ಮಹಿಳಾ ಕೊರೊನಾ ವಾರಿಯರ್ಸ್‌ಗೆ ರಾಜ್ಯ ಸರ್ಕಾರದಿಂದ ಉಡುಗೊರೆ
ಬೆಂಗಳೂರು, ಸೆಪ್ಟೆಂಬರ್ 11: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ತಮ್ಮ ಜೀವ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಮಹಿಳಾ ಕೊರೊನಾ ವಾರಿಯರ್ಸ್‌ಗೆ ಕರ್ನಾಟಕ ಸರ್ಕಾರ ಉಡುಗೊರೆ ನೀಡಲು ಮುಂದಾಗಿದೆ.
ದೀಪಾವಳಿ ಉಡುಗೊರೆಯಾಗಿ ಎರಡು ಸೀರೆಗಳನ್ನು ಮಹಿಳಾ ಕೊರೊನಾ ವಾರಿಯರ್ಸ್‌ಗೆ ನೀಡಲಾಗುವುದು.ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ ನೇಕಾರರಿಗೆ ನೆರವಾಗುವ ಉದ್ದೇಶದಿಂದ ಕೈಮಗ್ಗ ಮತ್ತು ಜವಳಿ ಇಲಾಖೆ ಯೋಜನೆ ರೂಪಿಸಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಜವಳಿ ಸಚಿವ ಶ್ರೀಮಂತ್ ಪಾಟೀಲ್ ಚರ್ಚಿಸಿದ್ದು, ಸಿಎಂ ಸೂಚನೆಯಂತೆ ನೇಕಾರರಿಂದ 6 ಲಕ್ಷ ಸೀರೆ ಖರೀದಿಸಲಾಗುವುದು.

ದೀಪಾವಳಿ ಉಡುಗೊರೆಯಾಗಿ ಎರಡು ಸೀರೆಗಳನ್ನುಮಹಿಳಾ ವಾರಿಯರ್ಸ್‌ಗೆ ನೀಡಲಾಗವುದು ಎಂದು ಹೇಳಲಾಗಿದೆ.ಸಂಕಷ್ಟದಲ್ಲಿರುವ ನೇಕಾರರು ಮತ್ತುಪವರ್ ಲೂಮ್ ನೇಕಾರರಿಗೆ ನೆರವು ನೀಡಲು ಸೀರೆಯನ್ನು ಖರೀದಿಸಿ ವಿವಿಧ ಇಲಾಖೆಗಳ ಮೂಲಕ ಮಹಿಳಾ ಕೊರೊನಾ ವಾರಿಯರ್ಸ್‌ಗೆ ತಲಾ ಎರಡು ಸೀರೆ ಉಚಿತವಾಗಿ ನೀಡಲಾಗುತ್ತಿದೆ.
35 ಕೋಟಿ ವೆಚ್ಚದಲ್ಲಿ 6 ಲಕ್ಷ ಸೀರೆಯನ್ನು ಖರೀದಿಸಲು ಮುಂದಾಗಿದ್ದಾರೆ. ಕರ್ನಾಟದಲ್ಲಿ 54 ಲಕ್ಷ ಕೈಮಗ್ಗ ನೇಕಾರರು, 1.4 ಲಕ್ಷ ಪವರ್‌ಲೂಮ್ ನೇಕಾರರಿದ್ದಾರೆ. ಬೆಳಗಾವಿ, ಬಾಗಲಕೋಟೆ, ಚಿತ್ರದುರ್ಗ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ನೇಕಾರರಿದ್ದಾರೆ.












Click it and Unblock the Notifications