1951 ರಿಂದ 2019ರ ತನಕ ಕರ್ನಾಟಕದ ಲೋಕಸಭೆ ಫಲಿತಾಂಶ
ಬೆಂಗಳೂರು, ಮೇ 27 : 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ 1 ಸ್ಥಾನದಲ್ಲಿ ಜಯಗಳಿಸಿದೆ. 1951ರಲ್ಲಿ ನಡೆದ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ 10 ಸ್ಥಾನದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ 28 ಕ್ಷೇತ್ರಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಜಯಗಳಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದರೂ ಕಾಂಗ್ರೆಸ್ ಸಾಧನೆ ತೃಪ್ತಿಕರವಾಗಿಲ್ಲ.
ಲೋಕಸಭಾ ಚುನಾವಣೆ : ಕರ್ನಾಟಕದಿಂದ ಮೊದಲ ಬಾರಿ ಗೆದ್ದ 10 ಸಂಸದರು
1951 ರಿಂದ 2019ರ ತನಕ ವಿವಿಧ ಪಕ್ಷಗಳು ರಾಜ್ಯದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡಿವೆ. ಮೊದಲು ರಾಜ್ಯದಲ್ಲಿ 11 ಲೋಕಸಭಾ ಕ್ಷೇತ್ರಗಳಿತ್ತು. ಈಗ ಅದು 28ಕ್ಕೆ ಏರಿಕೆಯಾಗಿದೆ. ಆದರೆ, ಪಕ್ಷಗಳ ಸಂಖ್ಯೆ ಹೆಚ್ಚಾಗಿಲ್ಲ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಬಿಜೆಪಿ, ಕಾಂಗ್ರೆಸ್, ಜನತಾಪಕ್ಷ, ಜನತಾದಳ ಲೋಕಶಕ್ತಿ ಪಕ್ಷದ ಅಭ್ಯರ್ಥಿಗಳು ರಾಜ್ಯದಲ್ಲಿ ಗೆಲುವು ದಾಖಲಿಸುತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯೊಬ್ಬರು (ಸುಮಲತಾ) ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ ಸಂಸತ್ ಪವೇಶಿಸಿದ್ದಾರೆ.

1951 ರಿಂದ 1971
* 1951 ಕಾಂಗ್ರೆಸ್ 10, ಕೆಎಂಪಿಪಿ 1 (ಒಟ್ಟು ಸ್ಥಾನ 11)
* 1956 ಕಾಂಗ್ರೆಸ್ 23, ಇತರೆ 3 (ಒಟ್ಟು 26)
* 1962 ಕಾಂಗ್ರೆಸ್ 25, ಎಲ್‌ಎಸ್‌ಎಸ್ 1 (ಒಟ್ಟು 26)
* 1967 ಕಾಂಗ್ರೆಸ್ 18, ಇತರೆ 9 (ಒಟ್ಟು 27)
* 1971 ಕಾಂಗ್ರೆಸ್ 27, ಇತರೆ 0 (ಒಟ್ಟು 27)

1977 ರಿಂದ 1989
* 1977 ಕಾಂಗ್ರೆಸ್ 26, ಜನತಾ ಪಕ್ಷ 2 (ಒಟ್ಟು 28)
* 1980 ಕಾಂಗ್ರೆಸ್ 27, ಜನತಾ ಪಕ್ಷ 1
* 1984 ಕಾಂಗ್ರೆಸ್ 24, ಜನತಾ ಪಕ್ಷ 4
* 1989 ಕಾಂಗ್ರೆಸ್ 26, ಜನತಾ ಪಕ್ಷ 2

1991 ರಿಂದ 1999
* 1991 ಕಾಂಗ್ರೆಸ್ 23, ಬಿಜೆಪಿ 4, ಜನತಾದಳ 1
* 1996 ಜನತಾದಳ 16, ಬಿಜೆಪಿ 6, ಕಾಂಗ್ರೆಸ್ 5, ಕೆಸಿಪಿ 1
* 1998 ಬಿಜೆಪಿ 13, ಲೋಕಶಕ್ತಿ 3, ಕಾಂಗ್ರೆಸ್ 9, ಜನತಾದಳ 3
* 1999 ಕಾಂಗ್ರೆಸ್ 18, ಬಿಜೆಪಿ 7, ಜೆಡಿಯು 3

2004 ರಿಂದ 2014
* 2004 ಬಿಜೆಪಿ 18, ಕಾಂಗ್ರೆಸ್ 8, ಜೆಡಿಎಸ್ 2
* 2009 ಬಿಜೆಪಿ 19, ಕಾಂಗ್ರೆಸ್ 6, ಜೆಡಿಎಸ್ 2
* 2014 ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2
* 2019 ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರ 1