1,130 ಅತಿಥಿ ಉಪನ್ಯಾಸಕರ ನೇಮಕಕ್ಕೆ ಒಪ್ಪಿಗೆ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 03 : ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ನೇಮಕಕ್ಕೆ ಒಪ್ಪಿಗೆ ಸಿಕ್ಕಿದೆ. 1,130 ಅತಿಥಿ ಉಪನ್ಯಾಸಕರ ನೇಮಕಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯು ಜಿಲ್ಲಾ ಉಪ ನಿರ್ದೇಶಕರಿಗೆ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸರ್ಕಾರದ ಒಪ್ಪಿಗೆ ಬಳಿಕ ಹೆಚ್ಚುವರಿ ನೇಮಕಾತಿ ಪ್ರತಿಕ್ರಿಯೆಗೆ ಚಾಲನೆ ಸಿಗಲಿದೆ.[ತಂತ್ರಜ್ಞಾನ ಉಪನ್ಯಾಸಕರಿಗೊಂದು ವೃತ್ತಿ ಕೌಶಲ್ಯ ಒಡಂಬಡಿಕೆ]

vidhana soudha

ಯಾವ ಜಿಲ್ಲೆಯಲ್ಲಿ ಎಷ್ಟು ನೇಮಕ? : ಬೆಂಗಳೂರು ಉತ್ತರ 3, ಬೆಂಗಳೂರು ದಕ್ಷಿಣ 6, ಬೆಂಗಳೂರು ಗ್ರಾಮಾಂತರ 4, ರಾಮನಗರ 10, ಬಳ್ಳಾರಿ 25, ಬೆಳಗಾವಿ 75, ವಿಜಯಪುರ 30, ಬಾಗಲಕೋಟೆ 35, ಬೀದರ್ 30, ಚಿತ್ರದುರ್ಗ 10, ದಾವಣಗೆರೆಯಲ್ಲಿ 10 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.[ವಿದ್ಯಾರ್ಥಿ ನೆನಪಲ್ಲಿ ಸಾವಿಗೆ ಶರಣಾದ ಉಪನ್ಯಾಸಕ!]

ಚಿಕ್ಕಮಗಳೂರು 40, ಧಾರವಾಡ 10, ಗದಗ 50, ಹಾವೇರಿ 25, ಕಲಬುರಗಿ 70, ಯಾದಗಿರಿ 60, ಹಾಸನ 65, ಕೋಲಾರ 40, ಚಿಕ್ಕಬಳ್ಲಾಪುರ 40, ಮೈಸೂರು 45, ಚಾಮರಾಜನಗರ 20, ಮಂಡ್ಯ 25, ಉತ್ತರ ಕನ್ನಡ 50, ರಾಯಚೂರು 100, ಕೊಪ್ಪಳ 50, ದಕ್ಷಿಣ ಕನ್ನಡ 60, ಉಡುಪಿ 30, ಶಿವಮೊಗ್ಗ 25, ತುಮಕೂರು 64, ಕೊಡಗು 23 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government has decided to recruit over 1,130 guest lecturers for Govt first grade colleges to solve the shortage of staff.
Please Wait while comments are loading...