'ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ' ಯೋಜನೆಗೆ ಇಂದು ಚಾಲನೆ: ಅಂಶಗಳು
ಬೆಂಗಳೂರು, ಮಾರ್ಚ್ 15: ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಹೃದಯ ಸ್ತಂಭನ (Heart Attack) ಸಮಸ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಲು ಸರ್ಕಾರದ ಮಹತ್ವಾಕಾಂಕ್ಷೆಯ ದಿ. 'ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ' ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದೆ.
ಶುಕ್ರವಾರ ಮಾರ್ಚ್ 15ರಂದು ಧಾರವಾಡದ ಎಸ್‌ಡಿಎಂ ಕಾಲೇಜಿನ ಡಿ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಲಿದ್ದಾರೆ. ಈ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಘನ ಉಪಸ್ಥಿತಿ ಇರಲಿದೆ.

ಅಭಿಮಾನಿಗಳ ಅಚ್ಚುಮೆಚ್ಚಿನ ಕರ್ನಾಟಕ ರತ್ನ ದಿ.ಡಾ.ಪುನೀತ್ ರಾಜ್ ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು. ಅದಾದ ಬಳಿಕ ಈ ಕುರಿತು ಪ್ರಕರಣಗಳು ಹೆಚ್ಚು ವರದಿ ಆಗುವುದು ಮುನ್ನೆಲೆ ಬಂತು.
ಶೇ. 35ರಷ್ಟು ಹರೆಯದವರಲ್ಲಿ ಈ ಸಮಸ್ಯೆ
ಅಧ್ಯಯನದ ಪ್ರಕಾರ ಹೃದಯ ಸ್ತಂಭನಕ್ಕೆ ಒಳಗದವರಲ್ಲಿ ಶೇ.35ರಷ್ಟು ಮಂದಿ 40 ವಯಸ್ಸಿನ ಆಸುಪಾಸಿನ ಹದಿಹರೆಯದವರೇ ಆಗಿದ್ದಾರೆ. ಹೃದಯ ಸ್ತಂಭನದಂತಹ ಪ್ರಕರಣಗಳಲ್ಲಿ ಒಂದು ಗಂಟೆ ಗೋಲ್ಡ್ ಹವರ್ ಮುಖ್ಯವಾಗಿರುತ್ತದೆ. ಇದೇ ಅವಧಿಯಲ್ಲಿ ಸಾಧ್ಯವಾದಷ್ಟು ಚಿಕಿತ್ಸೆ ಕೊಟ್ಟು ವ್ಯಕ್ತಿಯ ಜೀವ ಉಳಿಸಬೇಕಿರುತ್ತದೆ. ಈ ಕಾರಣದಿಂದಲೇ ಸರ್ಕಾರ ಈ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದೆ.

ರಾಜ್ಯ ಸರ್ಕಾರವು ಅಪಾರ ಸಾಮಾಜಿಕ ಸೇವೆಗೈದ, ಕನ್ನಡಿಗರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿಯೇ ಹೃದಯಾಘಾತ ಚಿಕಿತ್ಸೆಗಾಗಿ ಆಸ್ಪತ್ರೆಯಗಳಲ್ಲಿ 'ಎಇಡಿ' ವ್ಯವಸ್ಥೆ ಅಳವಡಿಕೆ ಯೋಜನೆ ಜಾರಿ ತರಲು ಮುಂದಾಯಿತು.
ಹೃದಯಾಘಾತಕ್ಕೆ ಒಳಗಾದ ಕೂಡಲೇ ಅಂತವರಿಗೆ ಕೂಡಲೇ ಚಿಕಿತ್ಸೆ ಕೊಡಲು ನೆರವಾಗುವಂತಹ ಸ್ವಯಂ ಚಾಲಿತ ಡಿಫಿಬ್ರಿಲೇಟರ್ (AED) ಸಾಧನೆಗಳ ಮೂಲಕ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಸರ್ಕಾರ ಪರಿಚಯಿಸುತ್ತಿದೆ. ಸದ್ಯ ಇದನ್ನು ಆಸ್ಪತ್ರೆಗಳಲ್ಲಿ ಅಳವಡಿಕೆ ಮಾಡಿದ್ದು, ಸಚಿವರು ಲೋಕಾರ್ಪಣೆ ಮಾಡುತ್ತಿದ್ದಾರೆ.
ಪುನೀತ್ ಹೃದಯಜ್ಯೋತಿ ಯೋಜನೆ: ಅಂಶಗಳು
* ಕರ್ನಾಟಕದಾದ್ಯಂತ 71 ತಾಲ್ಲೂಕು ಹಾಗೂ 11 ಜಿಲ್ಲಾಸ್ಪತ್ರೆಗಳಲ್ಲಿ 'ಸ್ಪೋಕ್' ಕೇಂದ್ರಗಳ ಸ್ಥಾಪನೆ
* ಉಚಿತ ECG ಪರೀಕ್ಷೆ, AI ತಂತ್ರಜ್ಞಾನ ನೆರವಿನಿಂದ ಶೀಘ್ರ ರೋಗ ನಿರ್ಣಯ. ಸ್ಪೋಕ್ ಆಸ್ಪತ್ರೆಗಳಲ್ಲಿ ತ್ವರಿತ ಚಿಕಿತ್ಸೆ ಹಾಗೂ ALS ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುವುದು.
* ಹೃದಯಾಘಾತ ಚಿಕಿತ್ಸೆಗೆ ಸ್ಪೋಕ್ ಕೇಂದ್ರಗಳಲ್ಲಿ ₹30 ಸಾವಿರ ಮೌಲ್ಯದ ಟೆನೆಸ್ಟೆಪ್ಲೇಸ್ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುತ್ತದೆ.
* ಜೀವ ರಕ್ಷಕ ಟ್ರಸ್ಟ್ ವತಿಯಿಂದ ವೈದ್ಯರು, ವೈದ್ಯಕೀಯ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿಗೆ ಹೃದಯಾಘಾತ ತುರ್ತು ನಿರ್ವಹಣೆಯ ತರಬೇತಿ.
* ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಆಸ್ಪತ್ರೆಗಳಲ್ಲಿ ಹಬ್ ಕೇಂದ್ರಗಳ ಸ್ಥಾಪನೆ
* ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ -ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ" ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ.
* ಮೊದಲ ಹಂತದಲ್ಲಿ ಈವರೆಗೂ ಹೃದಯ ಸಂಬಂಧಿಸಿದ ಗಂಭೀರ 2088 ರೋಗಿಗಳನ್ನು ಸ್ಪೋಕ್ ಕೇಂದ್ರಗಳಲ್ಲಿ ಪತ್ತೆಹಚ್ಚಿ ಹಬ್ ಆಸ್ಪತ್ರೆಗಳಲ್ಲಿ ಯಶಸ್ವಿ ಚಿಕಿತ್ಸೆ ದೊರೆಯಲಿದೆ.
* ಆಸ್ಪತ್ರೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ (AED) ಅಳವಡಿಕೆ.












Click it and Unblock the Notifications