Karnataka Rains: ವಾಯುಭಾರ ಕುಸಿತ ತೀವ್ರ: ಕರ್ನಾಟಕಕ್ಕೆ 03 ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು, ಸೆಪ್ಟಂಬರ್ 06: ಸುಮಾರು ಮೂರು ರಾಜ್ಯಗಳಲ್ಲಿ ಅವಾಂತರಗಳ ಸೃಷ್ಟಿಗೆ ಕಾರಣವಾದ ಬಂಗಾಳಕೊಲ್ಲಿಯಲ್ಲಿನ 'ಆಸ್ನಾ' ಚಂಡಮಾರುತದ ತೀವ್ರತೆ ಮುಂದಿನ 48 ಗಂಟೆಗಳವರೆಗೂ ಮುಂದುವರೆಯಲಿದೆ. ಸಮುದ್ರ ಮಟ್ಟದಿಂದ 7.6 ಕಿಮೀ ವರೆಗೆ ವಿಸ್ತರಣೆ ಆಗಿದೆ. ಇದರ ಪ್ರಭಾವದಿಂದ ಕರ್ನಾಟಕ ರಾಜ್ಯದ ಹಲವು ಕಡೆಗಳಲ್ಲಿ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.

ಕರಾವಳಿ ಆಂಧ್ರಪ್ರದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತದ ಪ್ರಭಾವ ಹೆಚ್ಚಿದೆ. ಉತ್ತರ ಆಂಧ್ರ ಪ್ರದೇಶ-ದಕ್ಷಿಣ ಒಡಿಶಾ ಕರಾವಳಿಯ ಪಶ್ಚಿಮ ಕೇಂದ್ರ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಯ ಮೇಲೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ.

Karnataka Face Heavy Rain in Next 3 Days Due Cyclone Asna Effects

ಹವಾಮಾನ ವೈಪರಿತ್ಯ ಮುಂದಿನ 2 ದಿನಗಳಲ್ಲಿ ಇದು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಸಮುದ್ರ ಮಟ್ಟದಲ್ಲಿ ಮಾನ್ಸೂನ್ ಟ್ರಫ್ ಸುರತ್‌ಗಢ್, ರೋಹ್ಟಕ್, ಒರೈ, ಮಂಡ್ಲಾ ಮೂಲಕ ಉತ್ತರ ಆಂಧ್ರಪ್ರದೇಶ-ದಕ್ಷಿಣ ಒಡಿಶಾ ಕರಾವಳಿಯತ್ತ ಸಾಗಲಿದೆ.

ಇನ್ನೂ ವಾಯುವ್ಯ ಬಂಗಾಳ ಕೊಲ್ಲಿಯ ಮೇಲಿನ ಒತ್ತಡದ ಪ್ರದೇಶದ ಚಂಡಮಾರುತ ಬಿರುಗಾಳಿಯು ಬಂಗಾಳಕೊಲ್ಲಿ ಮಧ್ಯಭಾಗದ ಮೂಲಕ, ಆಗ್ನೇಯಕ್ಕೆ ಪೂರ್ವ ದಿಕ್ಕಿನಲ್ಲಿ ಚಲಿಸುತ್ತದೆ. ಇನ್ನೂ ಅರೇಬಿಯನ್ ಸಮುದ್ರ ಪಶ್ಚಿಮ ಭಾಗದ ಕಡೆಗೆ ಚಂಡಮಾರುತದ ಪರಿಚಲನೆ ಇದ್ದು ಅದು ಸಮುದ್ರ ಮಟ್ಟದಿಂದ 3.1 ಕಿಮೀ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಕರ್ನಾಟಕಕ್ಕೆ ಮುಂದಿನ ಮೂರು ಭಾರೀ ಮಳೆ ಮುನ್ಸೂಚನೆ

ವಾಯುಭಾರ ಕುಸಿತು ಪರಿಣಾಮ ಕರ್ನಾಟಕದಲ್ಲಿ ಮುಂದಿನ ಮೂರು ದಿನ ಜೋರು ಮಳೆ ಆಗಲಿದೆ. ಒಟ್ಟು ಐದು ದಿನ ಕರಾವಳಿಯ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬರಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Karnataka Face Heavy Rain in Next 3 Days Due Cyclone Asna Effects

ನಾಳೆ ಶನಿವಾರ ಸೆಪ್ಟಂಬರ್ 07ರಿಂದ ಮೂರು ದಿನ ಒಳನಾಡಿನಲ್ಲಿ ಮಳೆ ಆರ್ಭಟಿಸಲಿದೆ. ಬೆಳಗಾವಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಎರಡು ದಿನ ಹಾಗೂ ತುಮಕೂರು, ಕಲಬುಗರಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಒಂದು ದಿನ ಜೋರು ಮಳೆ ಆಗಲಿದೆ. ಇದರಿಂದಾಗಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮುಂದಿನ ಮೂರು ದಿನಗಳ ನಂತರ ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಇಳಿಕೆ ಆಗಲಿದೆ. ನಂತರ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಆಗಲಿದೆ ಎಂದು ವರದಿ ತಿಳಿಸಿದೆ. ಕಳೆದ ಒಂದು ದಿನದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಿದೆ ಎಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+