Koosina Mane: ಕರ್ನಾಟಕ ಸರ್ಕಾರದಿಂದ ಮಹಿಳಾ ಕಾರ್ಮಿಕರಿಗೆ ಹೊಸ ಗಿಫ್ಟ್

ಬೆಂಗಳೂರು, ಮಾರ್ಚ್ 05: ಕರ್ನಾಟಕ ರಾಜ್ಯ ಸರ್ಕಾರ ಮಹಿಳಾ ಕಾರ್ಮಿಕರಿಗೆ ಬಂಪರ್ ಗಿಫ್ಟ್ ನೀಡಿದೆ. ನರೇಗಾ ಮಹಿಳಾ ಕಾರ್ಮಿಕರಿಗೆ ಸರ್ಕಾರದ 'ಕೂಸಿನ ಮನೆ' ಯೋಜನೆ ಅನ್ವಯವಾಗುವಂತೆ ಜಾರಿ ತಂದಿದೆ.

ಕರ್ನಾಟಕ ಮಹಿಳೆಯರಿಗೆ ಶಕ್ತಿ ಯೋಜನೆ, ಗೃಹ ಲಕ್ಷ್ಮೀ ಘೋಷಿಸಿ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಇದೀಗ ಕಾರ್ಮಿಕ ಮಹಿಳೆಯರಿಗೆ ಗಿಫ್ಟ್ ನೀಡಿದೆ. ನರೇಗಾ ಮಹಿಳಾ ಕಾರ್ಮಿಕರ ಮಕ್ಕಳಿಗಾಗಿ ರಾಜ್ಯದಲ್ಲಿ ಬರೋಬ್ಬರಿ 3,787 ಕೂಸಿನ ಮನೆಗಳಿಗೆ ಚಾಲನೆ ನೀಡಲಾಗಿದೆ.

Karnataka Govt Has Inaugurated for 3 787 Koosina Mane For MGnrega Women Labours

'ಕೂಸಿನ ಮನೆ'ಗಳಿಗೆ ಸರ್ಕಾರ ಚಾಲನೆ

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್‌' ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ದುಡಿಯುವ ಕೈಗಳಿಗೆ ಆಸರೆಯ ಗ್ಯಾರಂಟಿ" ನೀಡಲಾಗಿದೆ. ನರೇಗಾ ಮಹಿಳಾ ಕಾರ್ಮಿಕರ ಮಕ್ಕಳ‌ ಆರೈಕೆಗೆ ರಾಜ್ಯಾದ್ಯಂತ 3,787 ಕೂಸಿನ ಮನೆಗಳಿಗೆ ಚಾಲನೆ ಕೊಡಲಾಗಿದೆ. ನಾಡಿನ ಮಹಿಳೆಯರ ಸ್ವಾವಲಂಬಿ ಬದುಕಿನ ಹೋರಾಟಕ್ಕೆ ನಮ್ಮ‌ ಸರ್ಕಾರ ಬೆನ್ನೆಲುಬಾಗಿ ನಿಂತಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ರಾಜ್ಯ ಕಾಂಗ್ರೆಸ್ ಮಕ್ಕಳ ಆರೈಕೆಯ ವ್ಯವಸ್ಥೆ ಕುರಿತು ಭರವಸೆ ನೀಡಿತ್ತು. ಅಲ್ಲದೇ ಈ ಕೂಸಿನ ಮನೆ ಯೋಜನೆ ಸಿಎಂ ಸಿದ್ದರಾಮಯ್ಯನವರ ಕನಸಿನ ಯೋಜನೆ ಎನ್ನಲಾಗಿದೆ. ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕ ಮಹಿಳೆಯರಿಗೆ ಮಕ್ಕಳಿಗೆ ಅನ್ವಯವಾಗುವಂತೆ ಯೋಜನೆ ರೂಪಿಸಲಾಗಿದೆ.

Karnataka Govt Has Inaugurated for 3 787 Koosina Mane For MGnrega Women Labours

3 ವರ್ಷದೊಳಗಿನ ಮಕ್ಕಳಿಗೆ ಮನೆ ಸೌಲಭ್ಯ

ಈ ಮಹಿಳೆಯರ ಮೂರು ವರ್ಷದೊಳಗಿನ ಮಕ್ಕಳಿಗೆ ಮನೆ ಸೌಲಭ್ಯ ಸಿಗಲಿದೆ. ಅಂದರೆ ಕೂಲಿ ಕೆಲಸ ಮಾಡುವ ಮಹಿಳೆಯರು ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಈ ಆರೈಕೆ ಕೇಂದ್ರವಾದ 'ಕೂಸಿನ ಮನೆ'ಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಬಹುದು.

ಈ ಮೂಲಕ ಕೂಲಿ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುವ ಬಡ ಮಹಿಳೆಯರಿಗೆ ಇದರಿಂದ ಸಾಕಷ್ಟು ಪ್ರಯೋಜನ ಸಿಗಲಿದೆ. ಕೆಲಸ ವೇಳೆ ಮಕ್ಕಳ ಚಿಂತೆ ದೂರವಾಗಲಿದೆ. ಮಕ್ಕಳನ್ನು ಸರ್ಕಾರವೇ ನೋಡಿಕೊಳ್ಳುವುದರಿಂದ ಚಿಂತೆ ಬಿಟ್ಟು ಆರಾಮಾಗಿ ಕೂಲಿ ಮಾಡಿಕೊಂಡು ಬರಲು ಈ ಕೂಸಿನ ಮನೆ ಸಹಾಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಯೋಜನೆಗೆ ವ್ಯಾಪಕ ಸ್ಪಂದನೆ ನಿರೀಕ್ಷೆ

ರಾಜ್ಯ ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆ ಮೊದಲು ನೀಡಿದ ಗ್ಯಾರೆಂಟಿ ಜಾರಿಗೆ ತಂದಿದೆ. ಐದು ಗ್ಯಾರೆಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ನೀಡುವ 'ಶಕ್ತಿ ಯೋಜನೆ' ಮತ್ತು 'ಗೃಹ ಲಕ್ಷ್ಮೀ' ಯೋಜನೆ ಮಹಿಳೆಯರಿಗೆ ಸಂಬಂಧಿಸಿದ ಯೋಜನೆ ಆಗಿವೆ.

ಈ ಎರಡು ಯೋಜನೆಗಳಿಗೆ ಮಹಿಳೆಯರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಇದೀಗ ಕೂಸಿನ ಮನೆ ಯೋಜನೆಗೂ ಮಹಿಳಾ ಕಾರ್ಮಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+