ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಬದಿ ಸವಾರರಿಗೂ ಹೆಲ್ಮಟ್ ಕಡ್ಡಾಯಕ್ಕೆ ಅಡ್ಡಿಯೇ ಇಲ್ಲ!

By Mahesh
|
Google Oneindia Kannada News

ಬೆಂಗಳೂರು, ಅ.28: ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕರ್ನಾಟಕ ಸರ್ಕಾರ ಕೂಡಾ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ನಿಯಮವನ್ನು ರೂಪಿಸುತ್ತಿದ್ದು, ಇನ್ನೆರಡು ವಾರಗಳಲ್ಲಿ ಜಾರಿಗೆ ಬರುವ ಸಂಭವವಿದೆ. ಈ ಆದೇಶಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರತಿರೋಧ ಕಂಡು ಬಂದಿಲ್ಲದ ಕಾರಣ ಶೀಘ್ರದಲ್ಲೇ ಆದೇಶ ಜಾರಿಗೊಳ್ಳಲಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಅವರು ತಿಳಿಸಿದ್ದಾರೆ.

ಹಿಂಬದಿ ಸವಾರರಿಗೂ ಹೆಲ್ಮೆಟ್ ಧರಿಸುವಿಕೆ ಕಡ್ಡಾಯಗೊಳಿಸುವ ಸಂಬಂಧದ ಕರಡು ನಿಯಮಕ್ಕೆ ಕೇವಲ 50 ಆಕ್ಷೇಪಣೆಗಳು ಬಂದಿದೆ, ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ ಉತ್ತರಿಸಲಾಗುತ್ತದೆ ಎಂದು ರಾಜ್ಯ ಸಾರಿಗೆ ಆಯುಕ್ತ ಡಾ.ರಾಮೇಗೌಡ ಹೇಳಿದರು.

Karnataka Government to make Helmet compulsory for the pillion rider also

ಹೆಲ್ಮೆಟ್ ಕಡ್ಡಾಯಗೊಳಿಸುವ ಕರಡು ನಿಯಮಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 18ರವರೆಗೆ ಕಾಲಾವಕಾಶ ನೀಡಲಾಗಿತ್ತು. ಹೆಲ್ಮೆಟ್ ಕಡ್ಡಾಯಗೊಳಿಸುವ ನಿಯಮಗಳಿಗೆ ಅಂತಿಮ ರೂಪ ನೀಡಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ರಾಜ್ಯಾದ್ಯಂತ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.[ತುಮಕೂರು ತಲೆಗಳಿಗೆ ಇವತ್ತಿನಿಂದ ಶಿರಸ್ತ್ರಾಣ ಕಡ್ಡಾಯ]

ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ಹಿಂಬದಿ ಸವಾರರಿಗೂ ತೀವ್ರ ಸ್ವರೂಪದ ಪೆಟ್ಟು ಹಾಗೂ ಸಾವು-ನೋವು ಉಂಟಾಗಿರುವ ಹಿನ್ನೆಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ನೀತಿ ಅನ್ವಯ ಈ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ. [ಬೈಕ್ ಸವಾರರ ತಲೆಗೆ ಹೆಲ್ಮೆಟ್ ಹಾಕಿದ ಸರ್ಕಾರ!]

ಕೇಂದ್ರ ಸಾರಿಗೆ ಇಲಾಖೆಯು ಹೆಲ್ಮೆಟ್‌ ಕಡ್ಡಾಯಗೊಳಿಸುವಂತೆ ಎಲ್ಲಾ ರಾಜ್ಯಗಳಿಗೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ದೆಹಲಿ, ಚಂಡೀಗಢ, ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಈ ನಿಯಮ ಜಾರಿಯಲ್ಲಿದೆ.

ಕರ್ನಾಟಕ ಸರ್ಕಾರ 2005 ರಿಂದಲೇ ತುಮಕೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಮಂಗಳೂರು, ಬೆಳಗಾವಿ, ಶಿವಮೊಗ್ಗ ಇನ್ನಿತರ ಜಿಲ್ಲೆಗಳಲ್ಲಿ ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿತ್ತು. ಇದೀಗ ಸರ್ಕಾರ ಈ ನಿಯಮವನ್ನು ರಾಜ್ಯಾದ್ಯಾಂತ ವಿಸ್ತರಿಸುವ ನಿರ್ಣಯಕ್ಕೆ ಬಂದಿದ್ದು, ಹಿಂಬದಿ ಸವಾರರಿಗೂ ಹೆಲ್ಮೆಟ್ ಬಳಕೆ ಕಡ್ಡಾಯವಾಗಲಿದೆ.

English summary
Karnataka government has decided to make wearing of helmet compulsory for the pillion rider also, it is revealed.The government has the intention of extending the rule to the entire state and no opposition found from public said Transport commissioner Rame Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X