Rangayan: ರಾಜ್ಯದ 6 ರಂಗಾಯಣಳಿಗೆ ನೂತನ ನಿರ್ದೇಶಕರ ನೇಮಕ, ಪಟ್ಟಿ ಇಲ್ಲಿದೆ
ಬೆಂಗಳೂರು, ಆಗಸ್ಟ್ 13: ಕರ್ನಾಟಕ ರಾಜ್ಯ 06 ರಂಗಾಯಣಗಳಿಗೆ (Rangayana) ನಿರ್ದೇಶಕರನ್ನು ಹಾಗೂ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಮುಂದಿನ ಮೂರು ವರ್ಷದ ಅವಧಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸದಸ್ಯರನ್ನು ನೇಮಕಾ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.
ಇನ್ನೂ ಉತ್ತರ ಕರ್ನಾಟಕದ ಭಾಗದಲ್ಲಿ ಕಲಿಯುಗ ಕುಡುಕ ನಾಟಕದಿಂದಲೇ ಜನಜನಿತವಾದ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡ ರಾಜು ತಾಳಿಕೋಟೆ ಅವರಿಗೂ ರಂಗಾಯಣದ ನಿರ್ದೇಶಕ ಸ್ಥಾನ ಲಭಿಸಿದೆ.

ಆರು ನೂತನ ನಿರ್ದೇಶಕರ ಪಟ್ಟಿ
* ಧಾರವಾಡ ರಂಗಾಯಣ - ರಾಜು ತಾಳಿಕೋಟೆ
* ಮೈಸೂರು ರಂಗಾಯಣ - ಸತೀಶ್ ತಿಪಟೂರು
* ಶಿವಮೊಗ್ಗ ರಂಗಾಯಣ - ಪ್ರಸನ್ನ ಡಿ. ಸಾಗರ,
* ಕಲಬುರ್ಗಿ ರಂಗಾಯಣ - ಡಾ. ಸುಜಾತ ಜಂಗಮ ಶೆಟ್ಟಿ,
* ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ- ಮಲ್ಲಿಕಾರ್ಜುನ ಕಡಕೋಳ
* ಕಾರ್ಕಳ ಯಕ್ಷ ರಂಗಾಯಣ- ವೆಂಕಟರಮಣ ಐತಾಳ ಅವರನ್ನು ನಿರ್ದೇಶಕರಾಗಿ ನೇಮಿಸಲಾಗಿದೆ.
ಇನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ 15-03-2024ರಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಲ್ಲಿ ಸದಸ್ಯರ ಸ್ನಾನಕ್ಕೆ ನೇಮಕಗೊಂಡಿರುವ ಡಾ.ವಿಜಯಲಕ್ಷ್ಮೀ ನಾಯಕ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಲ್ಲಿ ಸದಸ್ಯರ ಸ್ಥಾನಕ್ಕೆ ನೇಮಕವಾಗಿರುವ ರಾಮಮೂರ್ತಿ ಮತ್ತು ನಾಗರಾಜ್ ಶಿಲ್ಪಿ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯಲ್ಲಿ ಸದಸ್ಯರ ಸ್ಥಾನಕ್ಕೆ ನೇಮಕಗೊಂಡ ಆರ್.ಶಂಕರ್ ಅವರನ್ನು ಸದಸ್ಯರಾಗಿ ಮುಂದುವರೆಯಲು ನಿರಾಕರಿಸಲಾಗಿದೆ. ಹೀಗಾಗಿ ಅವರನ್ನು ರದ್ದುಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಈ ಕೆಳಗಿನವರನ್ನು ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರದ ಸದಸ್ಯರ ಸ್ಥಾನಗಳಿಗೆ ನಾಮನಿರ್ದೇಶನಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ. ಈ ನೇಮಕಾತಿ ಮುಂದಿನ ಮೂರು ವರ್ಷದ ಅವಧಿಗೆ ಇರುತ್ತದೆ ಎಂದು ಆದೇಶದಲ್ಲಿ ಸಚಿವರು ತಿಳಿಸಿದ್ದಾರೆ.
* ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯರಾಗಿ 'ಅಕ್ಷತಾ ಎಂ.ನಾಯಕ್' ನೇಮಕ
* ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ 'ವಿನೋದ್ ಮೂಡಗಡದ್ದೆ' ನೇಮಕ
* ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ 'ರಾಘವೇಂದ್ರ ಕಿನ್ನಾಳ' (ಕೊಪ್ಪಳ) ನೇಮಕ
* ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ 'ಶಿವಪ್ರಸಾದ್' (ಚನ್ನಪಟ್ಟಣ) ನೇಮಕ
* ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ 'ಎಚ್‌ಎಸ್ ಮಂಜುನಾಥ್' (ಹಾಸನ) ನೇಮಕ
* ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರಾಗಿ 'ಲಕ್ಷ್ಮಣ ಹಣಮಂತ ದೇಸಾರಟ್ಟಿ' (ಬಾಗಲಕೋಟೆ) ಅವರನ್ನು ನೇಮಕ ಮಾಡಲಾಗಿದೆ...












Click it and Unblock the Notifications