ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಭ್ರಷ್ಟಾಚಾರದ ರಾಜಧಾನಿಯೇ ಕರ್ನಾಟಕ ಎಂದಿದ್ದೇಕೆ ಡಿಕೆಶಿ!?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 01: ಕರ್ನಾಟಕದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಭ್ರಷ್ಟಾಚಾರದಿಂದ ಜನರ ದಿಕ್ಕು ತಪ್ಪಿಸುವುದಕ್ಕೆ ಬಿಜೆಪಿ ಹಲವು ರೀತಿಯ ಹುನ್ನಾರಗಳನ್ನು ನಡೆಸಿದೆ ಎಂದು ಕೆಪಿಸಿಸ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಕರ್ನಾಟಕವನ್ನು ದೇಶದ ಭ್ರಷ್ಟಾಚಾರದ ರಾಜಧಾನಿ ಎಂದು ಕರೆದಿರುವ ಅವರು, ರಾಜ್ಯದಲ್ಲಿ ಹಿಜಾಬ್, ಹಲಾಲ್ ಮಾಂಸ ಮತ್ತು ಇತ್ತೀಚೆಗೆ ಈದ್ಗಾ ಭೂಮಿಯಲ್ಲಿ ಗಣೇಶ ಚತುರ್ಥಿ ಆಚರಣೆಯಂತಹ ಕೋಮು ವಿಷಯಗಳ ಮೇಲೆ ಬಿಜೆಪಿ ಜನರನ್ನು ಕೇಂದ್ರೀಕರಿಸುತ್ತಿದೆ ಎಂದರು. ಆ ಮೂಲಕ ಚುನಾವಣಾ ಸಂದರ್ಭದಲ್ಲಿ ಅನೇಕ ಭ್ರಷ್ಟಾಚಾರ ಹಗರಣಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸುವ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದರು.

ಭಾರತ ಐಕ್ಯತಾ ಯಾತ್ರೆಯ ವಿವರ ಕೊಟ್ಟ ಡಿಕೆ ಶಿವಕುಮಾರ್ಭಾರತ ಐಕ್ಯತಾ ಯಾತ್ರೆಯ ವಿವರ ಕೊಟ್ಟ ಡಿಕೆ ಶಿವಕುಮಾರ್

ಕಳೆದ ವರ್ಷದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವುದರೊಂದಿಗೆ ರಾಜ್ಯವು ಅನೇಕ ವಿಭಜನೆಯ ತಿಕ್ಕಾಟಕ್ಕೆ ಸಾಕ್ಷಿಯಾಗಿತ್ತು. ಇತ್ತೀಚಿಗೆ ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಿದ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಬೈಪಾಸ್ ಮಾಡಿದೆ. ಆದರೆ ಹುಬ್ಬಳ್ಳಿಯ ಈದ್ಗಾ ಭೂಮಿಯಲ್ಲಿ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದೆ ಎಂಬುದನ್ನು ಅವರು ಉಲ್ಲೇಖಿಸಿದರು.

Karnataka is Countrys Corruption Capital, Allegation by KPCC President DK Shivakumar

ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಸಿಡಿಮಿಡಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಎರಡು ನೋಂದಾಯಿತ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿವೆ, ಈ ವಿಷಯಗಳ ಬಗ್ಗೆ ಫ್ಲ್ಯಾಗ್ ಮಾಡಿದ್ದೇವೆ ಎಂದರು. "ಗುತ್ತಿಗೆದಾರರ ಸಂಘವು ಭ್ರಷ್ಟಾಚಾರದ ಆರೋಪದ ಬಗ್ಗೆ ಪ್ರಧಾನಿಗೆ ಬಹಿರಂಗವಾಗಿ ಪತ್ರ ಬರೆದಿದೆ. ಪ್ರಧಾನಿ ಮೋದಿ ಈ ಮೊದಲು "ನಾನು ತಿನ್ನುವುದಿಲ್ಲ ಮತ್ತು ಯಾರಿಗೂ ತಿನ್ನಲು ಬಿಡುವುದಿಲ್ಲ" ಎಂದು ಹೇಳಿದ್ದರು. ಹೀಗಾಗಿ ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಸಂಘವು ಪ್ರಧಾನಿಯನ್ನು ಪ್ರಶ್ನೆ ಮಾಡಿದೆ?," ಎಂದು ಅವರು ಹೇಳಿದರು.

ಪ್ರಧಾನಿಗೆ ಎರಡನೇ ಬಾರಿ ಗುತ್ತಿಗೆದಾರರ ಪತ್ರ:

ಪ್ರಧಾನಮಂತ್ರಿ ನರೇಂದ್ರ ಮೋದಿಗೆ ರಾಜ್ಯದಿಂದ ಗುತ್ತಿಗೆದಾರರ ಸಂಘವು ಎರಡನೇ ಬಾರಿಗೆ ಪತ್ರವೊಂದನ್ನು ಬರೆದಿದೆ. ರಾಜ್ಯದ ಗುತ್ತಿಗೆದಾರರು ಗುತ್ತಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಯೋಜನೆಯ ಮೌಲ್ಯದ ಶೇ.40 ರಷ್ಟು ಲಂಚ ನೀಡುತ್ತಿದ್ದಾರೆ ಎಂದು ಪದೇ ಪದೇ ಆರೋಪಿಸಿದ್ದಾರೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇವಲ ಶೇ.10ರಷ್ಟು ಹಣ ನೀಡಬೇಕಿತ್ತು. ಆದರೆ ಈಗ ಅದರ ಪ್ರಮಾಣ ಶೇ.40ಕ್ಕೆ ಏರಿಕೆಯಾಗಿದೆ ಎಂದು ಗುತ್ತಿಗೆದಾರರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಯಾವ ದಾರಿಯಲ್ಲಿ ಸಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಎರಡು ಶಾಲಾ ಸಂಘಗಳಿಂದಲೂ ಪ್ರಧಾನಿಗೆ ಪತ್ರ:

ಕರ್ನಾಟಕದ ಎರಡು ಶಾಲಾ ಸಂಘಗಳಿಂದಲೂ ಪ್ರಧಾನಮಂತ್ರಿಗೆ ಪತ್ರವನ್ನು ಬರೆಯಲಾಗಿದೆ. ಶಾಲಾ ಕಟ್ಟಡಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ಮತ್ತು ಸುರಕ್ಷತಾ ಕ್ಲಿಯರೆನ್ಸ್ ಮತ್ತು ಕಟ್ಟಡದ ಮಾನದಂಡಗಳಿಗೆ ನವೀಕರಣ ಪ್ರಮಾಣಪತ್ರಗಳು ಸೇರಿದಂತೆ ಹಲವಾರು ಕ್ಲಿಯರೆನ್ಸ್‌ಗಳಿಗಾಗಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ. ಈ ಕುರಿತು ಅಧಿಕಾರಿಗಳೇ ಒತ್ತಡ ಹೇರುತ್ತಿರುವುದಾಗಿ ಎರಡು ಶಾಲಾ ಸಂಘಗಳು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿವೆ. 'ಉನ್ನತ ಶಿಕ್ಷಣ ಪಡೆದವರು, ಪ್ರಗತಿಪರರು ವಾಸಿಸುವ' ಕರ್ನಾಟಕದಂತಹ ರಾಜ್ಯದಲ್ಲಿ ಈ ರೀತಿ ಆಗುತ್ತಿರುವುದು ನಾಚಿಕೆಗೇಡು ಎಂದು ಶಿವಕುಮಾರ್ ಹೇಳಿದ್ದಾರೆ.

ಆರೋಪ ತಳ್ಳಿ ಹಾಕಿದ ರಾಜ್ಯ ಸರ್ಕಾರ:

ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳ ಕಡ್ಡಾಯ ಪ್ರವೇಶಕ್ಕೆ ಸಂಬಂಧಿಸಿದ ವಿಷಯದಲ್ಲೂ ಭ್ರಷ್ಟಾಚಾರ ನಡೆಸಲಾಗುತ್ತಿದೆ. ಬಡ ವಿದ್ಯಾರ್ಥಿಗಳ ಉಚಿತ ಅಧ್ಯಯನಕ್ಕೆ ಈ ಶಾಲೆಗಳಲ್ಲಿ ಅವಕಾಶವಿದೆ. ಇದಕ್ಕಾಗಿ ಶಾಲೆಗಳಿಗೆ ಸರ್ಕಾರವೇ ಹಣವನ್ನು ಪಾವತಿ ಮಾಡುವ ವ್ಯವಸ್ಥೆಯಿದೆ, ಆದರೆ ಆ ಹಣವನ್ನು ಪಡೆಯುವುದಕ್ಕೂ ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿಯಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ರಾಜ್ಯ ಸರ್ಕಾರವೇ ತಳ್ಳಿ ಹಾಕಿದೆ.

English summary
Karnataka is Countrys Corruption Capital, Allegation by KPCC President DK Shivakumar. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X