ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

19 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಯಾರು ಎಲ್ಲಿ ಕಾರ್ಯ ನಿರ್ವಹಣೆ?

|
Google Oneindia Kannada News

ಬೆಂಗಳೂರು, ಜೂನ್ 17: ಬೆಂಗಳೂರು ನಗರಕ್ಕೆ ನೂತನ ಪೊಲೀಸ್ ಕಮಿಷನರ್, ಸಿಸಿಬಿ ಕ್ರೈಂ ಬ್ರ್ಯಾಂಚ್ ಗೆ ಹೊಸ ಅಧಿಕಾರಿ ಸೇರಿದಂತೆ ಸೋಮವಾರ(ಜೂನ್ 17) ದಿಂದ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಬದಲಾವಣೆಗಳು ಜಾರಿಯಾಗಲಿವೆ.

ರೌಡಿಗಳಿಗೆ ಸಿಂಹಸ್ವಪ್ನ ಎನಿಸಿಕೊಂಡವರು, ಸಿಂಗಂ ಎಂದು ಹೊಗಳಿಸಿಕೊಂಡವರು, ಆಯುಕ್ತರಾದವರು ಎಲ್ಲರೂ ವರ್ಗಾವಣೆಗೊಂಡಿದ್ದಾರೆ.

ಬೆಂಗಳೂರಿನ ಹೊಸ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ಬೆಂಗಳೂರಿನ ಹೊಸ ಪೊಲೀಸ್ ಆಯುಕ್ತ ಅಲೋಕ್ ಕುಮಾರ್

ಅಲೋಕ್ ಕುಮಾರ್ ಅವರಿಗೆ ಡಿಜಿಪಿಯಾಗಿ ಬಡ್ತಿ ಸಿಕ್ಕಿದ್ದು, ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಆಯುಕ್ತರಾಗಿದ್ದ ಟಿ ಸುನೀಲ್ ಕುಮಾರ್ ಅವರು ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ನಿರ್ದೇಶಕ(ಎಡಿಜಿಪಿ)ರಾಗಿ ನೇಮಕವಾಗಿದ್ದಾರೆ. ರವಿಕಾಂತೇಗೌಡ ಅವರು ಸಿಸಿಬಿ(ಕ್ರೈಂಬ್ರ್ಯಾಂಚ್) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಗೃಹ ಇಲಾಖೆ ಕಾರ್ಯದರ್ಶಿಯಾಗಿ ಬಿ.ಕೆ ಸಿಂಗ್ ನೇಮಕವಾಗಿದ್ದಾರೆ. ಸಿಐಡಿ ಎಸ್ಪಿಯಾಗಿ ರವಿ ಡಿ ಚನ್ನಣ್ಣನವರ್ ನೇಮಕವಾಗಿದ್ದಾರೆ.

Karnataka government makes 19 IPS transfers including Alok Kumar

ಮಿಕ್ಕಂತೆ 19 ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿವರ ಇಲ್ಲಿದೆ:

ಐಪಿಎಸ್ ಅಧಿಕಾರಿ-ಬ್ಯಾಚ್- ಯಾವ ಇಲಾಖೆಯಿಂದ -ಯಾವ ಇಲಾಖೆಗೆ

* ಟಿ ಸುನೀಲ್ ಉಮಾರ್ (KN-1989 ಬ್ಯಾಚ್) : ಎಡಿಜಿಪಿ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಸ್ಥಾನದಿಂದ ಎಡಿಜಿಪಿ(ನೇಮಕಾತಿ), ಬೆಂಗಳೂರು

* ಅಲೋಕ್ ಕುಮಾರ್ (KN-1994) : ಐಜಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ(ಕ್ರೈಂ), ಬೆಂಗಳೂರು ಹುದ್ದೆಯಿಂದ ಎಡಿಜಿಪಿ ಹುದ್ದೆಗೆ ಬಡ್ತಿ, ಬೆಂಗಳೂರು ನಗರ ಪೊಲೀಸ್ ಅಯುಕ್ತರಾಗಿ ನೇಮಕ.

* ಅಮೃತ್ ಪಾಲ್ (KN 1995), ಐಜಿಪಿ, ಆಡಳಿತ ಬೆಂಗಳೂರು ಹುದ್ದೆಯಿಂದ ಐಜಿಪಿ ಪೂರ್ವ ವಲಯ, ದಾವಣಗೆರೆ.

ಕರ್ನಾಟಕ : 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕರ್ನಾಟಕ : 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ

* ಉಮೇಶ್ ಕುಮಾರ್ (ಕೆಎನ್ 1995) ಐಜಿಪಿ ದಕ್ಷಿಣ ವಲಯ, ಮೈಸೂರು ಹುದ್ದೆಯಿಂದ ಐಜಿಪಿ, ಹೆಚ್ಚುವರಿ ಆಯುಕ್ತ(ಪಶ್ಚಿಮ), ಬೆಂಗಳೂರು

* ಬಿಜಯ್ ಕುಮಾರ್ ಸಿಂಗ್ (ಕೆಎನ್ 1996) ಐಜಿಪಿ ಹಾಗೂ ಹೆಚ್ಚುವರಿ ರ್ಪೊಲೀಸ್ (ಪಶ್ಚಿಮ), ಬೆಂಗಳೂರು ಹುದ್ದೆಯಿಂದ ಐಜಿಪಿ ಗೃಹ ಕಾರ್ಯದರ್ಶಿ (ಪಿಸಿಎಸ್ಎಸ್) ಬೆಂಗಳೂರು.

* ಸೌಮೆಂದು ಮುಖರ್ಜಿ (ಕೆಎನ್ 1998) ಐಜಿಪಿ ಪೂರ್ವ ವಲಯ ದಾವಣಗೆರೆ ಹುದ್ದೆಯಿಂದ ಐಜಿಪಿ ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.

* ರಾಘವೇಂದ್ರ ಸುಹಾಸ (ಕೆ ಎನ್ 2000), ಐಜಿಪಿ ಉತ್ತರ ವಲಯ, ಬೆಳಗಾವಿ ಹುದ್ದೆಯಿಂದ ಐಜಿಪಿ ದಕ್ಷಿಣ ವಲಯ ಮೈಸೂರು.

* ಡಾ. ಬಿ. ಆರ್ ರವಿಕಾಂತೇಗೌಡ(ಕೆಎನ್ 2005) ಡಿಐಜಿ, ಅಗ್ನಿಶಾಮಕ ದಳ ಬೆಂಗಳೂರು ಹುದ್ದೆಯಿಂದ ಡಿಐಜಿಪಿ ಕ್ರೈಂ, ಬೆಂಗಳೂರು ನಗರ.

* ಅಮಿತ್ ಸಿಂಗ್ (ಕೆಎನ್ 2007) ಸೂಪರ್ ರಿಂಟೆಂಡ್ ಆಫ್ ಪೊಲೀಸ್ ಮೈಸೂರು ಜಿಲ್ಲೆ ಹುದ್ದೆಯಿಂದ ಕಮ್ಯಾಡಂಟ್, ಗೃಹ ರಕ್ಷಣಾ ದಳ ಹಾಗೂ ನಾಗರಿಕ ಭದ್ರತಾ ಅಕಾಡೆಮಿ, ಬೆಂಗಳೂರು.

* ರಾಮ್ ನಿವಾಸ್ ಸೆಪಾಟ್ (ಕೆಎನ್ 2008) ಬೆಂಗಳೂರು ಗ್ರಾಮಾಂತರ ಎಸ್ಪಿ ಹುದ್ದೆಯಿಂದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬೆಂಗಳೂರು ಎಸ್ಪಿ.

* ಎಂಎನ್ ಅನುಚೇತ್ (ಕೆಎನ್ 2009) ಡಿಸಿಪಿ ಆಡಳಿತ, ಬೆಂಗಳೂರು ನಗರ ಹುದ್ದೆಯಿಂದ ರೈಲ್ವೆ ವಿಭಾಗ ಎಸ್ಪಿ, ಬೆಂಗಳೂರು.

* ಬಿ ರಮೇಶ್ (ಕೆಎನ್ 2009) ಎಸ್ಪಿ ಎಸ್ ಟಿ ಎಫ್ ಹಾಗೂ ಗುಪ್ತಚರ, ಬಿಡಿಎ ಹುದ್ದೆಯಿಂದ ಡಿಸಿಪಿ ಪಶ್ಚಿಮ ವಲಯ,ಬೆಂಗಳೂರು.

* ರವಿ ಡಿ ಚನ್ನಣ್ಣವರ್ (ಕೆಎನ್ 2009), ಡಿಸಿಪಿ ಬೆಂಗಳೂರು ಪಶ್ಚಿಮ ಹುದ್ದೆಯಿಂದ ಸಿಐಡಿ ಎಸ್ಪಿ ಬೆಂಗಳೂರು.

* ಡಾ. ಭೀಮಾಶಂಕರ್ ಎಸ್ ಗುಳೇದ್ (ಕೆಎನ್ 2012) ಎಸ್ಪಿ ರೈಲ್ವೇಸ್ ಬೆಂಗಳೂರು ಹುದ್ದೆಯಿಂದ ಡಿಸಿಪಿ ಈಶಾನ್ಯ ವಿಭಾಗ, ಬೆಂಗಳೂರು.

* ಸಿ.ಬಿ ರೈಶ್ಯಾಂತ್ (ಕೆಎನ್ 2013) ಎಸ್ಪಿ ಎಸಿಬಿ, ಬೆಂಗಳೂರು ಹುದ್ದೆಯಿಂದ ಮೈಸೂರು ಜಿಲ್ಲಾ ಎಸ್ಪಿ.

* ಮೊಹಮ್ಮದ್ ಸುಜೀತಾ ಎಂಎಸ್ (ಕೆಎನ್ 2014), ಕಮ್ಯಾಂಡರ್ 4ನೇ ಬೆಟಾಲಿಯನ್, ಕೆಎಸ್ ಆರ್ ಪಿ ಬೆಂಗಳೂರು ಹುದ್ದೆಯಿಂದ ಕೆಜಿಎಫ್ ಎಸ್ಪಿ.

* ಟಿಪಿ ಶಿವಕುಮಾರ್ (ಆಯ್ಕೆ ಪಟ್ಟಿ 2015) ಕಮ್ಯಾಡಂಟ್, ಗೃಹ ರಕ್ಷಣಾ ದಳ, ನಾಗರಿಕ ಭದ್ರತಾ ಅಕಾಡೆಮಿ, ಬೆಂಗಳೂರು ಹುದ್ದೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ.

* ಎನ್ ವಿಷ್ಣುವರ್ಧನ (ಆಯ್ಕೆ ಪಟ್ಟಿ 2015) ಡಿಸಿಪಿ ಆಡಳಿತ ಬೆಂಗಳೂರು ನಗರಕ್ಕೆ ವರ್ಗ
*ಕಾಲಾ ಕೃಷ್ಣಸ್ವಾಮಿ (ಆಯ್ಕೆ ಪಟ್ಟಿ 2015) ಡಿಸಿಪಿ ಈಶಾನ್ಯ ವಿಭಾಗ ಬೆಂಗಳೂರು ನಗರಕ್ಕೆ ವರ್ಗಾವಣೆ.

English summary
In a major surgery 19 IPS officers transferred by Karnataka Government. Alok Kumar has been appointed as new Bengaluru City Police Commissioner. T Suneel Kumar as new Additional director general of police(recruitment). Here is the list of all 19 transfers in Police department
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X