ಎಂಎಲ್ಸಿ ಚುನಾವಣೆ ಶೇ 99.60 ಮತದಾನದ ಅಂದಾಜು

Posted By:
Subscribe to Oneindia Kannada

ಬೆಂಗಳೂರು, ಡಿ. 27: ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಯ ಮತದಾನ ಭಾನುವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡು ಸಂಜೆ 4 ಗಂಟೆ ವೇಳೆಗೆ ಅಂತ್ಯ ಕಂಡಿದೆ.

ಅಧಿಕೃತ ಪ್ರಕಟಣೆ: ರಾಜ್ಯ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣಾ ಪ್ರಕ್ರಿಯೆ ಬಹುತೇಕ ಶಾಂತಿಯುವಾಗಿ ಪೂರ್ಣಗೊಂಡಿದ್ದು, ಶೇ.99.60ರಷ್ಟು ಮತದಾನವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ತಿಳಿಸಿದ್ದಾರೆ.

25 ವಿಧಾನಪರಿಷತ್ ಸದಸ್ಯ ಸ್ಥಾನಕ್ಕಾಗಿ ಕಾಂಗ್ರೆಸ್‌ನ 12, ಬಿಜೆಪಿಯ 7, ಜೆಡಿಎಸ್‌ 5, ಒಬ್ಬ ಪಕ್ಷೇತರ ಸದಸ್ಯರು ಸೇರಿ 2016ರ ಜನವರಿ 5ರಂದು ನಿವೃತ್ತರಾಗಲಿದ್ದು, ಇವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಒಟ್ಟು 125 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕಾಗಿ ಮತದಾನ ಬಿರುಸಿನಿಂದ ಸಾಗಿತ್ತು. ವಿಜಯ್ ಮಲ್ಯ ಸೇರಿದಂತೆ ಐದಾರು ಪ್ರಮುಖರು ಮತದಾನ ಮಾಡಿಲ್ಲ. ಮತದಾನದ ಅಪ್ಡೇಟ್ಸ್ ಇಲ್ಲಿದೆ: [ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ]

Legislative Council Election MLC poll 2015 voting Updates

* ಸಣ್ಣ ಪುಟ್ಟ ಮಾತಿನ ಚಕಮಕಿ, ಮತಗಳ ಅಸಿಂಧು ಪ್ರಕರಣ ಬಿಟ್ಟರೆ ಬಹುತೇಕ ಮತದಾನ ಶಾಂತಿಯುತವಾಗಿತ್ತು. ಮಂಡ್ಯ ಶೇ 99.81, ಹಾಸನ ಶೇ 99.08, ವಿಜಯಪುರ ಶೇ 98, ಕೋಲಾರ-ಚಿಕ್ಕಬಳ್ಳಾಪುರ ಶೇ 99.93, ಬೀದರ್ ಶೇ 98, ಚಿಕ್ಕಮಗಳೂರು ಶೇ 99.72, ಕೊಪ್ಪಳ ಶೇ 99.45, ಕಲಬುರಗಿ ಶೇ 98, ಹಾಸನ ಶೇ 94, ಬೆಳಗಾವಿ ಶೇ 99, ಚಿತ್ರದುರ್ಗ ಶೇ 99.85, ದಕ್ಷಿಣ ಕನ್ನಡ ಶೇ 99.61, ಮೈಸೂರು-ಚಾಮರಾಜನಗರ ಶೇ 99.87, ಕೊಡಗು ಶೇ 99, ಬೆಂಗಳೂರು ಗ್ರಾಮಾಂತರ ಶೇ 98, ಬೆಂಗಳೂರು ನಗರ ಕ್ಷೇತ್ರ ಶೇ 98.5, ರಾಯಚೂರು -ಕೊಪ್ಪಳ ಶೇ 99.82, ಶಿವಮೊಗ್ಗ ಶೇ 99, ಮಂಡ್ಯ ಶೇ 99.81 ರಷ್ಟು ಮತದಾನವಾಗಿದೆ.
* ಜಮೀರ್ ಮಾಡಿದ್ದು ತಪ್ಪು, ಹಾಗೆಲ್ಲ ಮತದಾನದ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಡಬಾರದು : ಮಂಡ್ಯದಲ್ಲಿ ಜೆಡಿಎಸ್ ಶಾಸಕ ಚೆಲುವರಾಯಸ್ವಾಮಿ ಹೇಳಿಕೆ.
* ಜೆಡಿಎಸ್ ಮುಖಂಡರಾದ ಅಖಂಡ ಶ್ರೀನಿವಾಸ ಮೂರ್ತಿ, ಟಿಎ ಶರವಣ ಹಾಗೂ ಜಮೀರ್ ಅಹಮದ್ ಖಾನ್ ಅವರು ಕಾಂಗ್ರೆಸ್ (ಎಂ ನಾರಾಯಣಮೂರ್ತಿ) ಗೆ ವೋಟ್ ಮಾಡಿದ್ದಾಗಿ ಘೋಷಣೆ. ದೇವೇಗೌಡರು, ಕುಮಾರಸ್ವಾಮಿ ಅವರು ಯಾರಿಗೆ ಮತ ಹಾಕಬೇಕು ಎಂದು ಹೇಳಿಲ್ಲ ಎಂದು ಜಮೀರ್ ಸ್ಪಷ್ಟನೆ. [18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಜಗದೀಶ್ ಶೆಟ್ಟರ್ ವಿಶ್ವಾಸ]
* ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಂದ ಮತದಾನ.

Legislative Council Election MLC poll 2015 voting Updates

* ಶಿವಮೊಗ್ಗ: ಸಂಸದ ಬಿಎಸ್ ಯಡಿಯೂರಪ್ಪ ಅವರಿಂದ ಮತದಾನ, ಸ್ಕೇಲ್ ಹಾಗೂ ಪೆನ್ ಪಡೆದು ನಂತರ ಮತ ಪತ್ರವನ್ನು ಮತಪೆಟ್ಟಿಗೆ ಒಳಗೆ ಹಾಕಿದ ಬಿಎಸ್ ವೈ. ಚಿಕ್ಕಮಗಳೂರಿನಲ್ಲೂ ಇದೇ ರೀತಿ ಘಟನೆ, ಗಾಯತ್ರಿ ಶಾಂತೇಗೌಡ ಅವರು ಕೂಡಾ ತಿಣುಕಾಡಿದರು.
* ಮತದಾರರಿಗೆ ಬೆಳ್ಳಿ ನಾಣ್ಯ ಹಂಚಿ ಆಮಿಷ ಒಡ್ಡಿದ ಆರೋಪದ ಮೇಲೆ ಬಂಡಾಯ ಅಭ್ಯರ್ಥಿ ದಯಾನಂದ ರೆಡ್ಡಿ ವಿರುದ್ಧ ಪ್ರಕರಣ ದಾಖಲು. ಚಿಕ್ಕಜಾಲ ಪೊಲೀಸರಿಂದ ಎಫ್ ಐಆರ್ ದಾಖಲು.
BS Yeddyurappa

* ಚಿತ್ರದುರ್ಗ: ಶಾಸಕ ಜಿಎಚ್ ತಿಪ್ಪಾರೆಡ್ಡಿ ಅವರಿಂದ ಗೌಪ್ಯ ಮತದಾನ ನೀತಿ ಉಲ್ಲಂಘನೆ. ಬೀದರ್ ನಲ್ಲೂ ಇದೇ ರೀತಿ ಘಟನೆ. ನಾಮ ನಿರ್ದೇಶಿತ ಸದಸ್ಯ ಸುನಿಲ್ ರೀತಿ ನಿಯಮ ಉಲ್ಲಂಘನೆ.
* ಬಳ್ಳಾರಿ: ಕಾಂಗ್ರೆಸ್ ಅಭ್ಯರ್ಥಿ ಕೆಸಿ ಕೊಂಡಯ್ಯ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ. ಮತಕೇಂದ್ರದೊಳಗೆ ಕಾರಿನೊಳಗೆ ಹೋಗಲು ಯತ್ನಿಸಿದ ಕೊಂಡಯ್ಯ.
* ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ರವಿ ಕುಶಾಲಪ್ಪ ಅವರ ಮತಪತ್ರ ಅಮಾನತಿಗೆ ನಿರ್ಧಾರ. ಮತಗಟ್ಟೆ ನಂ.48ರಲ್ಲಿ ಮತಪತ್ರ ಬಹಿರಂಗವಾಗಿ ತೋರಿಸಿದ ಅಭ್ಯರ್ಥಿಯ ಮತ ಪರಿಗಣಿಸದೆ ಇರಲು ಅಧಿಕಾರಿಗಳ ನಿರ್ಧಾರ.
MLA Tippareddy

* ಬೆಳಗಾವಿ: ಎಂಎಲ್ಸಿ ವೀರಕುಮಾರ್ ಪಾಟೀಲ್ ಹೆಸರು ನಾಪತ್ತೆ. ಮತಗಟ್ಟೆ 171 ರಿಂದ ವಾಪಸ್. ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ.

* ಉಡುಪಿ ನಗರಸಭೆಯಲ್ಲಿ ಸಚಿವ ವಿನಯ್ ಕುಮಾರ್ ಸೊರಕೆ, ಆಸ್ಕರ್ ಫರ್ನಾಂಡೀಸ್ ಮತದಾನ.

* ಶಿವಮೊಗ್ಗದಲ್ಲಿ ವಿಧಾನಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರಿಂದ ಮತ ಚಲಾವಣೆ.

* ಯುಟಿ ಖಾದರ್ ಹೆಸರು ನಾಪತ್ತೆ: ಮಂಗಳೂರಿನ ಉಳ್ಳಾಲದ ತಾ.ಪಂ ಮತಗಟ್ಟೆಯಲ್ಲಿ ನಡೆದ ಘಟನೆ. ಮತ ಹಾಕದೆ ಸಚಿವರು ವಾಪಸ್.

* 6,314 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1 ಲಕ್ಷದ 7 ಸಾವಿರ ಮತದಾರರು ಮತದಾನ ಮಾಡಲಿದ್ದಾರೆ. ಮತದಾರರ ಪೈಕಿ ಮಹಿಳೆಯರೇ ಅಧಿಕವಾಗಿದ್ದಾರೆ. ಆದರೆ, ಅಭ್ಯರ್ಥಿಗಳ ಪೈಕಿ 8 ಜನ ಮಹಿಳೆಯರು ಮಾತ್ರ ಕಣದಲ್ಲಿದ್ದಾರೆ.

* ಮತದಾರರು ಮತಪತ್ರದಲ್ಲಿಯೇ ಪ್ರಾಶಸ್ತ್ಯದ ಮತಗಳನ್ನು ಬರೆಯಬೇಕು. ಇಲ್ಲವಾದಲ್ಲಿ ಮತಗಳನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ.
* ಭಾನುವಾರ ಸಂಜೆ 4 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದ್ದು, ಡಿಸೆಂಬರ್ 30ರಂದು ಮತಎಣಿಕೆ ನಡೆಯಲಿದೆ.

ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳು: ಬೆಂಗಳೂರು, ಮಂಡ್ಯ,ಕೋಲಾರ,ಮೈಸೂರು, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ರಾಯಚೂರು, ಬಳ್ಳಾರಿ,ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳು.(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Voting for Karnataka state Legislative Council elections 2015 conducted on Sunday (Dec.27). Fate of 125 candidates including eight women will be sealed and outcome can be out by Dec.30. Voting process has been totally peaceful.
Please Wait while comments are loading...