ಆಗಸ್ಟ್ 2025 ಫುಲ್ ಸಿಕ್ಕಾಪಟ್ಟೆ ರಜೆ, ಶಾಲಾ & ಕಾಲೇಜುಗಳಿಗೂ ಬಂಪರ್ ರಜೆ! Holiday List
ರಜೆ.. ರಜೆ.. ರಜೆ.. ಹೀಗೆ ಜುಲೈ ತಿಂಗಳು ಮುಗಿದು ಆಗಸ್ಟ್ ಶುರು ಆಯ್ತು ಅಂದ್ರೆ ರಜೆಗಳ ಸುರಿಮಳೆ ಶುರುವಾಗುತ್ತೆ. ಯಾಕಂದ್ರೆ ಸಾಮಾನ್ಯವಾಗಿ ಇದೇ ಸಮಯದಲ್ಲಿ ಆಷಾಢ ಮಾಸ ಮುಗಿದು, ಶ್ರಾವಣ ಶುರು ಆಗುತ್ತದೆ. ಶ್ರಾವಣದಲ್ಲಿ ಹಿಂದೂಗಳಿಗೆ ಸಾಲು ಸಾಲು ಹಬ್ಬಗಳು & ಪೂಜೆ ಇರುವ ಕಾರಣಕ್ಕೆ ರಜೆ ಪಕ್ಕಾ ಸಿಗುತ್ತದೆ. ಆದರೆ ಸಾಲು ಸಾಲು ರಜೆ ಕಾರಣಕ್ಕೆ ಬ್ಯಾಂಕ್‌ಗಳು ಕೂಡ ಬಂದ್ ಆಗಿ ಗ್ರಾಹಕರಿಗೆ ಒಂದಷ್ಟು ಕಿರಿಕಿರಿ ಆಗುತ್ತದೆ. ಮತ್ತೊಂದು ಕಡೆ ಶಾಲಾ & ಕಾಲೇಜುಗಳಿಗೆ ಕೂಡ ಭರ್ಜರಿ ರಜೆ ಸಿಗಲಿದೆ. ಹಾಗಾದ್ರೆ 2025 ಆಗಸ್ಟ್ ತಿಂಗಳಲ್ಲಿ ಎಷ್ಟು ದಿನ ರಜೆ ಸಿಗಲಿದೆ? ಬನ್ನಿ ತಿಳಿಯೋಣ...
ಜುಲೈ ತಿಂಗಳಲ್ಲಿ ಮಳೆ ಕಾರಣಕ್ಕೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶಾಲಾ & ಕಾಲೇಜುಗಳಿಗೆ ಭರ್ಜರಿ ರಜೆ ಸಿಕ್ಕಿವೆ. ಬೇಸಿಗೆ ರಜೆ 60 ದಿನ ಮುಗಿಸಿ ಎಂಜಾಯ್ ಮಾಡಿದ್ದ ವಿದ್ಯಾರ್ಥಿಗಳಿಗೆ ಮತ್ತೆ ರಜೆ ಸಿಕ್ಕು ಸಿಕ್ಕಾಪಟ್ಟೆ ಖುಷಿ ಆಗಿತ್ತು. ಇದೀಗ ಮತ್ತೊಂದು ಭರ್ಜರಿ ಸುದ್ದಿ ಸಿಕ್ಕಿದ್ದು, ಆಗಸ್ಟ್ ತಿಂಗಳಲ್ಲಿ ಕೂಡ ವಿದ್ಯಾರ್ಥಿಗಳಿಗೆ ಭರ್ಜರಿ ರಜೆ ಸಿಗೋದು ಗ್ಯಾರಂಟಿ ಆಗಿದೆ. ಇದರ ಜೊತೆಗೆ ಬ್ಯಾಂಕ್ & ಸರ್ಕಾರಿ ಕಚೇರಿಗಳಿಗೆ ಕೂಡ ಸಾಲು ಸಾಲು ರಜೆಗಳು ಸಿಗಲಿವೆ. ಹಾಗಾದ್ರೆ, 2025 ಆಗಸ್ಟ್ ತಿಂಗಳಲ್ಲಿ ಯಾವ ಯಾವ ದಿನ ರಜೆ ಸಿಗಲಿದೆ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.

ಆಗಸ್ಟ್ ತಿಂಗಳಲ್ಲಿ ಭರ್ಜರಿ ರಜೆ
ಮುಂದಿನ 3-4 ತಿಂಗಳು ಸಾಲು ಸಾಲು ಹಬ್ಬಗಳ ಜೊತೆಗೆ ರಜೆ ಮಜೆ ಕೂಡ ಸಿಗಲಿದ್ದು, ಅದರಲ್ಲೂ ಈ ರಜೆ ಸೀಸನ್ ಆರಂಭ ಆಗುವುದೇ ಆಗಸ್ಟ್ ತಿಂಗಳ ಮೂಲಕ. ಈ ಬಾರಿ ಸ್ವಾತಂತ್ರ್ಯ ದಿನದಿಂದ ಹಿಡಿದು, ಹಲವು ಹಬ್ಬಗಳಿಗೆ ರಜೆ ಸಿಗಲಿದೆ. ಹಾಗೇ ವರಮಹಾಲಕ್ಷ್ಮಿ ಹಬ್ಬದ ಜೊತೆಗೆ ಗಣೇಶ ಚತುರ್ಥಿ ಕೂಡ ಈ ತಿಂಗಲ್ಲೇ ಬರುವ ಕಾರಣಕ್ಕೆ ಆಗಸ್ಟ್ ತಿಂಗಳಲ್ಲಿ ಭರ್ಜರಿ ರಜೆಗಳು ಗ್ಯಾರಂಟಿ ಆಗುತ್ತಿದೆ. ಅದರಲ್ಲೂ ಅತ್ತ ವರಮಹಾಲಕ್ಷ್ಮಿ ಹಬ್ಬ ಕೂಡ ಶುಕ್ರವಾರ ಬರಲಿದ್ದು, ಇನ್ನೊಂದು ಕಡೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಕೂಡ ಶುಕ್ರವಾರದ ದಿನವೇ ಬರಲಿದೆ.
ರಜೆ ಸಿಗಲಿರುವ ದಿನಾಂಕ ಯಾವುವು?
ಆಗಸ್ಟ್ 8 ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಬಂದರೆ, ಆಗಸ್ಟ್ 9 ಶನಿವಾರ ರಕ್ಷಾ ಬಂಧನ ಬರಲಿದೆ. ಈ ಸಂಭ್ರಮದ ಜೊತೆಗೆ ಆಗಸ್ಟ್ 15 ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ ಕೂಡ ಬರಲಿದ್ದು, ಆಗಸ್ಟ್ 16 ಶನಿವಾರ ಈ ತಿಂಗಳ 2ನೇ ಶನಿವಾರ ಆಗಿರಲಿದೆ. ಹಾಗೇ ಆಗಸ್ಟ್ 16 ಶನಿವಾರ ಜನ್ಮಾಷ್ಟಮಿ ಕೂಡ ಇದ್ದು, ಆಗಸ್ಟ್ 26 ಗೌರಿ ಹಬ್ಬ ಹಾಗೂ ಆಗಸ್ಟ್ 27 ಗಣೇಶ ಚತುರ್ಥಿ ಸಂಭ್ರಮ ಜೋರಾಗಿ ಇರಲಿದೆ. ಈ ಮೂಲಕ ಇದೇ ಆಗಸ್ಟ್ ತಿಂಗಳಲ್ಲಿ ಶಾಲಾ & ಕಾಲೇಜುಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಬ್ಯಾಂಕ್‌ಗಳಿಗೆ ಕೂಡ ಸಾಲು ಸಾಲು ರಜೆಗಳು ಸಿಗಲಿವೆ.












Click it and Unblock the Notifications