ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕರ್ನಾಟಕದಲ್ಲಿ ಫೆ.16ರಿಂದ ಪಿಯು, ಡಿಗ್ರಿ ಕಾಲೇಜು ಪುನಾರಂಭ

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಕರ್ನಾಟಕದಲ್ಲಿ ಹಿಜಾಬ್ ವಿವಾದದ ನಡುವೆ ಹೈಕೋರ್ಟ್ ಸೂಚನೆಯಂತೆ ಬುಧವಾರದಿಂದ ಪದವಿ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಪುನಾರಂಭ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಹಿಜಾಬ್ ನಿರ್ಬಂಧ ಅಧಿಕಾರ ಕಾಲೇಜು ಸಮಿತಿಗಿಲ್ಲ: ಅರ್ಜಿದಾರರ ಪ್ರಬಲ ವಾದಹಿಜಾಬ್ ನಿರ್ಬಂಧ ಅಧಿಕಾರ ಕಾಲೇಜು ಸಮಿತಿಗಿಲ್ಲ: ಅರ್ಜಿದಾರರ ಪ್ರಬಲ ವಾದ

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಫೆಬ್ರವರಿ 16ರಿಂದ ಪಿಯು ಮತ್ತು ಡಿಗ್ರಿ ಕಾಲೇಜುಗಳನ್ನು ಪುನಾರಂಭಿಸಲಾಗುವುದು ಎಂದರು. ಶಾಲೆ ಮತ್ತು ಕಾಲೇಜುಗಳಲ್ಲಿ ಕೋರ್ಟ್ ಸೂಚನೆಯಂತೆ ವಸ್ತ್ರ ಸಂಹಿತೆಯನ್ನು ಪಾಲನೆ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.

Karnataka Hijab Row: PU and Degree Colleges to Reopen from Feb 16

ರಾಜ್ಯದಲ್ಲಿ ಪಿಯು ಮತ್ತು ಡಿಗ್ರಿ ಕಾಲೇಜುಗಳ ಆರಂಭಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

Recommended Video

ಅಮೆರಿಕ vs ರಷ್ಯಾ ಯುದ್ಧ ಸಂಭವಿಸಿದ್ರೆ ಭಾರತ ಎದುರಿಸಬೇಕಾದ ಅಪಾಯ,ಸಮಸ್ಯೆಗಳೆನು? | Oneindia Kannada

ಹೈಕೋರ್ಟ್ ಆದೇಶ ಪಾಲನೆಗೆ ಗೃಹ ಸಚಿವರ ಒತ್ತಾಯ:
ರಾಜ್ಯದಲ್ಲಿ ಪೋಷಕರು ಶಿಕ್ಷಣವನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗಿನ ಸಭೆ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುವಂತಿಲ್ಲ, ಪಾಲನೆ ಮಾಡಬೇಕು. ಹಿಜಾಬ್ ಸಂಘರ್ಷದ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯಕ್ಕೆ ನಾವು ಹೇಳುವುದಿಷ್ಟೇ, ಕೋರ್ಟ್ ಆದೇಶವನ್ನು ಪಾಲಿಸಿ. ಕೋರ್ಟ್ ಸೂಚನೆ ಅನ್ನು ಅನುಷ್ಠಾನಗೊಳಿಸಬೇಕು, ಎಂದರು.

English summary
Karnataka Hijab Row: PU and Degree Colleges to Reopen from Feb 16. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X