ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ಈ ಹೆಸರುಗಳು ಬಹುತೇಕ ಅಂತಿಮ- ಖ್ಯಾತ ನಟಿಯೊಬ್ಬರಿಗೆ ಒಲಿದ ಅದೃಷ್ಟ?
ಬೆಂಗಳೂರು, ಆಗಸ್ಟ್ 08: ಎರಡು ತಿಂಗಳಿಂದ ತೆರುವಾಗಿರುವ ಮೂರು ವಿಧಾನಪರಿಷತ್ ಸ್ಥಾನಗಳಿಗೆ ಶೀಘ್ರವೇ ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮೂವರು ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. ಅವರ ಹೆಸರುಗಳನ್ನು ಕಾಂಗ್ರೆಸ್ ಪಕ್ಷವು ಬಹುತೇಕ ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಶಿಷ್ಟಾಚಾರದ ಪ್ರಕಾರ, ಸಂಪುಟವು ನಾಮನಿರ್ದೇಶನಗಳನ್ನು ನಿರ್ಧರಿಸುತ್ತದೆ. ಔಪಚಾರಿಕವಾಗಿ ನಿರ್ಧಾರವನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡುತ್ತದೆ. ನಂತರ ಮುಖ್ಯಮಂತ್ರಿಗಳು ಹೆಸರುಗಳನ್ನು ರಾಜ್ಯಪಾಲರಿಗೆ ರವಾನಿಸಲಿದ್ದು, ಅವರು ಒಪ್ಪಿಗೆ ನೀಡಲಿದ್ದಾರೆ.

ಸದ್ಯದಲ್ಲೇ ಸಚಿವ ಸಂಪುಟ ಸಭೆ ಸೇರಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಉಮಾಶ್ರೀ ಉಮೇದುವಾರಿಕೆಗೆ ಸಿದ್ದರಾಮಯ್ಯ ಬೆಂಬಲ ನೀಡಿರುವುದು ಗೊತ್ತಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಸುಧಾಮ್ ದಾಸ್ ಪರ ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಂಆರ್ ಸೀತಾರಾಮ್, ಎಚ್‌ಪಿ ಸುಧಾಮ್ ದಾಸ್ ಮತ್ತು ಉಮಾಶ್ರೀ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ತೆಲಂಗಾಣ ಉಸ್ತುವಾರಿ ಎಐಸಿಸಿ ಪದಾಧಿಕಾರಿಗಳಲ್ಲಿ ಒಬ್ಬರಾಗಿರುವ ಮನ್ಸೂರ್ ಖಾನ್ ಅವರ ಹೆಸರನ್ನು ಈ ಹಿಂದೆಯೇ ಅಂತಿಮಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಈಗ ಅವರು ಮಾಜಿ ಸಚಿವೆ ಉಮಾಶ್ರೀ ಅವರಿಗೆ ದಾರಿ ಮಾಡಿಕೊಡಬೇಕೆಂದು ಪಕ್ಷ ನಿರ್ಧರಿಸಿದೆ.
ಅಬ್ದುಲ್ ಜಬ್ಬಾರ್ ಅವರಿಗೆ ಅವಕಾಶ ಕಲ್ಪಿಸಲು ಕೊನೆಯ ಕ್ಷಣದಲ್ಲಿ ಮನ್ಸೂರ್ ಅಲಿ ಹೆಸರನ್ನು ತೆಗೆದುಹಾಕಲಾಯಿತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮಾಶ್ರೀ ಪರವಾಗಿ ಬ್ಯಾಟ್ ಬೀಸಿದ್ದಾರೆ ಎಂದು ತಿಳಿದುಬಂದಿದೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮನ್ಸೂರ್ ಅವರ ಪ್ರಯತ್ನಿಸಿದ್ದರು. ಆದರೆ, ಮಾಜಿ ಶಾಸಕ ಆರ್‌ವಿ ದೇವರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.
ಸಂಭಾವ್ಯ ನಾಮನಿರ್ದೇಶಿತರಲ್ಲಿ, ಸುಧಾಮ್ ದಾಸ್ ಅವರು ವೃತ್ತಿ ಆದಾಯ ಸೇವಾ ಅಧಿಕಾರಿಯಾಗಿದ್ದು, ಅವರು ಆರು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಅವರು ಎಸ್‌ಸಿ ಎಡ ಸಮುದಾಯದಿಂದ ಬಂದವರು.
ಸೀತಾರಾಮ್ ಅವರು ಶಿಕ್ಷಣ ತಜ್ಞರಾಗಿದ್ದಾರೆ. ಮಾಜಿ ಸಚಿವರು ಮತ್ತು ಮಾಜಿ ಶಾಸಕರಾಗಿದ್ದಾರೆ. ಅವರು ಮಲ್ಲೇಶ್ವರಂ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಉಮಾಶ್ರೀ ಅವರು 2013 ರಲ್ಲಿ ತೇರದಾಳ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.
75 ಸದಸ್ಯ ಬಲದ ವಿಧಾನ ಪರಿಷತ್ತಿಗೆ ಈ ಮೂವರು ನೇರವಾಗಿ ಆಯ್ಕೆಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಚುನಾವಣೆಯನ್ನು ಎದರಿಸಬೇಕಾಗಿಲ್ಲ.
ಎರಡು ತಿಂಗಳ ಹಿಂದೆ ಮಾಜಿ ಮೇಯರ್ ಪಿಆರ್ ರಮೇಶ್, ಚಿತ್ರ ನಿರ್ಮಾಪಕ ಮೋಹನ್ ಕೊಂಡಜ್ಜಿ ಮತ್ತು ಸಾಮಾಜಿಕ ಕಾರ್ಯಕರ್ತ ಸಿ ಎಂ ಲಿಂಗಪ್ಪ ಅವರ ಎಂಎಲ್‌ಸಿ ಅವಧಿ ಮುಗಿದಿದೆ. ಈ ಮೂರು ಸ್ಥಾನಕ್ಕೆ ಎಂಎಲ್‌ಸಿಗಳನ್ನು ಆಯ್ಕೆ ಮಾಡಬೇಕಿದೆ. ಎಂಎಲ್‌ಸಿಯ ಅವಧಿ ಆರು ವರ್ಷ ಇರುತ್ತದೆ.












Click it and Unblock the Notifications