Temple Property: ಒತ್ತುವರಿ ಆಸ್ತಿಗಳು ದೇವಸ್ಥಾನಗಳ ಹೆಸರಿಗೆ ನೋಂದಣಿ: 5022 ಆಸ್ತಿ ಮುಜರಾಯಿ ಇಲಾಖೆಗೆ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಮಾರ್ಚ್ 21: ಕರ್ನಾಟಕದಲ್ಲಿ ದೇವಸ್ಥಾನಗಳ ಆಸ್ತಿ ಒತ್ತುವರಿ ಮಾಡಿಕೊಂಡ ಖಾಸಗಿ ವ್ಯಕ್ತಿಗಳಿಗೆ ರಾಜ್ಯ ಸರ್ಕಾರ ಶಾಖ್ ನೀಡಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಸಾವಿರಾರು ದೇವಸ್ಥಾನಗಳು ಸರ್ಕಾರ ಹಾಗೂ ದಾನಿಗಳು ನೀಡಿದ ಆಸ್ತಿಯನ್ನು ಹೊಂದಿವೆ. ಈ ಆಸ್ತಿಗಳ ಒತ್ತುವರಿ ಮಾಡಲಾಗಿದ್ದು, ಅದನ್ನು ತೆರವು ಮಾಡಿ ಕೂಡಲೇ ನೋಂದಣಿ ಮಾಡಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.
ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 34100ಕ್ಕೂ ಹೆಚ್ಚು ದೇವಾಲಯಗಳು ಬರುತ್ತವೆ. ಅವುಗಳು ಅಪಾರ ಆಸ್ತಿ ಹೊಂದಿವೆ. ಅವುಗಳನ್ನು ಒತ್ತುವರಿ ಮಾಡಿಕೊಂಡು ಖಾಸಗಿ ವ್ಯಕ್ತಿಗಳಿಂದ ತೆರವು ಮಾಡಿ, ದೇವಸ್ಥಾನಗಳ ಹೆಸರಿನಗೆ ನೋಂದಣಿ ಮಾಡಲಾಗುತ್ತದೆ ಎಂದು ಸದನದಲ್ಲಿ ಬಿಜೆಪಿ ನಾಯಕ ಸಿಟಿ ರವಿ ಅವರು ಪ್ರಶ್ನೆಗೆ ಸಚಿವರು ಉತ್ತರಿಸುವ ಮೂಲಕ ದೇಗುಲ ಜಾಗ ಒತ್ತುವರಿದಾರರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಒತ್ತುವರಿ ತೆರವಿನ ಕಾರ್ಯದಡಿ ಈವರೆಗೆ ಸರ್ಕಾರ ಒಟ್ಟು 5000ಕ್ಕೂ ಅಧಿಕ ಆಸ್ತಿಗಳನ್ನು ಒತ್ತುವರಿದಾರರಿಂದ ಮರಳಿ ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ರಾಜ್ಯ ಕಂದಾಯ ಇಲಾಖೆಯ ಒಪ್ಪಿಗೆಯಡಿ ದೇಗುಲಗಳ ಹೆಸರಿನಲ್ಲಿ ಪಹಣಿ ಮಾಡಿಸಲಾಗುತ್ತಿದೆ. ಇದಷ್ಟೇ ಅಲ್ಲದೇ ಯಾರೆಲ್ಲ ಒತ್ತುವರಿ ಮಾಡಿಕೊಂಡಿದ್ದಾರೆ. ಯಾಕೆ, ಕಾರಣಗಳು ಸೇರಿದಂತೆ ಅಕ್ರಮ ಕುರಿತು ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಸದನಕ್ಕೆ ವಿವರಿಸಿದರು.
ದೇವಸ್ಥಾನಗಳ ಜಮೀನುಗಳನ್ನು ದೇವಸ್ಥಾನಗಳಿಗೆ ಇಂಡೀಕರಣ ಮಾಡಲಾಗುವುದು. ಚಿಕ್ಕಮಗಳೂರಿನ ಜಾಗರ ಹೋಬಳಿ ಇನಾಂ ದತ್ತಾತ್ರೇಯ ಪೀಠದ ಜಮೀನಿಗೆ ಸಂಬಂಧಿಸಿದಂತೆ, ಈಗಾಗಲೇ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. ಅವರು ಪರಿಶೀಲಿಸಿ ವರದಿ ನೀಡಿದ ನಂತರ ಅಗತ್ಯ ಕ್ರಮ ವಹಿಸಲಾಗುವುದು.

32 ಎಕರೆ ಜಾಗ ಮಂಜೂರು ತಿರಸ್ಕಾರ
ಈ ದತ್ತಾತ್ರೇಯಪೀಠ ಗ್ರಾಮದಲ್ಲಿ 6213 ಎಕರೆ ಆಸ್ತಿ ಇದ್ದು, ಆ ಆಸ್ತಿಯಲ್ಲಿ ಪ್ಲಾಂಟೇಶನ್ 2450ಎಕರೆ ಇದ್ದು, ಸರ್ಕಾರಿ ಖರಾಬು 3751 ಎಕರೆ ಇದೆ. ಇನಾಂ ದತ್ತಾತ್ರೇಯ ದೇವರು ಇವರಿಂದ ಫಾತಿಮಾ ಬಿ ಎಂಬುವವರಿಗೆ ಸುಮಾರು 30 ವರ್ಷಗಳ ಹಿಂದೆ (1994ರ ಆಸುಪಾಸು) ಒಟ್ಟು 32 ಎಕರೆ ಜಾಗ ಮಂಜೂರು ಮಾಡಿದ್ದರು. ಹೈಕೋರ್ಟ್ ನಿರ್ದೇಶನ ಮೇರೆಗೆ ಅದನ್ನು ಜಿಲ್ಲಾಧಿಕಾರಿಗಳು ಮಂಜೂರಾತಿ ತಿರಸ್ಕೃರಿಸಿದ್ದಾರೆ. ಬಳಿಕ ಈ ಆಸ್ತಿಯನ್ನು ಸರ್ಕಾರಿ ಆಸ್ತಿ ಅಂತಲೇ ಘೋಷಿಸಲಾಗಿದೆ. 2024ರಿಂದ ಫಾತಿಮಾ ಅವರಿಗೆ ನೀಡಿದ್ದ ಆಸ್ತಿಯನ್ನು ವಶಕ್ಕೆ ಪಡೆದು ಸರ್ಕಾರಿ ಆಸ್ತಿಯಾಗಿಸಲಾಗಿದೆ. ಈ ಸಂಬಂಧ ಹೈಕೋರ್ಟ್ ರಿಟ್ ಪಿಟಿಷನ್ ಸಲ್ಲಿಸಿದ್ದಾರೆ. ಅದು ವಿಚಾರಣೆ ಹಂತದಲ್ಲಿದೆ ಎಂದು ಅವರು ವಿವರಿಸಿದರು.












Click it and Unblock the Notifications