ಕಾಂಗ್ರೆಸ್‌ನಿಂದ ಮಹದೇವಪ್ಪನಿಗೂ, ಕಾಕಾ ಪಾಟೀಲನಿಗೂ ಬೆಲೆ ಏರಿಕೆ ಬಿಸಿ: ಬಿಜೆಪಿ

ರಾಜ್ಯ ಕಾಂಗ್ರೆಸ್‌ ಸರ್ಕಾರವು ಬಸ್‌ ಪ್ರಯಾಣ ದರವನ್ನು ಶೇ 15ರಷ್ಟು ಏರಿಸುವುದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ಕೂಡ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಆಡಳಿತದಲ್ಲಿ ಮಹಾದೇವಪ್ಪನಿಗೂ ಬೆಲೆ ಏರಿಕೆಯ ಬಿಸಿ, ಕಾಕಾ ಪಾಟೀಲನಿಗೂ ಬೆಲೆ ಏರಿಕೆಯ ಬಿಸಿ ಎಂದು ಕಾಂಗ್ರೆಸ್‌ ಅನ್ನು ಟೀಕಿಸಿದೆ.

ಸಿದ್ದರಾಮಯ್ಯ & ಕೋ. ಬೆಲೆ ಏರಿಕೆಗೆ ರಾಜ್ಯದ ಜನತೆ ತತ್ತರಿಸಿದ್ದು, ಜನರ ಬದುಕನ್ನು 'ಕೈ' ಆಡಳಿತ ಹೈರಾಣಾಗಿಸಿದೆ. ಬಿಜೆಪಿ ಆಡಳಿತದಲ್ಲಿ ಮತ್ತು ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್‌ ಆಡಳಿತದಲ್ಲಿನ ವ್ಯತ್ಯಾಸವನ್ನು ನೀವೇ ನೋಡಿ ಎಂದು ಪಟ್ಟಿಯನ್ನು ಹಂಚಿಕೊಂಡಿದೆ.

Karnataka Govt Faces Backlash Over 15 Bus Fare Hike BJP Criticizes Congress

ಲೂಟಿಕೋರ ಕಾಂಗ್ರೆಸ್ ಸರ್ಕಾರದ ಕತ್ತರಿ ಹಾಕುವ ಗ್ಯಾರಂಟಿಗಳೆಂದರೆ ಬಸ್‌ ಪ್ರಯಾಣ ದರ ಏರಿಕೆ, ಕುಡಿಯುವ ನೀರಿನ ದರ ಏರಿಕೆ, ಹಾಲಿನ ದರ ಏರಿಕೆ, ಮದ್ಯದ ದರ ಏರಿಕೆ, ಪೆಟ್ರೋಲ್‌, ಡಿಸೇಲ್‌ ದರ ಏರಿಕೆ, ಜನರ ಜೇಬಿಗೆ ಕತ್ತರಿ ಹಾಕಿ ಪಿಕ್‌ಪಾಕೆಟ್‌ ಮಾಡುವುದೇ ದಿವಾಳಿ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಎಂದು ವಾಗ್ದಾಳಿ ನಡೆಸಿದೆ.

ಸಾರಿಗೆ ನಿಗಮಗಳು ಭರ್ಜರಿ ಲಾಭದಲ್ಲಿವೆ ಎಂದು ಬುರುಡೆಬಿಟ್ಟ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ, ಇದೀಗ ಏಕಾಏಕಿ ನಷ್ಟದ ಹಾದಿಯಲ್ಲಿ ಹೇಗೆ ಸಾಗುತ್ತಿವೆ? ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ಲಾಭಗಳಿಸಿದ್ದರೆ, ಪುರುಷ ಪ್ರಯಾಣಿಕರಿಗೂ ಉಚಿತವಾಗಿ ಶಕ್ತಿ ಯೋಜನೆ ಜಾರಿಗೆ ತಂದರೆ ಬೆಲೆ ಏರಿಕೆಗೆ ಕಡಿವಾಣ ಹಾಕಬಹುದು. ಸ್ವಯಂ ಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರೇ, ಬಡವರ ಮೇಲೆ ಏಕಿಷ್ಟು ಕೋಪ? ಎಂದು ಪ್ರಶ್ನಿಸಿದೆ.

Karnataka Govt Faces Backlash Over 15 Bus Fare Hike BJP Criticizes Congress

ಗ್ಯಾರಂಟಿ ಕಾರಣಗಳಿಂದಾಗಿ ಇಂದು ರಾಜ್ಯದ ಜನರು ದುಬಾರಿ ಬೆಲೆಯನ್ನು ತೆರಬೇಕಾಗಿದೆ. ಹಾಲಿನ ದರ ಏರಿಸಲಾಗಿದೆ, ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಸ್ಟ್ಯಾಂಪ್ ಡ್ಯೂಟಿ, ರಿಜಿಸ್ಟ್ರೇಶನ್ ಶುಲ್ಕ ಮಾತ್ರವಲ್ಲದೆ ವಿವಿಧ ತೆರಿಗೆಗಳನ್ನೂ ಹೆಚ್ಚಿಸಲಾಗಿದೆ. ಅಭಿವೃದ್ಧಿ ಒಂದು ಬಿಟ್ಟು ತಲೆ ಬೋಳಿಸುವ ಕೆಲಸ ಮಾಡುವ ಸರ್ಕಾರ ಇದಾಗಿದೆ. ರಾಜ್ಯ ಸರ್ಕಾರದ ಖಜಾನೆ ಪೂರ್ತಿ ಖಾಲಿಯಾಗಿದ್ದು ಸರ್ಕಾರದ ದಿನ ದೂಡಲು ಜನತೆಗೆ ಬರೆ ಹಾಕುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ.

Karnataka Govt Faces Backlash Over 15 Bus Fare Hike BJP Criticizes Congress

ಬಿಜೆಪಿ ನಾಯಕ ಸಿ.ಟಿ.ರವಿ, ಆರ್ಥಿಕವಾಗಿ ದಿವಾಳಿಯಾದ ಕಾಂಗ್ರೆಸ್ ಸರ್ಕಾರದ ಹೊಸ ಯೋಜನೆ ಮಹಿಳೆಯರಿಗೆ ಉಚಿತ ಪುರುಷರಿಗೆ ಅದರ ಹೊರೆ ಖಚಿತ ಎಂದು ಟೀಕಿಸಿದ್ದಾರೆ. ಪೆಟ್ರೋಲ್ ಡೀಸೆಲ್ ದರ ಏರಿಕೆ, ಆಸ್ತಿ ತೆರಿಗೆ ಏರಿಕೆ, ಮುದ್ರಾಂಕ ದರ ಏರಿಕೆ, ನೀರಿನ ದರ ಏರಿಕೆ, ಜನನ ಮರಣ ಪ್ರಮಾಣಪತ್ರ ಶುಲ್ಕ ಏರಿಕೆ, ಹಾಲಿನ ದರ ಏರಿಕೆ, ಬಸ್ ದರ ಏರಿಕೆ, ಮದ್ಯದ ಮೇಲಿನ ತೆರಿಗೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಇತ್ಯಾದಿ ಇತ್ಯಾದಿ. ಈ ಕಾಂಗ್ರೆಸ್ ರಾಕ್ಷಸನ ಹಾಹಾಕರದ ದಾಹ ತಣಿಸಾಲು ಜನ ಇನ್ನೆಷ್ಟು ತೆರಿಗೆ ತೆರಬೇಕು? ಎಂದು ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+