ಕನ್ನಡಿಗರಿಗೆ 5000 ವರ್ಷಗಳ ಇತಿಹಾಸ, ನಿಮ್ಮ ನಿಮ್ಮ ಜಿಲ್ಲೆಗೆ ಇರುವ ಬಿರುದು ತಿಳಿಯಿರಿ! Karnataka History
ಕನ್ನಡ ನೆಲ ವೀರರ ನಾಡು... ಕನ್ನಡ ನಾಡು 5000 ವರ್ಷಗಳ ಬೃಹತ್ ಇತಿಹಾಸ ಹೊಂದಿದ್ದು, ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತರಾಗಿ ಬಾಳಿದ್ದವರು ನಮ್ಮ ಕನ್ನಡಿಗರು. ಹೀಗೆಲ್ಲಾ ಕನ್ನಡ ಭಾಷೆಗೆ ಜಗತ್ತಿನ ಮೂಲೆ, ಮೂಲೆಯಲ್ಲಿ ಕೂಡ ದೊಡ್ಡ ಹೆಸರು & ಹವಾ ಇದೆ. ಕರ್ನಾಟಕ ಸಂಪತ್ಭರಿತ ರಾಜ್ಯ ಮಾತ್ರವಲ್ಲ, ಕನ್ನಡಿಗರು ಕೂಡ ಉತ್ತಮ ಸಂಸ್ಕಾರ ಇರುವವರು. ಹಾಗೇ 7,00,00,000 ಕನ್ನಡಿಗರು ಕರ್ನಾಟಕದ ಇತಿಹಾಸ ಕೇಳುವುದಕ್ಕೆ ಕೂತರೆ ವರ್ಷಗಳೇ ಬೇಕು...
ಇಡೀ ಜಗತ್ತಿನ ಎಲ್ಲಾ ಭಾಷೆಗಳ ರಾಣಿ 'ಕನ್ನಡ', ಹೀಗಾಗಿ ಕನ್ನಡವನ್ನ ಜಗತ್ತಿನಾದ್ಯಂತ ಸುಂದರ ಭಾಷೆ ಅಂತಲೂ ಕರೆಯುತ್ತಾರೆ. ಹಾಗೇ ಕನ್ನಡ ಭಾಷೆಗೆ 5000 ವರ್ಷಗಳ ಇತಿಹಾಸ ಕೂಡ ಇದ್ದು, ಕರ್ನಾಟಕ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕನ್ನಡ ಭಾಷೆಯನ್ನು ಕೋಟಿ, ಕೋಟಿ ಜನರು ಕಲಿಯುತ್ತಿದ್ದಾರೆ ಹಾಗೂ ಬಳಸಲು ಪ್ರಾಂಭಿಸಿದ್ದಾರೆ. ಕನ್ನಡಿಗರು ಎಷ್ಟು ಶಾಂತಿ ಪ್ರಿಯರೋ, ಕನ್ನಡಿಗರನ್ನು ಕೆಣಕಿದರೆ ಸರಿಯಾದ ಉತ್ತರ ಸಿಗುವುದು ಕೂಡ ಗ್ಯಾರಂಟಿ. ಹಾಗಾದರೆ ಕರ್ನಾಟಕದ 31 ಜಿಲ್ಲೆಗಳಿಗೆ ಇರುವ ಬಿರುದು & ವಿಶೇಷ ಹೆಸರು ಏನು ಅನ್ನೋದನ್ನ ಮುಂದೆ ತಿಳಿಯೋಣ ಓದಿ...

ಕರ್ನಾಟಕದ ಯಾವ ಜಿಲ್ಲೆಗೆ ಯಾವ ಬಿರುದು?
1). ವಿಜಯಪುರ - ಗುಮ್ಮಟ ನಗರಿ
2). ಧಾರವಾಡ - ಪೇಡಾ ನಗರಿ
3). ಗದಗ - ಮುದ್ರಣ ನಗರಿ
4). ಗೋಕಾಕ - ಕರದಂಟು ನಗರಿ
5). ಬೆಳಗಾವಿ - ಕುಂದಾ ನಗರಿ
6). ಮಂಗಳೂರು - ಬಂದರು ನಗರಿ
7). ಮಡಿಕೇರಿ - ಮಂಜಿನ ನಗರಿ
8). ಬೆಂಗಳೂರು - ಉದ್ಯಾನ ನಗರಿ
9). ಹಾವೇರಿ - ಏಲಕ್ಕಿ ನಗರಿ
10). ಉಡುಪಿ - ಕೃಷ್ಣ ನಗರಿ
11). ದಾವಣಗೆರೆ - ಬೆಣ್ಣೆ ನಗರಿ
12). ಗಂಗಾವತಿ - ಭತ್ತದ ಕಣಜ
13). ಮೈಸೂರು - ಸಾಂಸ್ಕೃತಿಕ ನಗರಿ
14). ಬಾಗಲಕೋಟೆ - ಕೋಟೆ ನಾಡು
15). ಬಳ್ಳಾರಿ - ಗಣಿ ನಾಡು
16). ಚಿತ್ರದುರ್ಗ - ಕೋಟೆ ನಾಡು
17). ತುಮಕೂರು - ಕಲ್ಪತರು ನಾಡು
18). ಕೋಲಾರ - ಚಿನ್ನದ ನಾಡು
19). ಚನ್ನಪಟ್ಟಣ - ಬೊಂಬೆ ನಾಡು
20). ಮಂಡ್ಯ - ಸಕ್ಕರೆ ನಾಡು
21). ರಾಮನಗರ - ರೇಷ್ಮೆ ನಾಡು
22). ಚಿಕ್ಕಮಗಳೂರು - ಕಾಫಿ ನಾಡು
23). ಬಾದಾಮಿ - ಚಾಲುಕ್ಯರ ನಾಡು
24). ತಲಕಾಡು - ಗಂಗರ ನಾಡು
25). ರಾಯಚೂರು - ಬಿಸಿಲ ನಾಡು
26). ಶಿವಮೊಗ್ಗ - ಮಲೆನಾಡಿನ ಹೆಬ್ಬಾಗಿಲು
27). ಕಲಬುರಗಿ - ತೊಗರಿ ಕಣಜ
28). ಕಾರವಾರ - ಜಲಪಾತಗಳ ತವರೂರು
29). ಭದ್ರಾವತಿ - ಕೈಗಾರಿಕೆಗಳ ನಗರಿ
30). ಯಾದಗಿರಿ - ಗಿರಿಗಳ ನಾಡು
31). ಬೀದರ್ - ಸೂಫಿ ಸಂತರ ನಾಡು
32). ಬನವಾಸಿ - ಕದಂಬರ ನಾಡು
ಕನ್ನಡ ರಾಜ್ಯೋತ್ಸವದ ಸಂಭ್ರಮ...
ಅಂದಹಾಗೆ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಒಂದೇ ರೀತಿಯಾಗಿ ಇಲ್ಲ. ದಕ್ಷಿಣ ಭಾಗದಲ್ಲಿ ಒಂದು ರೀತಿ ವಾತಾವರಣ ಇದ್ದರೆ ಉತ್ತರ ಕರ್ನಾಟಕದಲ್ಲಿ ಬೇರೆ ರೀತಿ ವಾತಾವರಣ ಕಾಣಬಹುದು. ಇದರ ಜೊತೆಗೆ ಕರಾವಳಿ ಕರ್ನಾಟಕ & ಮಲೆನಾಡು ಭಾಗ ಹಸಿರಿನ ಸಿರಿಯನ್ನು ಪಸರಿಸುತ್ತದೆ. ಇದೇ ಕಾರಣಕ್ಕೆ ಕರ್ನಾಟಕದ ಒಂದೊಂದು ಜಿಲ್ಲೆಯೂ ಒಂದು ಬಿರುದು ಪಡೆದಿದೆ. ಇದೀಗ ನಿಮ್ಮ ಜಿಲ್ಲೆಗೆ ಯಾವ ಬಿರುದು ಇದೆ? ನಿಮ್ಮ ಜಿಲ್ಲೆಯನ್ನು ಯಾವ ವಿಶೇಷ ಹೆಸರಿನಿಂದ ಕರೆಯುತ್ತಾರೆ? ಎಂಬ ಮಾಹಿತಿ ಇಲ್ಲಿದೆ ತಿಳಿಯಿರಿ. ಹಾಗೇ ಕನ್ನಡಿಗರ ಪಾಲಿಗೆ ಹೆಮ್ಮೆಯ ದಿನವಾಗಿರುವ ನವೆಂಬರ್ 1 ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನಡೆಯಲಿ ಎಂಬುದೇ 7 ಕೋಟಿ ಕನ್ನಡಿಗರ ಆಶಯವಾಗಿದೆ.












Click it and Unblock the Notifications