ನಿಫಾ ವೈರಸ್ ಅಬ್ಬರ: ರಾಜ್ಯದಲ್ಲಿ ಆರೋಗ್ಯ ಇಲಾಖೆ ನೀಡಿರುವ ಮಹತ್ವದ ಸೂಚನೆಗಳೇನು..?
ಬೆಂಗಳೂರು, ಸೆಪ್ಟೆಂಬರ್ 14: ಕೊರೊನಾ ಅಬ್ಬರ ತೊಲಗಿತು ಎಂದು ಖುಷಿಯಲ್ಲಿದ್ದ ಜನರಿಗೆ ಈಗ ಮತ್ತೊಂದು ವೈರಸ್ ಕಾಡಲು ಶುರು ಮಾಡಿದೆ. ಕೊರೊನಾ ವೈರೆಸ್ ಆರ್ಭಟ ಮಾಡೀ ಜಗತ್ತನ್ನೇ ಹದರಿಸಿ ಆರ್ಥಿಕವಾಗಿ ಸಾಕಷ್ಟು ಜನರಿಗೆ ಪೆಟ್ಟು ಕೂಟ್ಟು ಅದೆಷ್ಟೋ ಕುಟುಂಬಗಳ ಆಧಾರವಾಗಿದ್ದ ವ್ಯಕ್ತಿಗಳನ್ನೇ ಬಲಿ ತೆಗೆದುಕೊಂಡಿತ್ತು. ಹೀಗಾಗಿ ಜನರಿಗೆ ಕೊರೊನಾ ವೈರಸ್ ಭಯದ ನೆರಳು ಈಗಲೂ ಇದೆ.
ಇದೀಗ ಮತ್ತೊಂದು ವೈರಸ್ ಜನರನ್ನು ಕಾಡಲು ಶುರು ಮಾಡಿದೆ. ಸದ್ಯ ಆ ಸಾಲಿಗೆ ಈಗ ನಿಫಾ ವೈರಸ್ ಸೇರಿದ್ದು, ತನ್ನ ಆರ್ಭಟ ಶುರು ಮಾಡಿದೆ.

ಪ್ರಾಣಿಗಳಿಂದ ಮನುಷ್ಯರಿಗೆ, ಮನುಷ್ಯರಿಂದ ಮನುಷ್ಯರಿಗೆ ಹರಡುವ ನಿಫಾ ಒಂದು ಸಲ ಬಂದರೆ ತುಂಬಾ ಅಪಾಯಕಾರಿ. ಈ ವೈರಸ್‌ನಿಂದಾಗಿ ಈಗಾಗಲೇ ಹಲವಾರು ಜನರು ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದಾರೆ. ಇದೀಗ ನಮ್ಮ ಪಕ್ಕದ ರಾಜ್ಯ ಕೇರಳದಲ್ಲಿ, ಇದರ ಉಪಟಳ ಹೆಚ್ಚಾಗುತ್ತಿದೆ. ನೆರೆ ರಾಜ್ಯ ಕೇರಳದಲ್ಲಿ ಇಬ್ಬರು ತೀವ್ರ ಜ್ವರದಿಂದ ಬಳಲುತ್ತಿದ್ದು ಸಾವನ್ನಪ್ಪಿದ್ದು ಅವರಿಗೆ ನಿಫಾ ವೈರೆಸ್ ಇರುವುದು ದೃಢವಾಗಿದೆ.
ಶೀತ, ಕೆಮ್ಮು, ಜ್ವರ,ನೆಗಡಿ, ಗಂಟಲು ಕೆರೆತ, ಉಸಿರಾಟದ ತೊಂದರೆ, ತಲೆನೋವು, ಕೆಮ್ಮು, ಅಷ್ಟೇ ಅಲ್ಲದೆ, ಸೋಂಕಿತ ವ್ಯಕ್ತಿಗೆ ವಾಂತಿ ಮತ್ತು ಅತಿಸಾರ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ರಾಜ್ಯದಲ್ಲಿಯೂ ಕೂಡ ಸದ್ಯ ಅಲರ್ಟ್ ಆಗಿದ್ದಾರೆ. ಈ ಬಗ್ಗೆ ಇಂದು ಆರೋಗ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಪ್ರತಿ ಜಿಲ್ಲೆಯ ಡಿಹೆಚ್ಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆದಿದ್ದು, ಆರೋಗ್ಯ ಇಲಾಖೆ ಈಗ ಪ್ರತ್ಯೇಕ ಸುತ್ತೋಲೆ ಬಿಡುಗಡೆ ಮಾಡಿದೆ.

ಸಭೆಯಲ್ಲಿ ದಕ್ಷಿಣ ಕನ್ನಡಕ್ಕೆ ಜಿಲ್ಲೆಯ ಮೇಲೆ ವಿಶೇಷ ನಿಗಾ ಇಡಲು ಸೂಚಿಸಲಾಗಿದೆ. ಇನ್ನು ಶಂಕಿತ ಪ್ರಕರಣದ ಕುರಿತು ಜಿಲ್ಲಾ ಕಣ್ಗಾವಲು ಕಚೇರಿಗೆ ಮಾಹಿತಿ ನೀಡಬೇಕು. ನಿಫಾ ವೈರಸ್ ನಿರ್ವಹಣೆಗಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ 10 ಹಾಸಿಗೆಯ ವಾರ್ಡ್ ಕಾಯ್ದಿರಿಸಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ಔಷಧಿಗಳನ್ನು ಒಳಗೊಂಡಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ. ಅಗತ್ಯವಿರುವ ಔಷಧಿಗಳನ್ನು ಶೇಖರಿಸಲು ಹಾಗೂ ನಿಫಾ ರೋಗ ಲಕ್ಷಣಗಳ ಕುರಿತು ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ಯಾವುದೇ ಶಂಕಿತ ಪ್ರಕರಣಗಳ ಮಾದರಿಯನ್ನು ಪುಣೆಯ ಎನ್ಐವಿ ಲ್ಯಾಬ್ ಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಲಾಗಿದೆ.












Click it and Unblock the Notifications