ಕರ್ನಾಟಕದ ವಿಧಾನಪರಿಷತ್ ಚುನಾವಣೆ, ಮತ ಎಣಿಕೆ, ಫಲಿತಾಂಶ

ಬೆಂಗಳೂರು, ಜೂನ್ 15: ಕರ್ನಾಟಕದ ವಿಧಾನಪರಿಷತ್ತಿನ 4 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟಣೆಗೆ ಚುನಾವಣಾ ಆಯೋಗ ಸಜ್ಜಾಗಿದೆ. ಜೂನ್ 14ರಂದು ಬೆಳಗ್ಗೆ 8 ರಿಂದ ಮತ ಎಣಿಕೆ ಆರಂಭವಾಗಲಿದೆ.

ಜೂನ್ 13ರಂದು ಬೆಳಗ್ಗೆ ಮತದಾನ ನಡೆಸಲಾಗಿತ್ತು. ವಾಯುವ್ಯ ಪದವೀಧರರ, ವಾಯುವ್ಯ ಶಿಕ್ಷಕರ, ದಕ್ಷಿಣ ಪದವೀಧರರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗಿತ್ತು. ಒಟ್ಟಾರೆ, ಶೇ 73 ರಷ್ಟು ಮತದಾನ ದಾಖಲಾಗಿತ್ತು.

ಮತಪತ್ರಗಳ ಎಣಿಕೆ ಜೊತೆಗೆ ಪ್ರಾಶಸ್ತ್ಯ ಮತಗಳ ಎಣಿಕೆಯಾಗಬೇಕಾಗಿದ್ದು, ಬುಧವಾರ ತಡರಾತ್ರಿ ಅಥವಾ ಗುರುವಾರ ಬೆಳಗ್ಗೆ ವೇಳೆಗೆ ಪೂರ್ಣಪ್ರಮಾಣದಲ್ಲಿ ಫಲಿತಾಂಶ ಹೊರ ಬರುವ ಸಾಧ್ಯತೆಯಿದೆ.

Karnataka Legislative council Election results 2022 for four seats

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಕಾಂಗ್ರೆಸ್‍ನ ಪ್ರಕಾಶ್ ಹುಕ್ಕೇರಿ ಮುಂತಾದವರ ಭವಿಷ್ಯ ನಿರ್ಧಾರವಾಗಲಿದೆ. ಹೊರಟ್ಟಿ ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಎರಡು ಸ್ಥಾನಗಳನ್ನು ಗೆದ್ದು ಮೇಲ್ಮನೆಯಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.

ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು,ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ, ಈಗಾಗಲೇ ಮತ ಎಣಿಕೆ ಕೇಂದ್ರಗಳಿಗೆ ಸಾಮಾಗ್ರಿಗಳೊಂದಿಗೆ ಕರ್ತವ್ಯಕ್ಕೆ ತೆರಳಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ನಾಲ್ಕು ಕ್ಷೇತ್ರಗಳಲ್ಲಿ ಮತ ಎಣಿಕೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಗತ್ಯ ಸಿದ್ದತೆ ಮಾಡಿಕೊಂಡಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಅಲ್ಲದೆ, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ವಿಧಾನಪರಿಷತ್ ಚುನಾವಣೆ 2022 ಸಂಕ್ಷಿಪ್ತ ವಿವರ

ಜೂನ್ 13: ಮತದಾನ
ಮತದಾನ ಅವಧಿ: ಬೆಳಗ್ಗೆ 8 ರಿಂದ ಸಂಜೆ 5
ಮತ ಎಣಿಕೆ, ಫಲಿತಾಂಶ: ಜೂನ್ 15
ವಾಯುವ್ಯ ಶಿಕ್ಷಕರ ಕ್ಷೇತ್ರ:

ಮತಗಟ್ಟೆ ಸಂಖ್ಯೆ: 150, ಬೆಳಗಾವಿಯಲ್ಲಿ ಅತಿ ಹೆಚ್ಚು 95 ಮತಗಟ್ಟೆಗಳಿವೆ.
ಮತ ಕ್ಷೇತ್ರದಲ್ಲಿನ ಜಿಲ್ಲೆಗಳು: ಬೆಳಗಾವಿ, ಬಾಗಲಕೋಟೆ, ವಿಜಯಪುರ
ವಾಯುವ್ಯ ಪದವೀಧರರ ಕ್ಷೇತ್ರ:

ಮತಗಟ್ಟೆ ಸಂಖ್ಯೆ: 150
ಮತದಾರರ ಸಂಖ್ಯೆ: 95,598(71, 040 ಪುರುಷರು, 28,554 ಮಹಿಳೆಯರು, 4 ಇತರೆ)
ವಾಯುವ್ಯ ಶಿಕ್ಷಕರ ಕ್ಷೇತ್ರ:

ಮತಗಟ್ಟೆ ಸಂಖ್ಯೆ: 150
ಮತದಾರರ ಸಂಖ್ಯೆ: 25, 388 (17, 238 ಪುರುಷರು ಹಾಗೂ 8,150 ಮಹಿಳೆಯರು)
ಪಶ್ಚಿಮ ಶಿಕ್ಷಕರ ಕ್ಷೇತ್ರ:

ಮತಗಟ್ಟೆ ಸಂಖ್ಯೆ: 176
ಮತ ಕ್ಷೇತ್ರದಲ್ಲಿನ ಜಿಲ್ಲೆಗಳು: ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ.
ಮತದಾರರ ಸಂಖ್ಯೆ: 17, 973 (10, 983 ಪುರುಷರು ಹಾಗೂ 6,990 ಮಹಿಳೆಯರು)
ದಕ್ಷಿಣ ಪದವೀಧರ ಕ್ಷೇತ್ರ:

ಮತಗಟ್ಟೆ ಸಂಖ್ಯೆ: 64
ಮತ ಕ್ಷೇತ್ರದಲ್ಲಿನ ಜಿಲ್ಲೆಗಳು: ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ
ಮತದಾರರ ಸಂಖ್ಯೆ: 1,41, 963 (82,512 ಪುರುಷರು, 59, 427 ಮಹಿಳೆಯರು ಹಾಗೂ 24 ಇತರೆ)

ವಾಯುವ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕಾ, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಂ.ವಿ ರವಿಶಂಕರ್, ಕಾಂಗ್ರೆಸ್‍ನ ಜಿ.ಎಂ.ಮಧು, ಜೆಡಿಎಸ್‍ನ ಎಚ್.ಕೆ.ರಾಮು, ಕನ್ನಡ ಚಳವಳಿ ಪಕ್ಷದಿಂದ ವಾಟಾಳ್ ನಾಗರಾಜ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ, ಜೆಡಿಎಸ್‍ನಿಂದ ಶ್ರೀಶೈಲ ಘಡದಿಮ್ಮಿ ಹಾಗೂ ಕಾಂಗ್ರೆಸ್ ಬಸವರಾಜ ಗುರಿಕಾರ ಅಖಾಡದಲ್ಲಿದ್ದರೆ, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ್‍ಶಹಾಪುರ, ಕಾಂಗ್ರೆಸ್‍ನಿಂದ ಪ್ರಕಾಶ್ ಹುಕ್ಕೇರಿ, ಜೆಡಿಎಸ್‍ನಿಂದ ಚಂದ್ರಶೇಖರ್ ಲೋಣಿ ಸ್ಪರ್ಧಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Recommended Video

      ವಿರಾಟ್ ಕೊಹ್ಲಿ ಮನಸ್ಸನ್ನು ಗೆದ್ರೆ ಟೀಂ ಇಂಡಿಯಾ ಹಾಗೂ RCB ತಂಡದಲ್ಲಿ ಸ್ಥಾನ ಸಿಗುತ್ತೆ! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+