Breaking: ನೂತನ 7 ಎಂಎಲ್‌ಸಿಗಳಿಂದ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು, ಜೂ. 16: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಇತ್ತೀಚೆಗೆ ನೇಮಕವಾದ ಏಳು ಮಂದಿ ಸದಸ್ಯರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
ಕರ್ನಾಟಕ ವಿಧಾನ ಪರಿಷತ್ ಸಭಾಧ್ಯಕ್ಷ ರಘುನಾಥ ರಾವ್ ಮಲ್ಕಾಪುರೆ ಅವರು ನೂತನ ಸದಸ್ಯರಿಗೆ ಹೂಗುಚ್ಛ ನೀಡಿ ಅಭಿನಂದಿಸಿ, ಬಳಿಕ ಪ್ರಮಾಣವಚನ ಬೋಧಿಸಿದರು.

Recommended Video
IPL ಮ್ಯಾಚ್ ನಲ್ಲಿ ಒಂದು ಬೌಲ್ ಮತ್ತು ಒಂದು ಓವರ್ ನಿಂದ BCCIಬಾಚಿಕೊಳ್ಳೋ ದುಡ್ಡೆಷ್ಟು?|*Cricket|OneIndia Kannada
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್ ಹಾಗೂ ಎಸ್. ಕೇಶವಪ್ರಸಾದ್, ಕಾಂಗ್ರೆಸ್‌ನ ಎಂ. ನಾಗರಾಜು ಯಾದವ್, ಕೆ ಅಬ್ದುಲ್ ಜಬ್ಬಾರ್ ಹಾಗೂ ಜೆಡಿಎಸ್‌ನ ಟಿ.ಎ. ಸರವಣ ಅವಿರೋಧವಾಗಿ ಆಯ್ಕೆಯಾಗಿದ್ದರು.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್ ಇದ್ದರು.












Click it and Unblock the Notifications