ಕೇರಳ ಪರವಾಗಿ ಕರ್ನಾಟಕ ಸರ್ಕಾರದಿಂದ ಬ್ಯಾಟಿಂಗ್! ಬಿಜೆಪಿಯಿಂದ 6 ಪ್ರಶ್ನೆ

ಕೇರಳದ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಮೃದು ಧೋರಣೆ ಹೊಂದಿದೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ. ಮುಖ್ಯವಾಗಿ ಕೇರಳದ ವಯನಾಡಿನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಂಸದೆಯಾಗಿ ಪ್ರಿಯಾಂಕ್ ಗಾಂಧಿ ಅವರು ಇರುವುದರಿಂದ ಆ ಕ್ಷೇತ್ರಕ್ಕೆ ಪೂರಕವಾದ ನಿರ್ಧಾರಗಳನ್ನು ಕರ್ನಾಟಕ ಸರ್ಕಾರ ತೆಗೆದುಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೇರಳದ ಶಾಸಕನಂತೆ, ವಯನಾಡಿನ ಚಂದಾ ವಸೂಲಿಗಾರನಂತೆ ವರ್ತಿಸುವ ಮುಖ್ಯಮಂತ್ರಿಯನ್ನು ಕರ್ನಾಟಕದ ಜನತೆ ಇನ್ನೆಷ್ಟು ದಿನ ಸಹಿಸಬೇಕು ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಎರಡು ತಿಂಗಳ ಹಿಂದಷ್ಟೇ ಕನ್ನಡಿಗರ ತೆರಿಗೆ ಹಣದಿಂದ ₹10 ಕೋಟಿ ರೂಪಾಯಿಯನ್ನ ವಯನಾಡಿಗೆ ಬಿಡುಗಡೆ ಮಾಡಿದಿರಿ. ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹15 ಲಕ್ಷ ಪರಿಹಾರ ಕೊಟ್ಟಿರಿ. ಭೂಕುಸಿತದ ನಂತರ ವಯನಾಡಿನಲ್ಲಿ 100 ಮನೆಗಳನ್ನು ನಿರ್ಮಿಸುವ ಘೋಷಣೆ ಮಾಡಿದಿರಿ. ಈಗ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ (KSTDC) ವಯನಾಡಿನ ಪ್ರವಾಸೋದ್ಯಮಕ್ಕೆ ಜಾಹೀರಾತು ಕೊಟ್ಟಿದ್ದೀರಿ ಎಂದು ಹೇಳಿದೆ.

Karnataka government batting in favour of Kerala 6 questions from BJP

ಅಸಲಿಗೆ ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕೇರಳದ ಶಾಸಕರೋ? ಅಥವಾ ವಯನಾಡಿನ ಚಂದಾ ವಸೂಲಿಗಾರರೋ?

1. ನೆರೆಯಿಂದ ಉತ್ತರ ಕರ್ನಾಟಕ ಮುಳುಗಿದೆ

2. ರೈತರು ಕಂಗಾಲಾಗಿದ್ದಾರೆ

3. ಮನೆಗಳು ಕೊಚ್ಚಿ ಹೋಗಿವೆ

4. 12.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಆದರೆ ಪರಿಹಾರ ಮಾತ್ರ ವೈಮಾನಿಕ ಸಮೀಕ್ಷೆಗಳಿಗೆ, ಸುಳ್ಳು ಭರವಸೆಗಳಿಗೆ, ಜಾಹೀರಾತುಗಳಿಗೆ, ಫೋಟೋಶೂಟ್‌ ಗಳಿಗೆ ಸೀಮಿತವಾಗಿದೆ. ವಯನಾಡಿನ ಸಂಕಷ್ಟಕ್ಕೆ ಮಿಡಿಯುವ ನಿಮ್ಮ ಹೃದಯ ನೆರೆಭಾದಿತ ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೀದರ್, ಬೆಳಗಾವಿಗಾಗಿ ಯಾಕೆ ಮಿಡಿಯುತ್ತಿಲ್ಲ. ಯಾಕೆ ಸ್ವಾಮಿ ಕನ್ನಡಿಗರ ಮೇಲೆ ಈ ಮಲತಾಯಿ ಧೋರಣೆ ಎಂದು ಪ್ರಶ್ನೆ ಮಾಡಿದೆ.

ನಮ್ಮ ರೈತರಿಗೆ ನೀಡಬೇಕಾದ ಪರಿಹಾರಕ್ಕಿಂತ, ವಯನಾಡಿಗೆ ನೀಡುವ ಪರಿಹಾರವೇ ನಿಮಗೆ ಮುಖ್ಯ. ಇದು ಉಪಕಾರವೂ ಅಲ್ಲ, ಮಾನವೀಯತೆಯೂ ಅಲ್ಲ. ಇದು ಹೈಕಮಾಂಡ್ ನಾಯಕರನ್ನು ತೃಪ್ತಿಪಡಿಸಿ ಅಲುಗಾಡುತ್ತಿರುವ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ. ಕರ್ನಾಟಕದ ತೆರಿಗೆ ಹಣವನ್ನು ಹೈಕಮಾಂಡ್ ಎಟಿಎಂ ಹಾಗೆ ಬಳಸುವ, ನಕಲಿ ಗಾಂಧಿಗಳ ಗುಲಾಮರಂತೆ ವರ್ತಿಸುವ, ಮತ ಹಾಕಿ ಅಧಿಕಾರ ಕೊಟ್ಟ ತಾಯ್ನಾಡಿನ ರೈತರನ್ನೇ ಮರೆತುಬಿಡುವ ನಾಡದ್ರೋಹಿ ಮುಖ್ಯಮಂತ್ರಿಯನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದೆ.

ಕರ್ನಾಟಕಕ್ಕೆ ಬೇಕಿರುವುದು ಕನ್ನಡಿಗರ ಹಿತಾಸಕ್ತಿ ಕಾಪಾಡುವ ಬದ್ಧತೆ ಇರುವ ಮುಖ್ಯಮಂತ್ರಿಯೇ ಹೊರತು ಕೇರಳದ ವಯನಾಡಿನ ಬ್ರ್ಯಾಂಡ್ ಅಂಬಾಸಡರ್ ಅಲ್ಲ, ಡೆಲ್ಲಿ ದೊರೆಗಳ ಗುಲಾಮರಲ್ಲ. ನೆರೆಬಾಧಿತ ರೈತರಿಗೆ ಈ ಕೂಡಲೇ ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡಿ. ಕರ್ನಾಟಕ ಹಣವನ್ನು ನಿಮ್ಮ ಸ್ವಾರ್ಥಕ್ಕಾಗಿ ವಯನಾಡಿಗೆ ಸಾಗಿಸುವುದನ್ನ ನಿಲ್ಲಿಸಿ ಎಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+