ಚಿತ್ರಮಂದಿರಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಗೈಡ್‌ಲೈನ್ಸ್
ಬೆಂಗಳೂರು,ಫೆಬ್ರವರಿ 04: ಚಿತ್ರಮಂದಿರಗಳಿಗೆ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಕೊನೆಗೂ ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಿದ್ದು, ಹೌಸ್ಫುಲ್ ಪ್ರದರ್ಶನಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಗೂ ಅನ್ವಯವಾಗುತ್ತದೆ.
ಗ್ರಾಹಕರು ಟಿಕೆಟ್ ಪಡೆಯುವಾಗ ಹಾಗೂ ಸಿನಿಮಾ ನೋಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಟಿಕೆಟ್ ಬುಕಿಂಗ್ ಸಮಯದಲ್ಲಿ ಹೆಸರು ಮತ್ತು ಮೊಬೈಲ್ ನಂಬರ್ ನೀಡುವುದು ಕಡ್ಡಾಯ. ಏರ್ ಕೂಲರ್ ವ್ಯವಸ್ಥೆಯಲ್ಲಿ ಸಿನಿಮಾ ಪ್ರದರ್ಶನ ಮಾಡುವಾಗ CPWD ಮಾರ್ಗಸೂಚಿ ಪಾಲಿಸಬೇಕು. ವೆಂಟಿಲೇಷನ್ ವ್ಯವಸ್ಥೆ ಉತ್ತಮಗೊಳಿಸಲು ಪ್ರತಿ ಶೋನಲ್ಲೂ ಎರಡು ಇಂಟರ್ವಲ್ ಕಡ್ಡಾಯ.

ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರಮಾತ್ರ ಇದಕ್ಕೆ ನಿರ್ಬಂಧ ವಿಧಿಸಿತ್ತು. ಕೊರೊನಾ 2ನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಚಿತ್ರ ಮಂದಿರಗಳಲ್ಲಿ ಶೇ.50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಬೇಕು ಎಂದು ಆದೇಶಿಸಿತ್ತು.
ಸರ್ಕಾರದ ಈ ನಡೆಗೆ ಆಕ್ರೋಶಗೊಂಡ ಸ್ಯಾಂಡಲ್ವುಡ್ನ ದಿಗ್ಗಜ್ಜರು, ಎಲ್ಲರಿಗೂ ಶೇ.100 ಅಕ್ಯುಪೆನ್ಸಿ ಕೊಟ್ಟಿರುವಾಗ, ನಮಗೆ ಮಾತ್ರ ಶೇ.50 ಏಕೆ? ಎಲ್ಲರಿಗೂ ನಾರ್ಮಲ್, ನಮಗ್ಯಾಕೆ ಅಬ್ ನಾರ್ಮಲ್? 'ಬಸ್ನಲ್ಲಿ ಫುಲ್ ರಶ್, ಮಾರ್ಕೆಟ್ನಲ್ಲಿ ಗಿಜಿ ಗಿಜಿ, ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ?' ಎಂದು ಕಟುವಾಗಿಯೇ ಪ್ರಶ್ನಿಸಿದ್ದರು.
ಪ್ರಮುಖ ಸ್ಥಳದಲ್ಲಿ ಕೋವಿಡ್ ನಿಯಂತ್ರಣ ಕುರಿತ ಜಾಗೃತಿ ಪ್ರದರ್ಶನ ಕಡ್ಡಾಯ. ಪ್ರೇಕ್ಷಕರು ಕೋವಿಡ್ ನಿಯಮ ಪಾಲಿಸಿಯೇ ಸಿನಿಮಾ ನೋಡಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಸ್ಯಾಂಡಲ್ವುಡ್ ಸಿಡಿದೇಳುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಿನ್ನೆ(ಬುಧವಾರ) ಸಂಜೆ ಚಿತ್ರೋದ್ಯಮದ ಎಲ್ಲ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು. ಇದೀಗ ಚಿತ್ರಮಂದಿರ ಹೌಸ್ಫುಲ್ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.












Click it and Unblock the Notifications