015ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ. ಡೆಕ್ಕನ್ ಹೆರಾಲ್ಡ್ ಸಹಸಂಪಾದಕ ಕೆ.ಸುಬ್ರಮಣ್ಯ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಗಿದೆ. ಒಟ್ಟು 40 ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶುಕ್ರವಾರ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಅವರು ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅತ್ಯುತ್ತಮ ಜಿಲ್ಲಾ ಪತ್ರಿಕೆ ನೀಡುವ ಆಂದೋಲನ ಪ್ರಶಸ್ತಿ 2015ಕ್ಕೆ ಶಿರಸಿಯ 'ಲೋಕಧ್ವನಿ' ಪತ್ರಿಕೆಯನ್ನು ಆಯ್ಕೆ ಮಾಡಲಾಗಿದೆ. [2014ರ ಪ್ರಶಸ್ತಿ ವಿಜೇತರು]

ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ 2015 ಸಂಯುಕ್ತ ಕರ್ನಾಟಕದ ಸುಭಾಷ ಬಣಗಾರ ಅವರಿಗೆ ಸಿಕ್ಕಿದೆ. 'ಗಂಡು ಮಗುವಿನ ಆಸೆ : ಹೆರುವ ಯಂತ್ರಗಳಾಗುತ್ತಿರುವ ತಾಂಡಾದ ಮಹಿಳೆಯರು' ಲೇಖನಕ್ಕೆ ಪ್ರಶಸ್ತಿ ಲಭಿಸಿದೆ.
ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿ 2015 ಕನ್ನಡಪ್ರಭದ ಆರ್.ಮಂಜುನಾಥ್ (ಕೆರೆ ಮಂಜುನಾಥ್) ಅವರಿಗೆ ಸಿಕ್ಕಿದೆ. 'ಸಂಸ್ಕರಿಸಿದ ಹೆಸರಿನಲ್ಲಿ ಕೆರೆಗಳ ಸೇರುವ ವಿಷಜಲ' ಲೇಖನಕ್ಕೆ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಪಡೆದವರ ಪಟ್ಟಿ
* ಕೆ.ಸುಬ್ರಮಣ್ಯ - ಸಹ ಸಂಪಾದಕರು, ಡೆಕ್ಕನ್ ಹೆರಾಲ್ಡ್ (ವಿಶೇಷ ಪ್ರಶಸ್ತಿ)
* ಎನ್.ಎಸ್.ಶಂಕರ್ - ಬೆಂಗಳೂರು
* ಚಿದಂಬರ ಬೈಕಂಪಾಡಿ - ಮಂಗಳೂರು
* ಸಂಪತ್ ಕುಮಾರ್ (ಪ.ಸ.ಕುಮಾರ್) - ಬೆಂಗಳೂರು
* ಜಿ.ಯು.ಭಟ್ - ಕಾರವಾರ
* ಆರ್.ಎಲ್.ವಾಸುದೇವರಾವ್ - ಮಂಡ್ಯ
* ಆನಂದ ಯಮನೂರು - ಹುಬ್ಬಳ್ಳಿ-ಧಾರವಾಡ
* ಬಿ.ಎಸ್.ಸತ್ಯನಾರಾಯಣ (ಬಿ.ಎಸ್.ಸತ್ಯ) - ಬೆಂಗಳೂರು
* ಕೆ.ಪ್ರಹ್ಲಾದ ರಾವ್ - ಕೋಲಾರ
* ಸಿ.ಎಂ.ಮುನಿಯಪ್ಪ - ಕೋಲಾರ
* ಕೆ.ಸತ್ಯನಾರಾಯಣ - ರಾಯಚೂರು
* ಎಸ್.ಗಿರೀಶ್ ಬಾಬು - ಬೆಂಗಳೂರು
* ಪಿ.ಜೆ.ಚೈತನ್ಯ ಕುಮಾರ್ - ಮಂಡ್ಯ
* ಖಾಜಿ ಅಲಿಯೊದ್ದಿನ್ (ಅಲಿಬಾಬಾ) - ಬೀದರ್
* ಯತೀಶ ಕುಮಾರ್ - ಬೆಂಗಳೂರು
* ಟಿ.ಪಿ.ರಮೇಶ್ - ಕೊಡಗು
* ಟಿ.ಜೆ.ಶೆಟ್ಟಿ - ಮಂಗಳೂರು
* ಮುತ್ತು ನಾಯ್ಕರ - ಗದಗ
* ಅಮರಪ್ಪ ಗುಂಡಪ್ಪ ಕಾಟರಗಿ - ಕೊಪ್ಪಳ
* ನೀಳಾ ಎಂ.ಎಚ್. - ಮೈಸೂರು
* ಟಿ.ಎನ್.ಷಣ್ಮುಖ - ಚಿತ್ರದುರ್ಗ
* ಪ್ರಹ್ಲದ ರಂಗಾಚಾರ್ಯ ಪಂಡರಿ - ಹುಬ್ಬಳ್ಳಿ
* ರಾಧಾ ಹಿರೇಗೌಡರ್ - ಕಾರವಾರ
* ಜಿ.ಇಂದ್ರಕುಮಾರ್ - ತುಮಕೂರು
* ಮಳಲಿ ನಟರಾಜ್ ಕುಮಾರ್ - ಮೈಸೂರು
* ಕೆ.ವೆಂಕಟೇಶ್ - ಛಾಯಾಗ್ರಾಹಕರು ಬೆಂಗಳೂರು
* ಎಂ.ಎಸ್.ಚಂದ್ರಯ್ಯ - ಚಿಕ್ಕಮಗಳೂರು
* ಸಂಜೀವ ಕುಲಕರ್ಣಿ - ಯಾದಗಿರಿ
* ಟಿ.ವಿ.ರಾಜೇಶ್ವರ - ಮೈಸೂರು
* ಬಿ.ಎನ್.ರಮೇಶ್ - ಬೆಂಗಳೂರು
* ಬಿ.ಎನ್.ಮಲ್ಲೇಶ್ - ದಾವಣಗೆರೆ
* ಆರ್.ಕೃಷ್ಣಕುಮಾರ್ - ಮೈಸೂರು
* ಬಾಬುವಾಲಿ (ನಿಂಗಪ್ಪಾ) - ಬೀದರ್
* ಕೆ.ಎಸ್.ಸೋಮಶೇಖರ್ (ಸೋಮಣ್ಣ) - ತಿಪಟೂರು
* ಎಂ. ಮಂಜುನಾಥ ಬಮ್ಮನಕಟ್ಟಿ - ಗದಗ
* ಎಂ.ಆರ್.ಜಯರಾಮು (ಮತ್ತಿಕೆರೆ ಜಯರಾಮು) -ರಾಮನಗರ
* ಟಿ.ಅಬ್ದುಲ್ ಹಲೀಮ್ ಮನ್ಸೂರ್ - ಬೆಂಗಳೂರು
* ಕೆ.ಪಿ.ಮಂಜುನಾಥ ಸಾಗರ್ - ಮಂಗಳೂರು
* ನಿಂಗಪ್ಪ ಛಾವಡಿ - ಹಾವೇರಿ
* ಆರ್.ಪಿ.ಸಾಂಬಶಿವ ರೆಡ್ಡಿ - ಪಾವಗಡ
* ಟಿ.ಎಸ್.ಗಟ್ಟಿ - ತುಮಕೂರು












Click it and Unblock the Notifications