ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸಲು ದತ್ತು ಪಡೆಯಬಹುದು

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 16 : ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸಲು ಸರ್ಕಾರ ಶಾಲೆಗಳನ್ನು ದತ್ತು ನೀಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ 5 ಸಾವಿರ ಶಾಲೆಗಳನ್ನು ದತ್ತು ನೀಡಲು ನಿರ್ಧರಿಸಲಾಗಿದೆ. ಶೀಘ್ರವೇ ಈ ಕುರಿತ ಆದೇಶ ಹೊರಬೀಳಲಿದೆ.

ರಾಜ್ಯದಲ್ಲಿರುವ 48,909 ಸರ್ಕಾರಿ ಶಾಲೆಗಳ ಪೈಕಿ 5 ಸಾವಿರ ಶಾಲೆಗಳನ್ನು ದತ್ತು ನೀಡಲು ಸರ್ಕಾರ ನಿರ್ಧರಿಸಿದೆ. ತುರ್ತಾಗಿ ಮೂಲಸೌಕಯ೯ ಕಲ್ಪಿಸುವ ಅಗತ್ಯವಿರುವ ಶಾಲೆಗಳನ್ನು ಮೊದಲ ಹಂತದಲ್ಲಿ ದತ್ತು ನೀಡಲಾಗುತ್ತದೆ.[ನಕಲಿ ದಾಖಲೆ: ಬೆಂಗಳೂರಿನ 5 ಶಾಲೆಗಳ ಮಾನ್ಯತೆ ರದ್ದು]

Karnataka Govt to promote school adoption programme

ಜಿಲ್ಲಾ ಪ೦ಚಾಯಿತಿ ಸದಸ್ಯರು, ಸ೦ಸದರು, ರಾಜ್ಯಸಭಾ ಸದಸ್ಯರು, ಸಕಾ೯ರೇತರ ಸ೦ಘ ಸ೦ಸ್ಥೆಗಳು, ಕಾಪೋ೯ರೇಟ್ ಕ೦ಪನಿಗಳು ಶಿಕ್ಷಣ ಇಲಾಖೆಯಿಂದ ಶಾಲೆಗಳನ್ನು ದತ್ತು ಪಡೆದು, ಅವುಗಳನ್ನು ಅಭಿವೃದ್ಧಿಗೊಳಿಸಬಹುದಾಗಿದೆ.[ದಸರಾ : ಕಾವಡಿ, ಮಾವುತರ ಮಕ್ಕಳ ಟೆಂಟ್ ಶಾಲೆ ನೋಡಿ]

ಶಾಲೆಗಳನ್ನು ದತ್ತು ಪಡೆಯುವವರು ಮೂಲಸೌಕರ್ಯಗಳಾದ ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ ಮುಂತಾದವುಗಳನ್ನು ಒದಗಿಸಬಹುದಾಗಿದೆ. ಶಾಲೆ ಇರುವ ಗ್ರಾಮದ ಜನರು ಸಹ ಈ ಕಾರ್ಯಕ್ಕೆ ಕೈ ಜೋಡಿಸಬಹುದಾಗಿದೆ.[ಮೈಸೂರು : ಜನರ ನಿದ್ದೆಗೆಡಿಸಿದ ಶಾಲಾ ಕಾಂಪೌಂಡ್]

ಕಡ್ಡಾಯಗೊಳಿಸಲು ಚಿಂತನೆ : 'ಎಲ್ಲಾ ಜನಪ್ರತಿನಿಧಿಗಳು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಂದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವುದನ್ನು ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government will launch a school adoption programme soon. 5,000 schools identified for programme. MPs, MLAs, MLCs, mayors and Zilla Panchayath presidents have to adopt one school in their constituency.
Please Wait while comments are loading...