ಲೋಕಾಯುಕ್ತದ ಭ್ರಷ್ಟಾಚಾರದಲ್ಲಿ ಅಕ್ರಮ ಹಣ ವರ್ಗಾವಣೆ?
ಬೆಂಗಳೂರು, ಅಕ್ಟೋಬರ್ 03 : ಕರ್ನಾಟಕ ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ ಕೈ ಜೋಡಿಸಿದೆ. ಈ ಹಗರಣದಲ್ಲಿ ಹವಾಲಾ ಹಣ ಸಾಗಣೆ ಬಗ್ಗೆ ಅದು ತನಿಖೆ ಕೈಗೊಳ್ಳಲಿದೆ.
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಎಸ್‌ಐಟಿ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಸುಮಾರು 1 ಕೋಟಿ ರೂ. ಮೊತ್ತದ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದೆ. ಇದು ಹವಾಲಾ ಹಣವೇ? ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ. [ಲೋಕಾಯುಕ್ತದ ಭ್ರಷ್ಟಾಚಾರ, ಐವರ ವಿರುದ್ಧ ಚಾರ್ಜ್ ಶೀಟ್]

ಪ್ರಾಥಮಿಕವಾದ ಮಾಹಿತಿಗಳ ಅನ್ವಯ ಲೋಕಾಯುಕ್ತದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ತೀರ್ಮಾನಿದೆ. ಆದ್ದರಿಂದ, 'ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002'ರ ಅನ್ವಯ ಈ ಕುರಿತು ತನಿಖೆ ನಡೆಯಲಿದೆ. [ಲೋಕಾಯುಕ್ತದ ಭ್ರಷ್ಟಾಚಾರ 4 ಪ್ರಮುಖ ಬೆಳವಣಿಗೆಗಳು]
2014 ರಿಂದ 2015ರ ತನಕ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರ ಪುತ್ರ ಅಶ್ವಿನ್ ರಾವ್ ಅವರು 1 ಕೋಟಿ ರೂ.ಗಳ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯ ಅಶ್ವಿನ್ ರಾವ್ ಅವರಿಗೆ ಹಣವನ್ನು ನೀಡಿದ ಡಾ.ವಿಲ್ಸನ್ ಅವರನ್ನು ವಿಚಾರಣೆ ನಡೆಸಲು ತೀರ್ಮಾನಿಸಿದೆ.
ಅಶ್ವಿನ್ ರಾವ್ ತನ್ನ ಸಹಚರರಿಗೆ ಹಣವನ್ನು ವರ್ಗಾವಣೆ ಮಾಡಿದ್ದು, ಈ ಕುರಿತು ಜಾರಿ ನಿರ್ದೇಶನಾಲಯದ ತನಿಖೆ ನಡೆಯಲಿದೆ. ಲೋಕಾಯುಕ್ತದಲ್ಲಿನ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಎಸ್‌ಐಟಿ ಈಗಾಗಲೇ 5 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.












Click it and Unblock the Notifications