ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಲೋಕಸಭಾ ಉಪ ಚುನಾವಣೆ ತಡೆ ಇಲ್ಲ : ಹೈಕೋರ್ಟ್‌

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13 : ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಚುನಾವಣಾ ಪ್ರಕ್ರಿಯೆಗಳನ್ನು ಮುಂದುವರೆಸಲು ಆಯೋಗಕ್ಕೆ ಒಪ್ಪಿಗೆ ನೀಡಿದೆ.

ಕೇವಲ ನಾಲ್ಕು ತಿಂಗಳ ಅವಧಿಗೆ ಮೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡಿರುವುದನ್ನು ಪ್ರಶ್ನಿಸಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಕೆಯಾಗಿದ್ದವು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ಎಸ್.ಜಿ.ಪಂಡಿತ್ ಅವರ ಪೀಠ ತಡೆ ನೀಡಲು ನಿರಾಕರಿಸಿತು.

ಮಂಡ್ಯ ಉಪ ಚುನಾವಣೆ : ಬಿಎಸ್‌ಪಿ ಅಭ್ಯರ್ಥಿಯಿಂದ ನಾಮಪತ್ರಮಂಡ್ಯ ಉಪ ಚುನಾವಣೆ : ಬಿಎಸ್‌ಪಿ ಅಭ್ಯರ್ಥಿಯಿಂದ ನಾಮಪತ್ರ

ಸೆಕ್ಷನ್ 154 (ಎ) ಪ್ರಕಾರ ಚುನಾವಣೆ ನಡೆಸುತ್ತಿದ್ದೇವೆ ಎಂದು ಚುನಾವಣಾ ಆಯೋಗದ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ವಾದ ಆಲಿಸಿದ ಕೋರ್ಟ್, ಚುನಾವಣಾ ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿತು.

ಲೋಕಸಭೆ ಉಪ ಚುನಾವಣೆ ರದ್ದುಪಡಿಸಲು ರಾಷ್ಟ್ರಪತಿಗಳಿಗೆ ಪತ್ರಲೋಕಸಭೆ ಉಪ ಚುನಾವಣೆ ರದ್ದುಪಡಿಸಲು ರಾಷ್ಟ್ರಪತಿಗಳಿಗೆ ಪತ್ರ

ನವೆಂಬರ್ 3ರಂದು ಶಿವಮೊಗ್ಗ, ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನವಾಗಿದೆ.

ಲೋಕಸಭೆ ಉಪ ಚುನಾವಣೆಯಿಂದ ದೂರವಿರಲು ಕಾಂಗ್ರೆಸ್‌, ಜೆಡಿಎಸ್‌ಗೆ ಸಲಹೆಲೋಕಸಭೆ ಉಪ ಚುನಾವಣೆಯಿಂದ ದೂರವಿರಲು ಕಾಂಗ್ರೆಸ್‌, ಜೆಡಿಎಸ್‌ಗೆ ಸಲಹೆ

ಚುನಾವಣೆಗೆ ತಡೆ ನೀಡಿ

ಚುನಾವಣೆಗೆ ತಡೆ ನೀಡಿ

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್, ಬೆಂಗಳೂರು ನಗರದ ನಿವಾಸಿ ಉತ್ತಯ್ಯ, ತುಮಕೂರು ಮೂಲದ ರಮೇಶ್ ನಾಯಕ್ ಅವರು ಜನರ ತೆರಿಗೆ ಹಣ ಖರ್ಚು ಮಾಡಿ ಉಪ ಚುನಾವಣೆ ನಡೆಸುವ ಅಗತ್ಯವಿಲ್ಲ ಎಂದು ಪಿಐಎಲ್ ಸಲ್ಲಿಸಿದ್ದರು.

ಹೊಸದಾಗಿ ಆಯ್ಕೆಯಾಗುವ ಸಂಸದರ ಅವಧಿ ಕೇವಲ 4 ತಿಂಗಳು. ಆದ್ದರಿಂದ, ಈಗ ಚುನಾವಣೆ ನಡೆಸುವ ಅಗತ್ಯವಿಲ್ಲ. ಉಪ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಆಯೋಗದ ವಾದವೇನು?

ಆಯೋಗದ ವಾದವೇನು?

ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 154 (ಎ) ಪ್ರಕಾರ ಚುನಾವಣೆ ನಡೆಸುತ್ತಿದ್ದೇವೆ. ಬಳ್ಳಾರಿ, ಮಂಡ್ಯ ಮತ್ತು ಶಿವಮೊಗ್ಗ ಕ್ಷೇತ್ರಗಳು ಮೇ 18 ರಿಂದ 21, 2018ರ ನಡುವೆ ತೆರವಾಗಿವೆ. ಒಂದು ವರ್ಷಕ್ಕೂ ಹೆಚ್ಚು ಅವಧಿಯ ತನಕ ಕ್ಷೇತ್ರ ಖಾಲಿ ಇದ್ದರೆ ಚುನಾವಣೆ ನಡೆಸುವುದು ಅನಿವಾರ್ಯ. ಆದ್ದರಿಂದ, ಚುನಾವಣೆ ಘೋಷಣೆ ಮಾಡಲಾಗಿದೆ ಎಂದು ಆಯೋಗ ವಾದ ಮಂಡನೆ ಮಾಡಿತ್ತು.

ಅಕ್ಟೋಬರ್ 29ಕ್ಕೆ ವಿಚಾರಣೆ

ಅಕ್ಟೋಬರ್ 29ಕ್ಕೆ ವಿಚಾರಣೆ

ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಈ ವಿಚಾರದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ. ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಗಳನ್ನು ಮುಂದುವರೆಸಬಹುದು ಎಂದು ಹೇಳಿತು ಮತ್ತು ಅಕ್ಟೋಬರ್ 29ರಂದು ಅರ್ಜಿಯ ವಿಚಾರಣೆಯನ್ನು ಪುನಃ ನಡೆಸುವುದಾಗಿ ಶುಕ್ರವಾರ ಹೇಳಿತು.

ಆಯೋಗದ ವಿವರಣೆ

ಆಯೋಗದ ವಿವರಣೆ

ಉಪ ಚುನಾವಣೆ ಘೋಷಣೆಯಾದಾಗ ಮಾಧ್ಯಮಗಳ ಜೊತೆ ಮಾತನಾಡಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, 'ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವಂತಿಲ್ಲ. ಚುನಾವಣೆ ಮಾಡಬಾರದು ಎಂಬ ನಿಯಮವೇನಿಲ್ಲ. ಉಪ ಚುನಾವಣೆ ಘೋಷಣೆ ಮಾಡಿರುವುದರಲ್ಲಿ ಆಯೋಗದ ತಪ್ಪಿಲ್ಲ. ತೆರವಾದ ಸ್ಥಾನಗಳಿಗೆ 6 ತಿಂಗಳಿನಲ್ಲಿ ಚುನಾವಣೆ ನಡೆಸಬೇಕು ಎಂಬ ನಿಯಮವಿದೆ' ಎಂದು ಹೇಳಿದ್ದರು.

English summary
Election Commission of India can proceed the process of Lok Sabha by elections to Shivamogga, Ballari and Mandya as per the schedule said Karnataka High Court. Court made it clear that we have not passed any interim order in these matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X