ಕರ್ನಾಟಕ ಪೊಲೀಸ್ ಅಧಿಕಾರಿಯ ಭೀಕರ ಕೊ**... Karnataka Police
ಕರ್ನಾಟಕ ಜನತೆ ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ. ಸುರಕ್ಷತೆಗೆ ಹೆಸರಾಗಿರುವ ಕರ್ನಾಟಕ ರಾಜ್ಯ ಪದೇ ಪದೇ ಹಿಂಸೆಯ ವಿಚಾರಕ್ಕೆ ಇಡೀ ಇಂಡಿಯಾದಲ್ಲಿ ಸುದ್ದಿಯಾಗುತ್ತಿದೆ, ಎಂಬ ಆರೋಪದ ನಡುವೆ ದಿಢೀರ್ ಕರ್ನಾಟಕ ಪೊಲೀಸ್ ಉನ್ನತ ಅಧಿಕಾರಿಯನ್ನೇ ಭೀಕರವಾಗಿ ಕೊಲೆ ಮಾಡಿ ಹಾಕಲಾಗಿದೆ. ಭೀಕರವಾಗಿ ಕರ್ನಾಟಕ ಪೊಲೀಸ್ ಅಧಿಕಾರಿಯನ್ನೇ ಕೊಲೆ ಮಾಡಿರುವ ಸುದ್ದಿ ಇದೀಗ ಆಘಾತದ ಜೊತೆಗೆ ಸಂಚಲನ ಕೂಡ ಸೃಷ್ಟಿ ಮಾಡಿದ್ದು, ಹಾಗಾದ್ರೆ ಕೊಲೆಯಾಗಿರುವ ಅಧಿಕಾರಿ ಯಾರು?
ಕರ್ನಾಟಕ ಪೊಲೀಸ್... ಈ ಹೆಸರು ಕೇಳಿದರೆ ಸಾಕು ಕ್ರಿಮಿನಲ್‌ಗಳ ಎದೆಯೇ ನಡುಗುತ್ತದೆ. ಯಾಕಂದ್ರೆ, ಕರ್ನಾಟಕ ಪೊಲೀಸರು ಅಂದ್ರೆ ಇಡೀ ದೇಶದಲ್ಲೇ ಕಳ್ಳರಿಗೆ & ಕ್ರಿಮಿನಲ್‌ಗಳಿಗೆ ಸರಿಯಾಗಿ ಬುದ್ದಿ ಕಲಿಸಿದ ಉದಾಹರಣೆ ಇದೆ. ಕರ್ನಾಟಕದಲ್ಲಿ ಕೊಲೆ & ಸುಲಿಗೆ ಮಾಡ್ತಾ ಎಸ್ಕೇಪ್ ಆಗಿದ್ದ ಸಾವಿರಾರು ಕ್ರಿಮಿನಲ್ ಕುಳಗಳನ್ನ ಎಳೆದುಕೊಂಡು ಕರ್ನಾಟಕದ ನೆಲಕ್ಕೆ ಕರೆದುಕೊಂಡು ಬಂದು ಶಿಕ್ಷೆ ಕೊಡಿಸಿದ ಕೀರ್ತಿ ನಮ್ಮ ಕರ್ನಾಟಕ ಪೊಲೀಸ್ ಅಧಿಕಾರಿಗಳದ್ದು. ಈ ಕಾರಣಕ್ಕೆ ಕರ್ನಾಟಕ ಪೊಲೀಸ್ ಅಧಿಕಾರಿಗಳು ಅಂದ್ರೆ ಹೆದರಿ ಮೂಲೆ ಸೇರುತ್ತಾರೆ ಎಲ್ಲರೂ. ಹೀಗಿದ್ದಾಗಲೇ, ಭೀಕರ & ಆಘಾತಕಾರಿ ಘಟನೆ ಕರ್ನಾಟಕ ಪೊಲೀಸ್ ಉನ್ನತ ಅಧಿಕಾರಿಯ ವಿಚಾರದಲ್ಲಿ ನಡೆದು ಹೋಗಿದೆ...

ಪೊಲೀಸ್ ಅಧಿಕಾರಿಯನ್ನೇ ಕೊಲೆ ಮಾಡಿದರಾ?
ಹೌದು, ಇಡೀ ಕರ್ನಾಟಕದ ಜನತೆ ಇಂದು ಬೆಚ್ಚಿ ಬಿದ್ದಿದ್ದಾರೆ. ಇದಕ್ಕೆ ಕಾರಣ ಆಗಿರುವುದು ಕರ್ನಾಟಕ ಪೊಲೀಸ್ ಉನ್ನತ ಅಧಿಕಾರಿ ಕೊಲೆ ವಿಚಾರ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಂದ್ರೆ ಡಿಜಿ ಮತ್ತು ಐಜಿಪಿ ಕೊಲೆ ವಿಚಾರ ಇದೀಗ ತಲ್ಲಣ ಎಬ್ಬಿಸಿದೆ. ತನ್ನ ಹೆಂಡತಿ ಮತ್ತು ಕುಟುಂಬದ ಸದಸ್ಯರೇ ಸೇರಿ ಕರ್ನಾಟಕದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರನ್ನ ಭೀಕರ ರೀತಿಯಲ್ಲಿ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಂದ್ರೆ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನೇ ಇದೀಗ ಭೀಕರವಾಗಿ ಕೊಲೆ ಮಾಡಲಾಗಿದೆ. 68 ವರ್ಷ ವಯಸ್ಸಿನ ಓಂ ಪ್ರಕಾಶ್ ಅವ್ರು 1981ನೇ ಬ್ಯಾಚ್ ಐಪಿಎಸ್ ಅಧಿಕಾರಿ ಆಗಿದ್ದರು. ಆಸ್ತಿ ವಿಚಾರಕ್ಕೆ ಈಗ ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನ ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಪ್ರದೇಶದಲ್ಲಿ, ಕರ್ನಾಟಕ ನಿವೃತ್ತ ಉನ್ನತ ಪೊಲೀಸ್ ಅಧಿಕಾರಿ ಆಗಿದ್ದ ಇದೇ ಓಂ ಪ್ರಕಾಶ್ ಅವರ ಮನೆ ಇತ್ತು.
ಹೆಂಡತಿ ಕೈಯಿಂದಲೇ ಕೊಲೆ ಆಯ್ತಾ?
ಆದರೆ ಇದೀಗ ನಿವೃತ್ತ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಅವರನ್ನ ಸ್ವತಃ ಅವರ ಹೆಂಡತಿ & ಕುಟುಂಬ ಸದಸ್ಯರೇ ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಈ ರೀತಿಯಾಗಿ ಹತ್ಯೆಯ ಮಾಡಿದ ಆರೋಪ ಕೂಡ ಮಾಡಲಾಗಿದೆ. ಪೊಲೀಸರು ಓಂ ಪ್ರಕಾಶ್ ಅವರ ಹೆಂಡತಿ & ಪುತ್ರಿ ಸೇರಿದಂತೆ ಮಗ ಹಾಗೂ ಸೊಸೆಯನ್ನು ಕೂಡ ತನಿಖೆಗೆ ಒಳಪಡಿಸಿದ್ದಾರೆ. ರಾಜ್ಯದ 38ನೇ ಡಿಜಿ ಮತ್ತು ಐಜಿಪಿ ಆಗಿದ್ದ ಓಂ ಪ್ರಕಾಶ್ ಅವರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ನಿವೃತ್ತ ಪೊಲೀಸ್ ಅಧಿಕಾರಿಯ ಭೀಕರ ಕೊಲೆ ವಿಚಾರ ತಿಳಿದ ಹಿನ್ನೆಲೆ ಸ್ಥಳಕ್ಕೆ ಈಗ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.












Click it and Unblock the Notifications