ಕರ್ನಾಟಕ PGCET 2026 ಫಲಿತಾಂಶ ಪ್ರಕಟ: MBA, MCA, MTech ಪ್ರವೇಶ ಪರೀಕ್ಷೆ ರಿಸಲ್ಟ್ ಚೆಕ್ ಮಾಡುವುದು ಹೇಗೆ?
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ವರ್ಷ ನಡೆಸಿದ PGCET-2026 ಪ್ರವೇಶ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಈ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಐಎಎಸ್ ಅವರು ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಎಂಬಿಎ, ಎಂಸಿಎ ಹಾಗೂ ಎಂ.ಟೆಕ್ ಕೋರ್ಸ್‌ಗಳಿಗೆ ನಡೆದ ಲಿಖಿತ ಪರೀಕ್ಷೆಯ ಮಾರ್ಕ್ಸ್ ಕಾರ್ಡ್‌ನ್ನ ವಿದ್ಯಾರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಇಂದೇ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.
ರಾಜ್ಯದಾದ್ಯಂತ ಇರುವ ಪ್ರತಿಷ್ಠಿತ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪಡೆಯಲು ಈ ಪಿಜಿಸಿಇಟಿ ಪರೀಕ್ಷೆ ಕಡ್ಡಾಯ. ಎಂಬಿಎ ಮತ್ತು ಎಂಸಿಎ ಕೋರ್ಸ್‌ಗಳ ಪ್ರವೇಶಕ್ಕಾಗಿ 2026ರ ಜೂನ್ 14ರಂದು ಹಾಗೂ ಎಂ.ಟೆಕ್ ಮತ್ತು ಎಂ.ಇ ಪ್ರವೇಶಕ್ಕೆ ಮೇ 23ರಂದು ಲಿಖಿತ ಪರೀಕ್ಷೆಗಳನ್ನ ನಡೆಸಲಾಗಿತ್ತು.

ತಾತ್ಕಾಲಿಕವಾಗಿ ಪ್ರಕಟವಾಗಿರುವ ಈ PGCET 2026 ಫಲಿತಾಂಶದಲ್ಲಿ ಕೇವಲ ಅಂಕಗಳಷ್ಟೇ ಅಲ್ಲದೆ, ವಿದ್ಯಾರ್ಥಿಯ ಭವಿಷ್ಯವನ್ನ ನಿರ್ಧರಿಸುವ ರ‍್ಯಾಂಕ್ ಸಹ ಒಳಗೊಂಡಿದೆ.
ಮಾರ್ಕ್ಸ್ ಕಾರ್ಡ್‌ನಲ್ಲಿ ವಿದ್ಯಾರ್ಥಿಯ ಹೆಸರು, ಪಿಜಿಸಿಇಟಿ ಸಂಖ್ಯೆ, ಕ್ಯಾಟಗರಿ, ಕೋರ್ಸ್ ಹೆಸರು, ಪಡೆದ ಅಂಕಗಳು ಮತ್ತು ಅಂತಿಮ ರ‍್ಯಾಂಕಿಂಗ್ ವಿವರಗಳಿರುತ್ತದೆ.
ರಿಸಲ್ಟ್ ಚೆಕ್ ಮಾಡುವುದು ಹೇಗೆ?
ಫಲಿತಾಂಶವನ್ನು ವೀಕ್ಷಿಸಲು ವಿದ್ಯಾರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ cetonline.karnataka.gov.in/kea/pgcet2026 ಗೆ ಭೇಟಿ ನೀಡಬಹುದು. ಯಾವುದೇ ಗೊಂದಲವಿಲ್ಲದೆ ಫಲಿತಾಂಶ ಪಡೆಯಲು ಈ ಕೆಳಗಿನ ಹಂತಗಳನ್ನ ಅನುಸರಿಸಿ:
1. ಮೊದಲಿಗೆ, ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಓಪನ್ ಮಾಡಿ.
2. ಮುಖಪುಟದಲ್ಲಿ ಕಾಣುವ "PGCET 2026 Result" ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಅಲ್ಲಿ ನಿಮ್ಮ ರಿಜಿಸ್ಟ್ರೇಷನ್ ನಂಬರ್ ಮತ್ತು ಜನ್ಮ ದಿನಾಂಕವನ್ನ ಹಾಕಿ.
4. ಸ್ಕ್ರೀನ್ ಮೇಲೆ ಕಾಣುವ ಕ್ಯಾಪ್ಚಾ ಹಾಕಿ 'Submit' ಬಟನ್ ಒತ್ತಿ.
5. ನಿಮ್ಮ PGCET 2026 Result ಹಾಗೂ ಮಾರ್ಕ್ಸ್ ಕಾರ್ಡ್ ಪರದೆಯ ಮೇಲೆ ಕಾಣುತ್ತದೆ. ಮುಂದಿನ ಕೌನ್ಸಿಲಿಂಗ್ ಪ್ರಕ್ರಿಯೆಗೆ ಇದು ಮುಖ್ಯವಾಗಿರುತ್ತದೆ. ಹಾಗಾಗಿ, ಕಡ್ಡಾಯವಾಗಿ ಇದನ್ನು ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.
#PGCET-26: #MBA #MCA #M.Tech ಕೋರ್ಸ್ ಪ್ರವೇಶಕ್ಕೆ ನಡೆಸಿದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು #KEA ಇಂದು ಪ್ರಕಟಿಸಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 19, 2026
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಫಲಿತಾಂಶ ಪಡೆಯಬಹುದು.
PGCET Result https://t.co/nT8aWPAnGc
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ…
ಮುಂದಿನ ಕೌನ್ಸಿಲಿಂಗ್ ಪ್ರಕ್ರಿಯೆ ಏನು?
ಪರೀಕ್ಷಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಸೀಟು ಹಂಚಿಕೆಯ ಆನ್‌ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆಗಳು ಸದ್ಯದಲ್ಲೇ ಆರಂಭವಾಗಲಿವೆ. ಅಭ್ಯರ್ಥಿಗಳು ಪಡೆದ ರ‍್ಯಾಂಕಿಂಗ್, ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆ ಹಾಗೂ ಸರ್ಕಾರದ ಮೀಸಲಾತಿ ನಿಯಮಗಳ ಆಧಾರದ ಮೇಲೆ ಕಟ್-ಆಫ್ ಪಟ್ಟಿಯನ್ನ ಸಿದ್ಧಪಡಿಸಲಾಗುತ್ತದೆ.
ಫಲಿತಾಂಶದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ರ‍್ಯಾಂಕಿಂಗ್ ಆಧಾರದ ಮೇಲೆ, ದಾಖಲಾತಿಗಳ ಪರಿಶೀಲನೆ ಪ್ರಕ್ರಿಯೆಯಲ್ಲಿ ಖುದ್ದಾಗಿ ಅಥವಾ ಆನ್‌ಲೈನ್ ಮೂಲಕ ಪಾಲ್ಗೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿಗಳು, ಜಾತಿ ಪ್ರಮಾಣಪತ್ರ, ಮತ್ತು ಆದಾಯ ಪ್ರಮಾಣಪತ್ರಗಳನ್ನ ಸಿದ್ಧವಾಗಿಟ್ಟುಕೊಳ್ಳುವುದು ಒಳಿತು.
ಈ ಕುರಿತು ಶೀಘ್ರದಲ್ಲೇ ಕೆಇಎ ತನ್ನ ವೆಬ್‌ಸೈಟ್‌ನಲ್ಲಿ ವಿವರವಾದ ಕೌನ್ಸಿಲಿಂಗ್ ವೇಳಾಪಟ್ಟಿಯನ್ನ ಪ್ರಕಟಿಸಲಿದೆ. ಅಂತಿಮ ಸೀಟು ಹಂಚಿಕೆಯು ಸಂಪೂರ್ಣವಾಗಿ ಅಭ್ಯರ್ಥಿಯ ಮೆರಿಟ್ ಹಾಗೂ ಕೌನ್ಸಿಲಿಂಗ್ ವೇಳೆ ಅವರು ಆನ್‌ಲೈನ್ ಮೂಲಕ ದಾಖಲಿಸುವ ಕಾಲೇಜುಗಳ ಆದ್ಯತಾ ಆಯ್ಕೆಗಳ ಆಧಾರದ ಮೇಲೆ ನಡೆಯಲಿದೆ.


Click it and Unblock the Notifications
