Government Employee: 2025ಕ್ಕೆ ರಾಜ್ಯ ಸರ್ಕಾರಿ ನೌಕರರ ನಿರೀಕ್ಷೆಗಳು
ಬೆಂಗಳೂರು, ಡಿಸೆಂಬರ್ 26: 2024ನೇ ವರ್ಷ ಮುಗಿಯುತ್ತಾ ಬಂದಿದೆ. ವರ್ಷಾಂತ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಖಜಾಂಚಿ ಆಯ್ಕೆಗೆ ಚುನಾವಣೆ ಸಹ ನಡೆಯುತ್ತಿದೆ. ಡಿಸೆಂಬರ್ 27ರಂದು ನಡೆಯುವ ಚುನಾವಣೆಗೆ ಸರ್ಕಾರಿ ನೌಕರರಿಗೆ ಹಲವು ಭರವಸೆಗಳನ್ನು ನೀಡಲಾಗಿದೆ. ಈ ವರ್ಷ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಸರ್ಕಾರ ಜಾರಿಗೊಳಿಸಿದೆ. 2025ರಲ್ಲಿ ಸರ್ಕಾರಿ ನೌಕರರ ನಿರೀಕ್ಷೆಗಳೇನು?
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ಅವಧಿಯ ಚುನಾವಣೆಗೆ ಅಧ್ಯಕ್ಷ ಹುದ್ದೆಗೆ ಸಿ. ಎಸ್. ಷಡಾಕ್ಷರಿ ಮತ್ತು ರಾಜ್ಯ ಖಜಾಂಚಿ ಸ್ಥಾನಕ್ಕೆ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ್ ಜುಮ್ಮಣ್ಣನವರ ಅಭ್ಯರ್ಥಿಯಾಗಿದ್ದಾರೆ. ಸಿ. ಎಸ್. ಷಡಾಕ್ಷರಿ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ 2025ರಲ್ಲಿ ಸರ್ಕಾರಿ ನೌಕರರು ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು? ಎಂದು ಮಾಹಿತಿ ನೀಡಿದ್ದಾರೆ.

ಸಿ. ಎಸ್. ಷಡಾಕ್ಷರಿ ಮತ್ತು ನಾಗರಾಜ್ ಜುಮ್ಮಣ್ಣನವರ ಸರ್ಕಾರಿ ನೌಕರರಿಗೆ ಭರವಸೆಗಳನ್ನು ನೀಡಿದ್ದಾರೆ. 'ಇದು ಭರವಸೆಯಲ್ಲ ಸಂಕಲ್ಪ' ಎಂದು ಹೇಳಿದ್ದಾರೆ. ವಿವರಗಳು ಇಲ್ಲಿವೆ....
* NPS ರದ್ಧತಿ. ಸಂಘದ ಹೋರಾಟದ ಮೇರೆಗೆ ಈಗಾಗಲೇ ಒಪಿಎಸ್ ಅನುಷ್ಠಾನಗೊಂಡಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಡಿಸೆಂಬರ್ 2024ರ ಅಂತ್ಯದಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದ್ದು, ಸರ್ಕಾರದ ಮೇಲೆ ಒತ್ತಡವನ್ನು ತಂದು ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಿ ಗುರಿ ತಲುಪುವವರೆಗೆ ನಿರ್ಣಾಯಕ ಹೋರಾಟ.
* ಆರೋಗ್ಯ ಯೋಜನೆ. ಸಂಘದ ನಿರಂತರ ಪ್ರಯತ್ನದಿಂದ ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯ ಮೂಲಕ ಕುಟುಂಬದ ಎಲ್ಲಾ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ ಯೋಜನೆಯ ಸರ್ಕಾರಿ ಆದೇಶ ಹೊರಡಿಸಿದ್ದು, ಶೀಘ್ರದಲ್ಲಿ ಈ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರು ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರ ಲೋಕಾರ್ಪಣೆ ಮಾಡಲಿದೆ.
* 371ಜೆ ವಿಶೇಷ ಸ್ಥಾನಮಾನ. ಭಾರತದ ಸಂವಿಧಾನ ಅನುಚ್ಛೇದ 371ಜೆ ರಂತೆ ಹೈದರಾಬಾದ್-ಕರ್ನಾಟಕದ ಭಾಗದವರಿಗೆ ಮುಂಬಡ್ತಿಯ ಅವಕಾಶವನ್ನು ಕಲ್ಪಿಸುವುದು.
* ವರ್ಗಾವಣೆ ಕಾಯ್ದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಎ, ಬಿ, ಸಿ, ಡಿ ವೃಂದಗಳ ಸರ್ಕಾರಿ ಅಧಿಕಾರಿ-ನೌಕರರಿಗೆ ಕೌನ್ಸೆಲಿಂಗ್ ವರ್ಗಾವಣೆ ಕಾಯ್ದೆಯನ್ನು ಜಾರಿಗೆ ತರುವುದು
* ಶೀಘ್ರ ಅನುಷ್ಠಾನ. 7ನೇ ವೇತನ ಆಯೋಗದ ಒಂದನೇ ವರದಿಯ ಶಿಫಾರಸ್ಸಿನಂತೆ ಅನುಷ್ಠಾನಗೊಳ್ಳದೇ ಬಾಕಿ ಇರುವ ಎಲ್ಲಾ ಇತರೆ ಭತ್ಯೆ ಮತ್ತು ಸೌಲಭ್ಯಗಳನ್ನು ಜಾರಿಗೊಳಿಸಲು ಕ್ರಮ. 7ನೇ ವೇತನ ಆಯೋಗದ 2ನೇ ವರದಿಯನ್ನು ಶಿಫಾರಸ್ಸುಗಳನ್ನು ಶೀಘ್ರ ಜಾರಿಗೊಳಿಸಲು ಕ್ರಮ.
* ಕೌಶಲ್ಯ ತರಬೇತಿ. ರಾಜ್ಯದ ಸಮಸ್ತ ನೌಕರರಿಗೆ ಗುಣಮಟ್ಟದ ವೃತ್ತಿ ಕೌಶಲ್ಯ-ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು












Click it and Unblock the Notifications