ರಾಜ್ಯ ಸರ್ಕಾರಿ ನೌಕರರು ಗಮನಿಸಲೇಬೇಕಾದ ಮಹತ್ವದ ಮಾಹಿತಿ.. ಮೀರಿದ್ರೆ ಶಿಕ್ಷೆ ಫಿಕ್ಸ್
Government Employees: ಕರ್ನಾಟಕ ಸಿವಿಲ್ ಸೇವಾ ನಿಯಮಗಳು 1957ರ ನಿಯಮ 8ರ ಅಡಿಯಲ್ಲಿ ಸರ್ಕಾರಿ ನೌಕರರ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ವಿಧಿಸಬಹುದಾದ ಶಿಕ್ಷೆಗಳ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ನೂತನ ಮಾರ್ಗದರ್ಶಿ ಸೂತ್ರಗಳ ವಿವರ ಇಲ್ಲಿದೆ. ಸೇವಾ ಅವಧಿಯಲ್ಲಿ ಗೈರುಹಾಜರಿ, ಹಣಕಾಸು ಅಕ್ರಮ ಅಥವಾ ನಡತೆ ನಿಯಮಗಳ ಉಲ್ಲಂಘನೆ ಎಸಗುವ ನೌಕರರ ವಿರುದ್ಧ ಶಿಸ್ತು ಪ್ರಾಧಿಕಾರಗಳು ತಾರತಮ್ಯವಿಲ್ಲದೆ ಸಮಾನ ಹಾಗೂ ಸೂಕ್ತ ದಂಡನೆ ವಿಧಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಈ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ವಿವಿಧ ಪ್ರಮುಖ ಆರೋಪಗಳು ಮತ್ತು ಅವುಗಳಿಗೆ ವಿಧಿಸಬಹುದಾದ ಶಿಕ್ಷೆಗಳ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ಅನಧಿಕೃತ ಗೈರುಹಾಜರಿ ಪ್ರಕರಣಗಳು
* 1 ರಿಂದ 3 ತಿಂಗಳ ಒಳಗಿನ ಗೈರುಹಾಜರಿ: ನೌಕರನ ಮೂರು ವರ್ಷಗಳ ವೇತನ ಬಡ್ತಿಯನ್ನು ತಡೆಹಿಡಿಯಲಾಗುವುದು.
* 3 ತಿಂಗಳಿಗಿಂತ ಹೆಚ್ಚಿನ ಗೈರುಹಾಜರಿ: ನೌಕರನನ್ನು ನೇರವಾಗಿ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗುವುದು.
ಹಣಕಾಸು ದುರುಪಯೋಗ ಮತ್ತು ಲಂಚ ಪ್ರಕರಣಗಳು
* ತಾತ್ಕಾಲಿಕ ಹಣ ದುರುಪಯೋಗ: 5 ವರ್ಷಗಳ ಕಾಲ ವೇತನ ಬಡ್ತಿಯನ್ನು ತಡೆಹಿಡಿಯುವುದು.
* ತಾತ್ಕಾಲಿಕ ಹಣ ದುರುಪಯೋಗ: ನೌಕರನನ್ನು ಕಾಲವೇತನ ಶ್ರೇಣಿಯ ಕೆಳಗಿನ ಹಂತಕ್ಕೆ ಇಳಿಸುವುದು.
* ಖಾಯಂ ಹಣ ದುರುಪಯೋಗ, ಲೆಕ್ಕದಲ್ಲಿ ವಂಚನೆ ಅಥವಾ ಲಂಚ ಸ್ವೀಕಾರ: ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ ಗೊಳಿಸುವುದು.
* ವರದಕ್ಷಿಣೆ ಕಿರುಕುಳ: ಆರೋಪ ಸಾಬೀತಾದಲ್ಲಿ ಸೇವೆಯಿಂದ ತೆಗೆದುಹಾಕುವುದು.
ಕರ್ತವ್ಯ ಲೋಪ ಹಾಗೂ ಕಚೇರಿ ಪ್ರಕ್ರಿಯೆಗಳ ವಿಳಂಬ
* ಕಾರ್ಯವಿಧಾನದ ಲೋಪಗಳು: ಮೊದಲ ಬಾರಿಯ ತಪ್ಪಿಗೆ ಎಚ್ಚರಿಕೆ, ಪುನರಾವರ್ತನೆಯಾದಲ್ಲಿ ಹುದ್ದೆಯ ಕೆಳಹಂತಕ್ಕೆ ಇಳಿಸುವುದು.
* ಕಚೇರಿ ಕಾರ್ಯವಿಧಾನ ಅನುಸರಿಸದೆ ವಿಳಂಬ ಮಾಡುವುದು: ಮೊದಲ ಬಾರಿಗೆ ಎಚ್ಚರಿಕೆ, ತದನಂತರದ ಸಂದರ್ಭಗಳಲ್ಲಿ ಕನಿಷ್ಠ 1 ವರ್ಷದ ವೇತನ ಬಡ್ತಿ ತಡೆ.
* ಮೇಲಾಧಿಕಾರಿಗಳ ಲಿಖಿತ ಆದೇಶ ಮೀರುವುದು: 2 ವರ್ಷಗಳ ವೇತನ ಬಡ್ತಿಯನ್ನು ತಡೆಹಿಡಿಯಲಾಗುವುದು.
ನಡತೆ ನಿಯಮಗಳ ಉಲ್ಲಂಘನೆ & ಇತರೆ ಗಂಭೀರ ಆರೋಪಗಳು
* ಲೈಂಗಿಕ ಕಿರುಕುಳ: ಕೆಳಮಟ್ಟದ ಕಾಲವೇತನ ಶ್ರೇಣಿ ಅಥವಾ ಕೆಳಗಿನ ಹುದ್ದೆಗೆ ಇಳಿಸುವುದು.
* ರಾಜಕೀಯ/ಚುನಾವಣಾ ಚಟುವಟಿಕೆಯಲ್ಲಿ ಭಾಗಿ: ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ.
* ಕುಟುಂಬಸ್ಥರ ಹೆಸರಿನಲ್ಲಿ ವ್ಯಾಪಾರ ನಡೆಸಿ ಅಧಿಕಾರ ದುರುಪಯೋಗ: ಹುದ್ದೆಯ ಕೆಳಗಿನ ಹಂತಕ್ಕೆ ಇಳಿಸುವುದು.
* ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ಟೀಕೆ/ಪ್ರಚಾರ: ಕನಿಷ್ಠ 1 ವರ್ಷದ ವೇತನ ಬಡ್ತಿ ತಡೆ.
* ಅನಧಿಕೃತವಾಗಿ ಚಂದಾ ಅಥವಾ ನಿಧಿ ಸಂಗ್ರಹ: ಹುದ್ದೆಯ ಕೆಳಗಿನ ಹಂತಕ್ಕೆ ಇಳಿಸುವುದು.
* ಅನಧಿಕೃತ ಸಾಲ ವ್ಯವಹಾರ ಅಥವಾ ಆಸ್ತಿ ವಿವರ ಸಲ್ಲಿಸದಿರುವುದು: ವೇತನ ಬಡ್ತಿ ತಡೆ ಅಥವಾ ಹುದ್ದೆಯ ಕೆಳಹಂತಕ್ಕೆ ಇಳಿಸುವುದು.
* ಸರ್ಕಾರದ ನೀತಿಗಳ ವಿರುದ್ಧ ಸಿನಿಮಾ/ನಾಟಕಗಳಲ್ಲಿ ಅಭಿನಯ: 2 ವರ್ಷಗಳ ವೇತನ ಬಡ್ತಿ ತಡೆ.
ಈ ನಿಯಮಾವಳಿಗಳ ಪಟ್ಟಿಯು ಕೇವಲ ಮಾರ್ಗದರ್ಶನಕ್ಕಾಗಿ ನೀಡಲಾಗಿದ್ದು, ಪಟ್ಟಿಯಲ್ಲಿ ನಮೂದಿಸದಿರುವ ಇತರ ಉಲ್ಲಂಘನೆಗಳು ಕಂಡುಬಂದಲ್ಲಿ ಪ್ರಕರಣದ ತೀವ್ರತೆಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳುವ ಹಕ್ಕು ಶಿಸ್ತು ಪ್ರಾಧಿಕಾರಕ್ಕೆ ಇರುತ್ತದೆ. ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆಡಳಿತ ಇಲಾಖೆ ನಿರ್ದೇಶಿಸಿದೆ.


Click it and Unblock the Notifications
