Get Updates
Get notified of breaking news, exclusive insights, and must-see stories!

ಕೆನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಗಡಿಪಾರು: ಬಂದ್‌ಗೆ ಕರೆ ನೀಡುವುದಾಗಿ ಯತ್ನಾಳ್ ಎಚ್ಚರಿಕೆ

ಬೆಂಗಳೂರು, ಅಕ್ಟೋಬರ್ 16: ಹಿಂದುಗಳನ್ನು ಒಡೆಯುವುದನ್ನು ವಿರೋಧಸಿದ ಕಾರಣಕ್ಕಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೆನೇರಿ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ವಿಜಯಪುರದಿಂದ ಗಡಿಪಾರು ಮಾಡ್ಡಿದೆ. ಈ ಬಗ್ಗೆ ಇಂದು ಗುರುವಾರ (ಅ.16) ಗಡಿಪಾರು ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ವ್ಯಾಪಕ ಚರ್ಚೆ, ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಬಿಜೆಪಿ ಶಾಸಕ, ಹಿಂದೂ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಆದೇಶ ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

ಎಕ್ಸ್‌ ಪೋಸ್ಟ್ ಮಾಡಿರುವ ಅವರು, ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಯಥಾವತ್ತಾಗಿ ವಿವರಿಸಿದ್ದಕ್ಕೆ ಶ್ರೀ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳಿಗೆ ವಿಜಯಪುರಕ್ಕೆ ಬರದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ರಾಜಕೀಯ ಪ್ರಾಬಲ್ಯ ಸಾಧಿಸಲು, ವೋಟ್ ಬ್ಯಾಂಕ್ ರಾಜಕಾರಣವನ್ನು ಧಿಕ್ಕರಿಸಲು ಅವರು ಮಾತನಾಡಿದ ಕಾರಣ, ಅವರ ಮೇಲೆ ಈ ಕ್ರಮ ಜರುಗಿಸಲಾಗಿದೆ. ಆತ್ಮನಿರ್ಭರ ಸಮಾಜವನ್ನು ಸ್ಥಾಪಿಸಲು ಅನೇಕ ಉಪಕ್ರಮಗಳನ್ನು ಪರಿಚಯಿಸಿ ಎಲೆಮರಿಕಾಯಿಯಂತೆ ದುಡಿಯುತ್ತಿರುವ ಸರ್ವಸಂಗಪರಿತ್ಯಾಗಿಗಳ ಮೇಲೆ ಸರ್ಕಾರ ಕ್ರಮ ಜರುಗಿಸಿರುವುದನ್ನು ಖಂಡಿಸಿದ್ದಾರೆ.

Karnataka Govt Exile Kaneri Math Swamiji from Vijayapura BJP s Basanagouda Patil Yatnal condemn

ಪ್ರಜೆಗಳ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಒಂದೆಡೆ, "ಮೊಹಬ್ಬತ್ ಕಿ ದುಕಾನ್' ಎಂದು ಸಮಸಮಾಜದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವರು ಪೊಲೀಸರನ್ನು, ಜಿಲ್ಲಾಡಳಿತವನ್ನು ಉಪಯೋಗಿಸಿಕೊಂಡು ವಾಕ್ ಸ್ವಾತಂತ್ರ್ಯಹರಣ ಮಾಡುತ್ತಿರದೆ. ಇದು ಹೇಯ ಹಾಗೂ ಖಂಡನೀಯ ಸಂಗತಿ. ಇದು ಪ್ರಜಾಪ್ರಭುತ್ವದ ಅಣಕ ಎಂದರೆ ತಪ್ಪಾಗಲಾರದು. ಸರ್ಕಾರ ಕೂಡಲೇ ಈ ನಿಷೇಧವನ್ನು ವಾಪಾಸ್ ಪಡೆಯಬೇಕು ಈ ರೀತಿಯಾದ ನಿರಂಕುಶ ಧೋರಣೆಯನ್ನು ಕೂಡಲೇ ಕೈಬಿಡಬೇಕು.

ಒಂದು ವೇಳೆ, ಸ್ವಾಮೀಜಿಗಳಿಗೆ ನಿಷೇಧ ಹೇರಿದರೆ, ವಿಜಯಪುರದ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಈ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು.

ಡಿಸಿ ಗಡಿಪಾರು ಆದೇಶದಲ್ಲೇನಿದೆ?

ಸ್ವಾಮೀಜಿಗಳ ಈ ಗಡಿಪಾರು ಆದೇಶವನ್ನು 'ಜೋಳದ ರೊಟ್ಟಿ' ಹೆಸರಿನ ಎಕ್ಸ್ ಪೋಸ್ಟ್ ಹಂಚಿಕೊಂಡು ಹಿಂದುಗಳೇ ಅರ್ಥ ಮಾಡಿಕೊಳ್ಳಿ ಎಂದು ಬರೆಯಲಾಗಿದೆ. ಆದೇಶ ಪ್ರತಿ ಸ್ಕೀನ್ ಶಾಟ್ ಹಂಚಿಕೊಳ್ಳಲಾಗಿದ್ದು, ಅದನ್ನು ಯತ್ನಾಳ್ ಅವರು ಮರು ಪೋಸ್ಟ್ ಮಾಡಿ ಖಂಡಿಸಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ್ ಅವರು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಕಲಂ 163 (1), (2) ಮತ್ತು (3) ಪ್ರಕಾರ, ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಕನೇರಿ ಮಠ ಬೀಳೂರು ಗ್ರಾಮ ತಾಲೂಕು ಜತ್ತ ಮಹಾರಾಷ್ಟ್ರ ರಾಜ್ಯ ಇವರನ್ನು ವಿಜಯಪುರ ಜಿಲ್ಲೆ ಸಾರ್ವಜನಿಕ ಶಾಂತತೆಗೆ ಧಕ್ಕೆ ಉಂಟಾಗುವಂತೆ ಮುಂಜಾಗ್ರತಾ ಕ್ರಮ ವಹಿಸಿ ದಿನಾಂಕ 16-10-2025 ರಿಂದ 14-12-2025ರವರೆಗೆ ವಿಜಯಪುರ ಜಿಲ್ಲೆ ಪ್ರವೇಶಿಸುವಂತೆ ಪ್ರತಿಬಂಧಿಸಿದ ಆದೇಶಿಸಲಾಗಿದೆ ಎಂದು ಡಿಸಿ ಗಡಿಪಾರು ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಸರ್ವಾಧಿಕಾರಿ ಧೋರಣೆ: ವಿಜಯೇಂದ್ರ

ರಾಜ್ಯದ ಕಾಂಗ್ರೆಸ್ ಸರ್ಕಾರ ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ ಪ್ರವೇಶ ನಿರ್ಬಂಧ ಆದೇಶ ಹೊರಡಿಸುವ ಮೂಲಕ ಸರ್ವಾಧಿಕಾರಿ ಸ್ಥಿತಿಯನ್ನು ಪ್ರದರ್ಶಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಹಿಂದೂ ಧರ್ಮವನ್ನು ಒಡೆಯುವ ಕುತಂತ್ರ ನೀತಿ ಅನುಸರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರ ಸಾಧು-ಸಂತರನ್ನು ಶಾಂತಿ ಕದಡುವವರು ಎಂಬ ಹಣೆಪಟ್ಟಿ ಹಚ್ಚುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಶ್ರೀಗಳಿಗೆ ವಿಜಯಪುರ ಜಿಲ್ಲೆಯ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿರುವ ಆದೇಶದ ಕ್ರಮ ರಾಜಕೀಯ ಪ್ರೇರಿತ ಮತ್ತು ಪ್ರಜಾತಂತ್ರ ವಿರೋಧಿ ನಡೆಯುತ್ತಿದೆ.

ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ ಕುಖ್ಯಾತಿಯ ಕಾಂಗ್ರೆಸ್ ಅದೇ ಸ್ಥಿತಿಯಲ್ಲಿಯೇ ಈ ಕ್ಷಣಕ್ಕೂ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಕಾಂಗ್ರೆಸ್ ಆಡಳಿತದ ಧೋರಣೆಗಳು ಸಾಕ್ಷಿ ಒದಗಿಸುತ್ತಿವೆ. ಸಾಧು ಸಂತರ ನಡುವೆ ಬಿರುಕು ಮೂಡಿಸುವ ಬದಲು ಸೌಹಾರ್ದತೆಯ ವಾತಾವರಣ ನಿರ್ಮಿಸುವ ಸರ್ಕಾರ ಗಮನ ಹರಿಸಲಿ ಎಂದಿದ್ದಾರೆ.

ಪ್ರತಾಪ್ ಸಿಂಹ ಪ್ರತಿಕ್ರಿಯೆ

ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಯಥಾವತ್ತಾಗಿ ವಿವರಿಸಿದ್ದಕ್ಕೆ ಶ್ರೀ ಕನೇರಿ ಮಠದ ಪರಮಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿರವರನ್ನು ವಿಜಯಪುರ ಜಿಲ್ಲೆ ಪ್ರವೇಶಿಸಿದಂತೆ 3 ತಿಂಗಳವರೆಗೂ ನಿರ್ಬಂಧ ಹೇರಿರುವುದು ಸರ್ಕಾರ ಹಿಂದೂ ಸಮಾಜ ಒಡೆಯುವ ಮತ್ತೊಂದು ಹುನ್ನಾರವಷ್ಟೇ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+