• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

PUC ಮತ್ತು SSLC ವಿದ್ಯಾರ್ಥಿಗಳಿಗೆ ಟಿ-20 ಮಾದರಿ ಒನ್ ಡೇ ಪರೀಕ್ಷೆಗೆ ಚಿಂತನೆ

|
Google Oneindia Kannada News

ಬೆಂಗಳೂರು, ಜೂ. 03: ಕೊರೊನಾ ಎರಡನೇ ಅಲೆ ಭೀತಿಯಿಂದಾಗಿ ಪ್ರಸಕ್ತ ಸಾಲಿನ 2020-21 ನೇ ಸಾಲಿನ ಸಿಬಿಎಸ್ಇ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ರಾಜ್ಯ ಪಠ್ಯ ಕ್ರಮದ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಗಳನ್ನು ರದ್ದು ಪಡಿಸಬೇಕು ಎಂದು ಪೋಷಕರು ಒತ್ತಡ ಹಾಕುತ್ತಿದ್ದಾರೆ. ಪರೀಕ್ಷೆ ರದ್ದು ಪಡಿಸದಿರಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ಕನಿಷ್ಠ ಒಂದು ದಿನ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬಿಎಸ್ ವೈ ನೇತೃತ್ವದ ಸಭೆ ತೀರ್ಮಾನ

ಬಿಎಸ್ ವೈ ನೇತೃತ್ವದ ಸಭೆ ತೀರ್ಮಾನ

ಕೇಂದ್ರ ಮಂಡಳಿ ಸಿಬಿಎಸ್ಇ ಪಿಯುಸಿ ಹಾಗೂ ಎಸ್ಎಸ್ಎಲ್‌ಸಿ ಪರೀಕ್ಷೆಗಳನ್ನು ರದ್ದು ಪಡಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಪರೀಕ್ಷೆಗಳನ್ನು ರದ್ದು ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಭೆ ನಡೆಸಿ ಗಂಭೀರ ಚರ್ಚೆ ನಡೆಸಿದ್ದಾರೆ. ಪಿಯುಸಿ ಬಹುತೇಕ ಸರ್ಕಾರಿ ಹುದ್ದೆಗಳಿಗೆ ಮಾನದಂಡವನ್ನಾಗಿ ಪರಿಗಣಿಸುತ್ತೇವೆ. ರಾಜ್ಯದಲ್ಲಿ ಸಿಇಟಿ ಪರಿಕ್ಷೆಗೂ ಪಿಯಸಿ ಅಂಕಗಳನ್ನು ಪರಿಗಣಿಸುವುದರಿಂದ ಪಿಯುಸಿ ಪರೀಕ್ಷೆ ಮಾಡದಿದ್ದರೆ ಭವಿಷ್ಯದಲ್ಲಿ ಸಮಸ್ಯೆಯಾಗುತ್ತದೆ. ಕೆಪಿಎಸ್ ಸಿ ಹಾಗೂ ಸಿಇಟಿ ನಿಯಮಗಳನ್ನೇ ಬದಲಿಸಬೇಕಾಗುತ್ತದೆ. ಹೀಗಾಗಿ ಇದಕ್ಕಿಂತೂ ಟಿ20 ಕ್ರಿಕೆಟ್ ಮಾದರಿಯಲ್ಲಿ ಬಹು ಆಯ್ಕೆ ಪ್ರಶ್ನೆಗಳ ಮೂರು ಪ್ರಶ್ನೆ ಪತ್ರಿಕೆ ಆಯ್ಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ಕೊಡುವುದು. ಕೇವಲ ಒಂದೇ ದಿನದಲ್ಲಿ ಮೂರು ವಿಷಯಗಳಿಗೆ ಬಹು ಆಯ್ಕೆ ಪ್ರಶ್ನೆ ಪತ್ರಿಕೆಗಳಿಗೆ ಪರೀಕ್ಷೆ ನಡಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಪಿಯುಸಿ ಓನ್ ಡೇ ಎಕ್ಸಾಮ್?

ಪಿಯುಸಿ ಓನ್ ಡೇ ಎಕ್ಸಾಮ್?

ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಉಪ ನಿರ್ದೇಶಕರ ಅಭಿಪ್ರಾಯ ಸಂಗ್ರಹಿಸುವ ಕಾರ್ಯದಲ್ಲಿ ಪಿಯು ಪರೀಕ್ಷಾ ಮಂಡಳಿಯ ಅಧಿಕಾರಿಗಳು ನಿರತರಾಗಿದ್ದಾರೆ. ಪರೀಕ್ಷೆ ಇಲ್ಲದೇ ಉತ್ತೀರ್ಣ ಮಾಡಿದರೆ, ಈಗಾಗಲೇ ಪರೀಕ್ಷೆ ಬರೆದು ಪಾಸಾಗಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಉದ್ಯೋಗದ ವಿಷಯವಾಗಿ ಪರೀಕ್ಷೆ ಇಲ್ಲದೇ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕ ಪರಿಗಣನೆ ಹಾಗೂ ಪರೀಕ್ಷೆ ಬರೆದು ಪಾಸಾದ ವಿದ್ಯಾರ್ಥಿಗಳ ನಡುವೆ ತಾರತಮ್ಯಕ್ಕೆ ನಾಂದಿಯಾಡದೆ. ಹೀಗಾಗಿ ಪಿಯುಸಿ ಮೇಲೆ ಉದ್ಯೋಗಕ್ಕೆ ಅರ್ಜಿ ಕರೆದ ಸಂದರ್ಭದಲ್ಲಿ ವಿದ್ಯಾರ್ಥಿಗಳ ನಡುವೆ ತಿಕ್ಕಾಟಕ್ಕೆ ನಾಂದಿ ಹಾಡಲಿದೆ. ಕೋರ್ಟ್, ಕಾನೂನು ಸಮರದಿಂದ ಮುಂದಿನ ದಿನಗಳಲ್ಲಿ ಬಹುದೊಡ್ಡ ತಲೆ ನೋವು ಉಂಟಾಗಲಿದೆ. ಪಿಯುಸಿ ಪರೀಕ್ಷೆ ರದ್ದು ಪಡಿಸುವುದಾದರೆ ಕೆಪಿಎಸ್ ಸಿ ನಿಯಮಕ್ಕೂ ತಿದ್ದುಪಡಿ ತರಬೆಕಾಗುತ್ತದೆ. ಇದೆಲ್ಲವನ್ನೂ ಪರಿಗಣಿಸಿ ಪರೀಕ್ಷೆ ನಡೆಸಲು ಸರ್ಕಾರ ಉತ್ಸುಕವಾಗಿದೆ ಎಂದು ಹೇಳಲಾಗುತ್ತಿದೆ.

ಎಸ್ಎಸ್ ಎಲ್ ಸಿ ಪರೀಕ್ಷೆ ಯಾಕೆ ?

ಎಸ್ಎಸ್ ಎಲ್ ಸಿ ಪರೀಕ್ಷೆ ಯಾಕೆ ?

ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಚಾಲನ ಪರವಾನಗಿ ಹೊರತು ಪಡಿಸಿದರೆ ಡಿ ಗ್ರೂಫ್ ಹುದ್ದೆಗಳಿಗೆ ಮಾತ್ರ ಪರಿಗಣಿಸುತ್ತಾರೆ. ಉಳಿದಂತೆ ಯಾವ ಹುದ್ದೆಗಳಿಗ ಅಂಗೀಕರಿಸುವುದಿಲ್ಲ. ಇನ್ನು ಒಂದೂ ವರೆ ವರ್ಷದಿಂದ ಎಸ್ ಎಸ್ ಎಲ್ ಸಿ ಮಕ್ಕಳು ಪರೀಕ್ಷೆ- ಪರೀಕ್ಷೆ ಎಂದು ಓದಿಕೊಂಡು ಒದ್ದಾಡುತ್ತಿದ್ದಾರೆ. ಈಗಲು ಜುಲೈ, ಆಗಸ್ಟ್ ನಲ್ಲಿ ಪರೀಕ್ಷೆ ನಡೆಸುವುದರಲ್ಲಿ ಅರ್ಥವಿಲ್ಲ. ಪಿಯುಸಿಗೆ ಪರೀಕ್ಷೆ ನಡೆಸಿದರೂ ಎಸ್ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡಬೇಕು. ಮೂರನೆ ಅಲೆ ಭೀತಿ ಇರುವ ಕಾರಣಕ್ಕೆ ವಿದ್ಯಾರ್ಥಿಗಳ ಆರೋಗ್ಯಕ್ಕೂ ಒತ್ತು ನೀಡಬೇಕು. ಇನ್ನು ಕೇಂದ್ರ ಸಿಬಿಎಸ್ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದ ಕಾರಣ ಅವರ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ ಎಸ್ಎಸ್ ಎಲ್ ಸಿ ಪರೀಕ್ಷೆಯನ್ನು ನಡೆಸುವ ಸರ್ಕಾರದ ತೀರ್ಮಾನದಲ್ಲಿ ಅರ್ಥವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

  Modi ಪರೀಕ್ಷೆ ರದ್ದು ಮಾಡಿದರೂ Suresh Kumar ಮನಸು ಮಾಡ್ತಿಲ್ಲ | Oneindia Kannada
  ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಹೊಡೆತ

  ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಹೊಡೆತ

  ಸಾಮಾನ್ಯವಾಗಿ ದೇಶದಲ್ಲಿ ಸರ್ಕಾರಿ ಉದ್ಯೋಗಿಗಳ ನೇಮಕಾತಿಗಾಗಿ ಬಹು ಆಯ್ಕೆ ಪ್ರಶ್ನೆ ಮಾದರಿ ಪರೀಕ್ಷಾ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಈ ಮಾದರಿಯ ಪರೀಕ್ಷೆ ಎದುರಿಸಲು ಅಭ್ಯರ್ಥಿಗಳು ತುಂಬಾ ಅಧ್ಯಯನ ನಡೆಸಬೇಕು. ಒಂದು ವಿಷಯವನ್ನು ಪರಿಪೂರ್ಣ ಮಾದರಿಯಲ್ಲಿ ಅಧ್ಯಯನ ನಡೆಸಿದರೆ ಮಾತ್ರ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯ. ವಿದ್ಯಾರ್ಥಿಗಳು ವಿಷಯ ಅರ್ಥ ಮಾಡಿಕೊಂಡು ಕೇಳುವ ಪ್ರಶ್ನೆಗೆ ಉತ್ತರ ಬರೆಯುವ ಉದ್ದೇಶವಿಟ್ಟುಕೊಂಡು ವರ್ಷದಿಂದ ಅಧ್ಯಯನ ಮಾಡಿರುತ್ತಾರೆ. ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಬರೆಯುವಾಗ, ವಿದ್ಯಾರ್ಥಿಗಳು ಸಣ್ಣ ತಪ್ಪು ಮಡಿದರೂ ಅರ್ಧ ಅಂಕ ಕಡಿತಗೊಳಿಸಿ ಉಳಿದಿದ್ದಕ್ಕೆ ಅಂಕ ಕೊಡುವ ಅವಕಾಶ ಇರುತ್ತದೆ. ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಸಣ್ಣ ತಪ್ಪಾದರೂ ಅಂಕ ನೀಡಲು ಸಾಧ್ಯವಿಲ್ಲ. ಸಾಮಾನ್ಯ ಪ್ರಶ್ನೆ ಪತ್ರಿಕೆ ಪರೀಕ್ಷೆಗಿಂತಲೂ ತುಂಬಾ ಕಠಿಣವಾದ ಮಾದರಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಪರೀಕ್ಷೆ. ಬಹು ಆಯ್ಕೆ ಪ್ರಶ್ನೆ ಸ್ವಲ್ಪ ಇರಬೇಕು, ಉಳಿದಂತೆ ಪ್ರಶ್ನೆಗಳಿಗೆ ಉತ್ತರ ಬರೆಯುವ ಅವಕಾಶ ನೀಡದೇ ಪರೀಕ್ಷೆಗೆ ಅವಕಾಶ ಕೊಟ್ಟರೆ, ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ. ಅದರಿಂದ ಆಗುವ ಸಮಸ್ಯೆಗೆ ಸರ್ಕಾರದ ಕೈಯಲ್ಲಿ ಪರಿಹಾರವೂ ಇರಲ್ಲ. ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಪರೀಕ್ಷೆ ಮಾಡುತ್ತಿರುವ ಬಗ್ಗೆ ಆಲೋಚನೆ ಮಾಡುವ ಬದಲು, ವಿದ್ಯಾರ್ಥಿಗಳು ಯಾವ ಮಾದರಿಯ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರೋ ಅದೇ ಪರೀಕ್ಷೆಗೆ ಅವಕಾಶ ಕೊಡುವುದು ಸೂಕ್ತ ಎಂದು ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.

  English summary
  Karnataka Govt considering holding a ‘One Day’ exam for 2nd PUC, SSLC students in Karnataka in July-August with largely MCQs question paper. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  Desktop Bottom Promotion